ಸಾಮಾಜಿಕ ಕೆಲಸ ಮಾಡೋದ್ರಲ್ಲಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಚಾಲೆಂಜಿಂಗ್ ಸ್ಟಾರ್ ಯಾವಾಗಲೂ ಮುಂದು. ಯಾರೇ ಕಷ್ಟ ಎಂದು ಬಂದರೂ ದರ್ಶನ್ ಆಗುವುದಿಲ್ಲ ಎನ್ನುವುದಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿಗೆ ಆರ್ಥಿಕ ನೆರವು ನೀಡುವ ಮೂಲಕ ದರ್ಶನ್ ಮಾನವೀಯತೆ ಮೆರೆದಿದ್ದಾರೆ. 

ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!

ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಕಿರಣ್ ಎನ್ನುವ ಬಾಲಕ ಸುಮಲತಾ ನಾಮಿನೇಶನ್ ರ್ಯಾಲಿಗೆ ಬಂದು ಹಿಂತಿರುಗುವಾಗ ಅಪಘಾತದಲ್ಲಿ ಗಾಯಗೊಂಡಿದ್ದರು. ಬಡ ಕುಟುಂಬವಾದ ಕಿರಣ್ ಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಇತ್ತು. ಇದನ್ನು ಮನಗಂಡ ದರ್ಶನ್   ಆಪ್ತ ಇಂಡುವಾಳು ಸಚ್ಚಿದಾನಂದ ಮೂಲಕ 1ಲಕ್ಷ ಆರ್ಥಿಕ ನೆರವು  ನೀಡಿದ್ದಾರೆ. ದರ್ಶನ್ ಈ ಸಾಮಾಜಿಕ ಕೆಲಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

"