ಬಹುನಿರೀಕ್ಷಿತ ವಿಲನ್ ಚಿತ್ರ ತೆರೆಗೆ ಬಂದು ಪ್ರದರ್ಶನವನ್ನು ಕಂಡಿದೆ. ಆದರೆ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಲ್ಟಿಫ್ಲೆಕ್ಸ್ ಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಕಾರಣ ಏನು?
ಬೆಂಗಳೂರು(ಅ.18) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ಇಮೇಜ್ ನ್ನು ಜೋಗಿ ಪ್ರೇಮ್ ಡ್ಯಾಮೇಜ್ ಮಾಡಿದ್ದಾರೆ.. ಹೀಗೆಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಹಾಯ್ದಿದ್ದಾರೆ. ಇದಕ್ಕೆ ಕಾರಣ ದಿ ವಿಲನ್ ಚಿತ್ರ!
ಪ್ರೇಮ್ ಕೇವಲ ಗಿಮಿಕ್ ಮತ್ತು ಬಿಲ್ಡಪ್ ಗಳಿಂದ ಇಬ್ಬರು ಹಿರೋಗಳ ಇಮೇಜ್ ಕೊಲೆ ಮಾಡಿದ್ದಾರೆ. ಚಿತ್ರದಲ್ಲಿ ಹೇಳಿಕೊಳ್ಳುವಂಥದ್ದೂ ಏನು ಇಲ್ಲ. ಇದು ಬರಿ ಸಮಯ ವ್ಯರ್ಥ ಅಷ್ಟೆ ಎಂದೆಲ್ಲಾ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಯಾರು ವಿಲನ್? ಉತ್ತರ ಸಿಕ್ತಾ,, ಅಭಿಮಾನಿಗಳ ಉಘೆ..ಉಘೆ...
ಚಿತ್ರದ ಹೆಸರು ಇಟ್ಟುಕೊಂಡು ಮಲ್ಟಿಫ್ಲೆಕ್ಸ್ ಗಳು ಸುಲಿಗೆ ಮಾಡುತ್ತಿವೆ. ಹೆಚ್ಚಿನ ಶೋಗಳನ್ನು ಕನ್ನಡ ಚಿತ್ರಕ್ಕೆ ನೀಡಿಲ್ಲ ಎಂಬ ಅಭಿಪ್ರಾಯ ಇನ್ನೊಂದು ಕಡೆಯಿಂದ ಬಂದಿದೆ. ಹಾಗಾದರೆ ಅಭಿಮಾನಿಗಳ ಆಕ್ರೊಶ ಹೇಗಿದೆ?
