ಈ ವಿಲನ್ ಚಿತ್ರ ಒಂದು ಕಡೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿ ಮುನ್ನುಗ್ಗುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇರುವ ಮತ್ತು ಬರುತ್ತಿರುವ ಸುದ್ದಿಗಳಿಗೆ ಮುಕ್ತಾಯ ಇಲ್ಲ. ವಿಲನ್ ಚಿತ್ರದಲ್ಲಿ ಇಂಗ್ಲೆಂಡ್ ಬೆಡಗಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಆದರೆ ಜಾಕ್ಸನ್ ಮಾಡಿರುವ ಟ್ವೀಟ್ ಒಂದು ಸುದ್ದಿ ಮಾಡಿದೆ.
ಬೆಂಗಳೂರು[ಅ.19] ಇದು ಕಣ್ಣು ತಪ್ಪಿನಿಂದ ಆಗಿದ್ದೋ ಗೊತ್ತಿಲ್ಲ. ಆದರೆ ವರ್ಷಗಳ ಕಾಲ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಜಾಕ್ಸನ್ ಗೆ ಕನ್ನಡ ಚಿತ್ರರಂಗಕ್ಕೆ ಎನೆಂದು ಕರೆಯುತ್ತಾರೆ ಅಂಥ ಗೊತ್ತಿಲ್ಲವೆ?
ವಿಲನ್ ಬಿಡುಗಡೆ ನಂತರ ಸಂಭ್ರಮ ಹಂಚಿಕೊಳ್ಳುವ ಭರದಲ್ಲಿ ಮಾಡಿದ್ದ ಟ್ವೀಟ್ ನಲ್ಲಿ ನಿರ್ದೇಶಕ ಪ್ರೇಮ್ ಗೆ ಧನ್ಯವಾದ ಹೇಳಿದ್ದರು. ಜತೆಗೆ ಸ್ಯಾಂಡಲ್ ವುಡ್ ಎನ್ನುವ ಬದಲು ಕಾಲಿವುಡ್ ಎಂದು ಬರೆದಿದ್ದರು.
ಇದು ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಅಭಿಮಾನಿಗಳನ್ನು ಕೆರಳಿಸಿತ್ತು. ಆಮಿ ನಟಿ ಆಮಿ ಜಾಕ್ಸನ್ 'ದಿ ವಿಲನ್' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಈ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಅವರು 'ಸ್ಯಾಂಡಲ್ ವುಡ್' ಎಂದು ಬರೆಯುವ ಬದಲು 'ಕಾಲಿವುಡ್' ಎಂದು ಬರೆದುಕೊಂಡಿದ್ದಕ್ಕೆ ಕನ್ನಡಾಭಿಮಾನಿಗಳು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.

