ಬಿಗ್ ಬಾಸ್ ಸೀಸನ್ ಶುರುವಾಗಿದೆ. ತೆಲುಗು, ತಮಿಳಿನಲ್ಲಿ ಶುರುವಾಗಿ ಆಗಿದೆ.

ದರ್ಶನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಕನ್ನಡದ ನಟಿಯೊಬ್ಬರು ತಮಿಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದುಕೊಂಡಿದ್ದಾರೆ.  ದರ್ಶನ್ ಜೊತೆ ‘ಧ್ರುವ’ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ಶೆರೀನ್ ಈಗ ಬಿಗ್ ಬಾಸ್ ಮನೆಯ ಸ್ಪರ್ಧಿ. ಜೊತೆಗೆ ದರ್ಶನ್ 25 ನೇ ಚಿತ್ರ ಭೂಪತಿ ಸಿನಿಮಾದಲ್ಲೂ ನಟಿಸಿದ್ದಾರೆ. 

ಶೆರೀನ್ ಮೂಲತಃ ಬೆಂಗಳೂರಿನವರು. ಇಲ್ಲಿಯೇ ಹುಟ್ಟಿ ಬೆಳೆದ ಹುಡುಗಿ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ಧ್ರುವ, ಭೂಪತಿ, ಸಿಹಿಗಾಳಿ ಮತ್ತು ಎಕೆ 57 ಸಿನಿಮಾಗಳಲ್ಲೂ ನಟಿಸಿದ್ದಾರೆ.