ಬೆಂಗಳೂರು (ಆ. 10): ಆರ್ ಜೆ ಪ್ರದೀಪ್ ರ ಸಖತ್ ಸ್ಟುಡಿಯೋ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗ ಈ ತಂಡ ಹೊಸ ವೆಬ್ ಸೀರೀಸ್ ಆರಂಭಿಸುತ್ತಿದೆ. 

ಆರ್ ಜೆ ಪ್ರದೀಪ್ ಅವರ ಸಖತ್ ಸ್ಟುಡಿಯೋ ಹಾಗೂ ಶಿವರಾಜ್ ಕುಮಾರ್ ಇತ್ತೀಚಿಗೆ ಆರಂಭಿಸಿರುವ ಶ್ರೀಮುತ್ತು ಸಿನಿ ಸರ್ವೀಸ್ ಎರಡೂ ಸೇರಿ ಇದನ್ನು ನಿರ್ಮಾಣ ಮಾಡುತ್ತಿದೆ. ಈ ವೆಬ್ ಸೀರೀಸ್ ಗೆ ಹೇಟ್ ಯು ರೋಮಿಯೋ ಎಂದು ಹೆಸರಿಡಲಾಗಿದೆ. 

ಕಿರಿಕ್ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಅರವಿಂದ್ ಅಯ್ಯರ್ ಈ ವೆಬ್ ಸೀರೀಸ್ ನಲ್ಲಿ ಅಭಿನಯಿಸಲಿದ್ದಾರೆ. ಇವರಿಗೆ ದಿಶಾ ಮದನ್ ಸಾಥ್ ಕೊಡಲಿದ್ದಾರೆ. ಇವರಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಪ್ರತಿಭೆಗಳು. 

ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಈ ವೆಬ್ ಸೀರೀಸ್ ಮೂಲಕ ಸ್ಯಾಂಡಲ್ಲ್‌ವುಡ್ ಗೆ ಕಾಲಿಡುತ್ತಿದ್ದಾರೆ. ಇವರೇ ಈ ವೆಬ್ ಸೀರೀಸ್ ನ ಪ್ರೊಡ್ಯೂಸರ್. 


ಹೇಟ್ ಯು ರೋಮಿಯೋ ವೆಬ್ ಸೀರೀಸ್ ಸೂಟಿಂಗ್ ಶೇ. 90 ರಷ್ಡು ಭಾಗ ವಿಯೆಟ್ನಾಂನಲ್ಲಿ ನಡೆಯಲಿದೆ.