3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 10:15 PM IST
Singer Naveen sajju selected first final contestant for Kannada Big Boss season 6
Highlights

ಕನ್ನಡ ಕಿರುತೆರೆಯ ಬಹು ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 6ಕ್ಕೆ ತೆರೆ ಬೀಳಲು ಇನ್ನೂ 3 ವಾರಗಳು ಬಾಕಿ ಇವೆ. ಆಗಲೇ ಬಿಗ್ ಬಾಸ್ ಓರ್ವ ಸ್ಪರ್ಧಿಯನ್ನು ಫೈನಲ್ ಗೆ ಆಯ್ಕೆ ಮಾಡಿದೆ. ಹಾಗಾದ್ರೆ ಆದೃಷ್ಟಶಾಲಿ ಕಂಟೆಸ್ಟೆಂಟ್ ಯಾರು..?

ಬಿಗ್​ಬಾಸ್​ ಕನ್ನಡ ಸೀಜನ್-6ರ ಮೊದಲ ಫೈನಲಿಸ್ಟ್​ ಆಗಿ ಗಾಯಕ, ಸಂಗೀತ ನಿರ್ದೇಶಕ ನವೀನ್​ ಸಜ್ಜು ಆಯ್ಕೆಯಾಗಿದ್ದಾರೆ.

 ಬಿಗ್​ಬಾಸ್​ ಸೀಸನ್​ 6ಕ್ಕೆ ತೆರೆ ಬೀಳಲು ಇನ್ನೂ 3 ವಾರಗಳು ಬಾಕಿ ಇವೆ. ಹೀಗಿರುವಾಗಲೇ ಈ ಬಾರಿಯ ಮೊದಲ ಫೈನಲಿಸ್ಟ್​ನ ಆಯ್ಕೆ ಮಾಡಿರುವುದು ವಿಶೇಷ.

ಈ ವಾರ ಬಿಗ್​ಬಾಸ್​-6 ಮನೆಯಿಂದ ರಂಗಭೂಮಿ ಕಲಾವಿದೆ ಔಟ್: ಯಾರವರು?

ಸೀಸನ್​-6ರಲ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಸೇರಿದಂತೆ ಒಟ್ಟು 20 ಕಂಟೆಸ್ಟೆಂಟ್​ಗಳು ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ರು. ಸದ್ಯ ಬಿಗ್​ ಬಾಸ್​ ಮನೆಯಲ್ಲಿ 7 ಕಂಟೆಸ್ಟೆಂಟ್​ಗಳು ಮಾತ್ರ ಉಳಿದಿದ್ದಾರೆ. 

ಈ ನಡುವೆಯೇ ನವೀನ್​ ಸಜ್ಜು ಮೊದಲ ಫೈನಲಿಸ್ಟ್​ ಆಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಂದ್ರೆ ಹಿಂದಿನ ಸೀಸನ್​ಗಳಲ್ಲಿ 3 ವಾರ ಬಾಕಿ ಇರುವಾಗಲೇ ಯಾರೂ ಕೂಡಾ ಫಿನಾಲೆಗೆ ಆಯ್ಕೆಯಾಗಿರಲಿಲ್ಲ. 

ಆದ್ರೆ ಇದೀಗ ನವೀನ್​ ಸಜ್ಜು. ಫೈನಲ್​ಗೆ 3 ವಾರ ಬಾಕಿ ಇರುವ ಮೊದಲೇ ಫೈನಲಿಸ್ಟ್​ ಆಗಿ ಎಂಟ್ರಿ ಪಡೆದ ಮೊದಲ ಸ್ಪರ್ಧಿಯಾಗಿದ್ದಾರೆ.

ನವೀನ್​ ಸಜ್ಜು  ಫೈನಲ್ ಹೋಗಿದ್ದೇಗೆ..?

 3 ವಾರ ಬಾಕಿ ಇರುವಾಗಲೇ ನವೀನ್ ಸಜ್ಜು ಅವರನ್ನು ಫೈನಲ್​ಗೆ ಆಯ್ಕೆ ಮಾಡಿರುವುದಕ್ಕೆ ಒಂದು ಕಾರಣ ಇದೆ. ಅದೇನೆಂದರೆ  ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಲ್ಲಿ ನವೀನ್ ಗೆಲುವು ಸಾಧಿಸಿದ್ದಾರೆ. ಇದ್ರಿಂದ ಅವರಿಗೆ ಫೈನಲ್ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಆಯ್ಕೆ ಮಾಡಿದೆ.

ಟಾಸ್ಕ್ ನಲ್ಲಿ ಗೆದ್ದರೇ ಒಂದು ಬಂಪರ್ ಗಿಫ್ಟ್ ನೀಡುವುದಾಗಿ ಬಿಗ್ ಬಾಸ್ ಹೇಳಿತ್ತು. ಅದರಂತೆ ಟಾಸ್ ನಲ್ಲಿ ಗೆದ್ದ ನವೀನ್ ಗೆ ದೊಡ್ಡ ಉಡುಗೊರೆ ಸಿಕ್ಕಿದೆ.

loader