ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್! ಶಿವಣ್ಣ ಭುಜದ ನೋವಿನಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಲಂಡನ್ ಗೆ ತೆರಳಿದ್ದಾರೆ. ಜುಲೈ 06 ರಂದು ಲಂಡನ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ಅಪಘಾತ ಗಾಯಾಳುಗೆ ನೆರವು ನೀಡಿ ಮಾನವೀಯತೆ ಮೆರೆದ ದರ್ಶನ್ 

ಸುಮಾರು 20 ದಿನಗಳ ಕಾಲ ಲಂಡನ್ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಹುಟ್ಟುಹಬ್ಬದಂದು ಶಿವಣ್ಣ ಲಂಡನ್ ನಲ್ಲೇ ಇರಲಿದ್ದು, ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 

ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

ಶಿವರಾಜ್‌ ಕುಮಾರ್‌ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಷನ್‌ ಮತ್ತೆ ಒಂದಾಗಿದೆ. ಭಜರಂಗಿ, ವಜ್ರಕಾಯ ನಂತರ ಈಗ ಈ ಜೋಡಿ ‘ಭಜರಂಗಿ 2’ ಹೆಸರಿನ ಚಿತ್ರದೊಂದಿಗೆ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಲು ಮುಂದಾಗಿದೆ. ಆ ಚಿತ್ರಕ್ಕೆ ಜೂನ್‌ 20ರಿಂದ ಅಧಿಕೃತವಾಗಿ ಚಾಲನೆ ಸಿಗುತ್ತಿದೆ. ವಿಶೇಷ ಅಂದ್ರೆ ಟಗರು ಚಿತ್ರದ ಭರ್ಜರಿ ಸಕ್ಸಸ್‌ ನಂತರ ಶಿವರಾಜ್‌ ಕುಮಾರ್‌ ಹಾಗೂ ನಟಿ ಭಾವನಾ ಮತ್ತೆ ಇಲ್ಲಿ ಜತೆಯಾಗಿ ಅಭಿನಯಿಸುತ್ತಿದ್ದಾರೆ.