ಕನ್ನಡ ಸಿನಿಮಾಗಳನ್ನು ಕನ್ನಡಿಗರೇ ಉಳಿಸಿಕೊಳ್ಳಬೇಕಿದೆ ಎಂದು ನಾಯಕರು, ನಿರ್ದೇಶಕರು ಆಗಾಗ ಹೇಳುತ್ತಿರುವುದನ್ನು ಕೇಳಿದ್ದೇವೆ. ದಯವಿಟ್ಟು ಪೈರಸಿ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಮತ್ತೆ ಅದೇ ಚಾಳಿ ಮುಂದುವದಿದೆ. 

ಬೆಂಗಳೂರು[ನ.13]  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ' ದಿ ವಿಲನ್ ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗುತ್ತಿದ್ದ ಸಂದರ್ಭದಲ್ಲಿಯೇ ಲೀಕ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾವನ್ನು ಫೇಸ್ ಬುಕ್ ಲೈವ್ ನಲ್ಲಿ ಹರಿಬಿಡಲಾಗಿತ್ತು. ಈಗ ವಿಲನ್ ಸರದಿ.

ಕನ್ನಡಿಗರನ್ನು ಕೆರಳಿಸಿದ್ದ ವಿಲನ್ ನಾಯಕಿ ಟ್ವೀಟ್, ಅಂಥಾದ್ದೇನಿತ್ತು?

ಸಿನಿಮಾ ಬಿಡುಗಡೆಯಾಗಿ ಇನ್ನೂ ಒಂದು ಕೂಡ ಆಗಿಲ್ಲ. ಅಷ್ಟರಲ್ಲೇ ದಿ ವಿಲನ್ ಸಿನಿಮಾಗೆ ಫೈರಸಿ ಕಾಟ ಶುರುವಾಗಿದೆ. ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ದಿ ವಿಲನ್ ಸಿನಿಮಾ ಲೀಕ್ ಆಗಿದೆ ಎಂಬ ಮಾತು ಕೇಳಿ ಬಂದಿದೆ.