ಕನ್ನಡದ ನಟಿ ಶ್ರದ್ಧಾ ಶ್ರೀನಾಥ್‌, ಈಗ ಪರಭಾಷೆ ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಸೇರಿ ಪರಭಾಷೆಗಳಲ್ಲೇ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಬುಕ್‌ ಆಗುತ್ತಿದ್ದಾರೆ. ಆದರೂ, ಬಹುದಿನಗಳ ನಂತರವೀಗ ‘ರುಸ್ತುಂ’ ಚಿತ್ರದ ಟ್ರೇಲರ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ರೆಡಿ ಆಗಿದ್ದಾರೆ.

ಶಿವರಾಜ್‌ ಕುಮಾರ್‌ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿರುವ ‘ರುಸ್ತುಂ’ ಚಿತ್ರ ದ ಟ್ರೇಲರ್‌ ಏಪ್ರಿಲ್‌ 14ಕ್ಕೆ ಬಿಡುಗಡೆ ಆಗುತ್ತಿದೆ. ಆನಂದ್‌ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಟ್ರೇಲರ್‌ ಲಾಂಚ್‌ ಆಗುತ್ತಿದೆ. ಈ ಚಿತ್ರದ ಮೇಲೆ ಶ್ರದ್ಧಾ ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ವಿಭಿನ್ನ ಬಗೆಯ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರಂತೆ.

‘ಕನ್ನಡವೇ ನನ್ನ ಮೊದಲ ಆದ್ಯತೆ. ನನಗೆ ಇಷ್ಟವಾಗುವ ಪಾತ್ರಗಳು ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟುಅವಕಾಶಗಳನ್ನು ತಿರಸ್ಕರಿಸಿದ್ದೇನೆ. ‘ರುಸ್ತುಂ’ ಬಿಡುಗಡೆಯಾದರೆ, ನನಗೆ ಬರುವ ಪಾತ್ರಗಳಲ್ಲೂ ಭಿನ್ನತೆ ಕಾಣುವ ನಿರೀಕ್ಷೆಯಿದೆ. ಆಗ ನಾನಿಲ್ಲಿ ಬ್ಯುಸಿ ಆಗುವುದು ಖಚಿತ’ಎನ್ನುತ್ತಾರೆ ಶ್ರದ್ಧಾ.

ರುಸ್ತುಂ ರಗಡ್ ಕಾಪ್ ಶಿವರಾಜ್‌ಕುಮಾರ್ ಸಂದರ್ಶನ