ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಮುಖದಲ್ಲಿ ಮಂದಹಾಸ ಮೂಡಿದೆ. ‘ಐ ಲವ್ ಯೂ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿರುವುದೇ ಅದಕ್ಕೆ ಕಾರಣ. ಚಿತ್ರ ತೆರೆ ಕಂಡು ಇಲ್ಲಿಗೆ ಹೆಚ್ಚು ಕಡಿಮೆ ಎರಡು ವಾರ.

ಐ ಲವ್ ಯು ‘ಹಾಟ್’ ರಹಸ್ಯ ಬಿಚ್ಚಿಟ್ಟ ಉಪೇಂದ್ರ

ಕನ್ನಡ ಮತ್ತು ತೆಲುಗು ವರ್ಷನ್ ಎರಡು ಸೇರಿ ಇದುವರೆಗಿನ ಒಟ್ಟು ಕಲೆಕ್ಷನ್ ರೂ. 22 ಕೋಟಿ ಆಗಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಅಷ್ಟೇ ಅಲ್ಲ, ಈ ವಾರದಿಂದಲೂ ಮತ್ತೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹಾಗೆಯೇ ಅಮೆರಿಕದಲ್ಲೂ ಚಿತ್ರ ಬಿಡುಗಡೆ ಆಗುತ್ತಿದೆ. ಸಹಜವಾಗಿಯೇ ಇದು ನಿರ್ಮಾಪಕ ಕಮ್ ನಿರ್ದೇಶಕ ಚಂದ್ರು ಅವರಿಗೆ ಬಂಪರ್ ಲಾಟರಿ ಹೊಡೆದಂತೆಯೇ ಆಗಿದೆ.

ರಿಲೀಸ್ ದಿನದಿಂದಲೇ ಚಿತ್ರಕ್ಕೆ ಭರ್ಜರಿ ಎಂಟ್ರಿ ಸಿಕ್ಕರೂ ಇದುವರೆಗಿನ ಚಿತ್ರದ ಕಲೆಕ್ಷನ್ ಎಷ್ಟು, ಏನು ಎನ್ನುವ ಬಗ್ಗೆ ನಿರ್ದೇಶಕ ಕಮ್ ನಿರ್ಮಾಪಕ ಆರ್. ಚಂದ್ರುಇದುವರೆಗೂ ಅಧಿಕೃತವಾಗಿ ಏನನ್ನು ಹೇಳಿಲ್ಲ. ‘ಅಧಿಕೃತವಾಗಿ ಇಷ್ಟೇ ಅಂತ ಹೇಳಲಾಗದಿದ್ದರೂ, ಕನ್ನಡ ಮತ್ತು ತೆಲುಗು ವರ್ಷನ್ ಎರಡು ಸೇರಿ ಇದುವರೆಗೂ ಅಂದಾಜು ರೂ.22 ಕೋಟಿ ಕಲೆಕ್ಷನ್ ಆಗಿದೆ.

ಈ ವಾರದ ಅಂತ್ಯಕ್ಕೆ ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.ಅಲ್ಲಿಗೆ ನಿರ್ದೇಶಕ ಆರ್. ಚಂದ್ರು ನಿರ್ಮಾಪಕರಾಗಿ ದೊಡ್ಡ ಯಶಸ್ಸು ಸಾಧಿಸಲಿದ್ದಾರೆ. ಬಿಗ್‌ಬಜೆಟ್ ಸಿನಿಮಾ ಮಾಡುವ ಅವರ ಸಾಹಸಕ್ಕೆ ಇದು ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ’ ಎನ್ನುತ್ತಿವೆ ಅವರ ಆಪ್ತ ಬಳಗ.