ಬೆಂಗಳೂರು(ಅ.18) ಬಹುನಿರೀಕ್ಷಿತ  ಈ ವರ್ಷದ ಬಿಗ್ ಬಜೆಟ್ ಚಿತ್ರ ದಿ ವಿಲನ್ ತೆರೆಗೆ ಬಂದಿದೆ. ಮುಂಜಾನೆ ಶೋ ವೀಕ್ಷಣೆ ಮಾಡಿದ ಸಹಸ್ರಾರು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.

ಚಿತ್ರ ಈ ವರ್ಷದ ಟಾಪ್ ಸಿನಿಮಾಗಳ ಪಟ್ಟಿಗೆ ವಿಲನ್ ಸೇರುತ್ತದೆ. ಟಗರು ಚಿತ್ರದಂತೆ ಇದು ಮುನ್ನುಗ್ಗಲಿದೆ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.  ನೂರಾರು ಚಿತ್ರಮಂದಿರಗಳ ಶೋ ಫುಲ್ ಆಗಿದೆ.

ದಿ ವಿಲನ್: ಆರಂಭದಿಂದ ಅಂತ್ಯದವರೆಗೆ?

ಕಿಚ್ಚ ಸುದೀಪ್ ಮತ್ತು ಶಿವಣ್ಣ ಎಂಟ್ರಿ ಸೂಪರಾಗಿದೆ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ. ಇನ್ನೊಂದುನ ಕಡೆ  ಚಿತ್ರದ ಹೆಸರಿನಲ್ಲಿ ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳು ಸುಲಿಗೆ ಮಾಡುತ್ತಿವೆ ಎಂಬ ಆರೋಪ ಸಹ ಕೇಳಿಬಂದಿದೆ. ಕೆಲವರು ಚಿತ್ರ ಪಕ್ಕಾ ಟೈಮ್ ವೇಸ್ಟ್ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ.