ಈ ವಾರ ಬಿಗ್​​ ಬಾಸ್​ ಮನೆಯಿಂದ ಅಕ್ಷತಾ ಪಾಂಡವಪುರ ಹೊರಬಿದ್ದಿದ್ದಾರೆ. ಬಿಗ್​ಬಾಸ್​ ಸೀಜನ್-6ರ 6ನೇ ಸ್ಪರ್ಧಿಯಾಗಿ​ ಅಕ್ಷತಾ ಬಿಗ್​​ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. 

ಮನೆಯೊಳಗೆ ಪ್ರವೇಶ ಮಾಡಿದ ದಿನದಿಂದ ಒಂದಲ್ಲ, ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಅಕ್ಷತಾ, ಸಹಸ್ಪರ್ಧಿ ರಾಕೇಶ್​ ಜೊತೆ ಹೆಚ್ಚು ಅನ್ಯುನ್ಯವಾಗಿರೋದು ಬಿಗ್​ಬಾಸ್​ ಮನೆಯ ಒಳಗೂ ಹೊರಗೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 

ಆಂಡಿ ಮುಖಕ್ಕೆ ಬಾರಿಸಿದ ಕವಿತಾ ತಾಯಿ! ಇದೇನಿದು?

ಅಲ್ಲದೇ ಬಿಗ್​ ಬಾಸ್​ ಮನೆಯಲ್ಲಿನ ಅವರ ವರ್ತನೆಗಳನ್ನ ನೋಡಿದ ಕೆಲ ವೀಕ್ಷಕರು, ಅಕ್ಷತಾರನ್ನ ಹೊರ ಹಾಕಬೇಕು ಎಂದು ಪ್ರೊಟೆಸ್ಟ್​ ಕೂಡ ನಡೆಸಿದ್ದರು. 

ಟಾಸ್ಕ್​ ಅಂತಾ ಬಂದಾಗ ಅದನ್ನ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳುತ್ತಿದ್ದ ಅಕ್ಷತಾ, ಇದೀಗ 84 ದಿನಗಳನ್ನು ಕಳೆದು  ಬಿಗ್​ಬಾಸ್​ ಮನೆಯಿಂದ ಹೊರ ನಡೆದಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಧನರಾಜ್‌ಗೆ ಮುತ್ತಿನ ಮಳೆ

ಯಾರು ಈ ಅಕ್ಷತಾ ಪಾಂಡವಪುರ..?
ಅಕ್ಷತಾ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದ ಹುಡುಗಿ. ಪ್ರತಿಭಾವಂತ ನಟಿಯಾದ ಅಕ್ಷತಾ ಈಗಾಗ್ಲೆ ಪಲ್ಲಟ ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿ ರಾಜ್ಯಪ್ರಶಸ್ತಿಯನ್ನ ಪಡೆದಿದ್ದಾರೆ. 

ಇಬೆಲ್ಲಾ ಶೀರ್ಷಿಕೆಯ ಮಹಿಳಾ ಪ್ರಧಾನ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಜೀರ್​ಜಿಂಬೆ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ. 

ಚಿತ್ರರಂಗಕ್ಕೆ ಕಾಲಿಡುವ ಮುನ್ನ ರಂಗಭೂಮಿ ಕಲಾವಿದೆಯಾಗಿದ್ದ ಅಕ್ಷತಾ, ಎಂಜಿ ರೋಡ್​ ಶಾಂತಿ, ಒಬ್ಬಳು, ಆ ಒಂದು ನೋಟ ಹೀಗೆ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ.