ಸಿನಿಮಾ ಇಂಡಸ್ಟ್ರಿಯಲ್ಲಿ ಗಾಸಿಪ್‌ಗಳಿಗೆ ಕೊರತೆ ಏನೂ ಇಲ್ಲ. ಶ್ರುತಿ ಹಾಸನ್ ತನ್ನ ಗೆಳೆಯ ಮೈಕಲ್ ಕೋರ್ಸೆಲ್ ಜತೆ ಓಡಾಡುತ್ತಿರುವ ಸಂಗತಿ ಗುಟ್ಟಾಗೇನು ಉಳಿದುಕೊಂಡಿಲ್ಲ.

ಮುಂಬೈ[ಫೆ.18] ಶ್ರುತಿ ಹಾಸನ್ ಮತ್ತು ಲಂಡನ್ ಮೂಲದ ರಂಗಕರ್ಮಿ ಮೈಕಲ್ ಕೋರ್ಸೆಲ್ ತಮ್ಮ ಗೆಳೆತನದ ವಿಚಾರವನ್ನು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರವಾನೆಯಾಗುತ್ತಿರುವ ಪೋಟೋಗಳು ಅವರಿಬ್ಬರ ಸ್ನೇಹದ ಕತೆ ಹೇಳುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರುತಿ ಹಾಟ್ ಫೋಟೋಗಳು ಅಬ್ಬಬ್ಬಾ! ವೈರಲ್ ಆಯ್ತು

ಮೈಕಲ್ ಕೋರ್ಸೆಲ್ ಜನುಮದಿನಕ್ಕೆ ಶುಭ ಕೋರಿರುವ ಶ್ರುತಿ ಶೇರ್ ಮಾಡಿರುವ ಚಿತ್ರ ಅನೇಕ ಪ್ರಶ್ನೆಗಳನ್ನುಎತ್ತಿದೆ. ಶ್ರುತಿ ಮತ್ತು ಮೈಕಲ್ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗೆ ಈ ವಿಚಾರ ಮತ್ತಷ್ಟು ಪುಷ್ಠಿ ನೀಡಿದೆ.

ಈ ಹಿಂದೆಯೂ ಶ್ರುತಿ ಒಮ್ಮೆ ಗೆಳೆಯನ ಪೋಟೋ ಶೇರ್ ಮಾಡಿದ್ದರು. ಇಸ್ಟಾಗ್ರಾಮ್ ಮೂಲಕ ತಮ್ಮ ಗೆಳಯನ ಮೈಕಲ್ ಕೋರ್ಸೆಲ್ ಅವರೊಂದಿಗೆ ಇರುವ ಫೋಟೋ ಶೇರ್ ಮಾಡಿದ್ದರು.

View post on Instagram