45ನೇ ವಯಸ್ಸಿಗೆ ಮಗುವನ್ನು ಪಡೆಯುವುದಕ್ಕೆ ಗಟ್ಸ್ ಬೇಕು ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಿಳಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್‌ ಕುಂದ್ರಾ ಇತ್ತೀಚೆಗಷ್ಟೇ ಸರೋಗಸಿ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದರು.

ಮಾಸ್ಕ್‌, ಗ್ಲೌಸ್ ಹಾಕಿ ಮುಂಜಾಗೃತಾ ಕ್ರಮಗಳೊಂದಿಗೆ ಮಗಳು ಸಮೀಶಾಳನ್ನು ತರಲು ನಾನು ವಿಮಾನದಲ್ಲಿ ಹೋಗಿದ್ದೆ. ಸ್ವಲ್ಪ ದಿನದ ನಂತರವೇ ದೇಶಾದ್ಯಂತ ಲಾಕ್‌ಡೌನ್ ಮಾಡಲಾಯಿತು. ನಾನು ಈ ಸಂದರ್ಭದಲ್ಲಿ ನನ್ನ ಮಗಳ ಜೊತೆಗಿರುವುದೇ ಸಂತಸದ ವಿಚಾರ ಎಂದಿದ್ದಾರೆ.

ಶಿಲ್ಪಾ ಶೆಟ್ಟಿ, ರಾಜ್ ಮನೆಗೆ ಹೊಸ ಅತಿಥಿ; ಸಂತಸ ಹಂಚಿಕೊಂಡ ದಂಪತಿ!

ರಷ್ಟ್ರಾಧ್ಯಂತ ಲಾಕ್‌ಡೌನ್ ಮಾಡುವ ಮುನ್ನ ಫೆಬ್ರವರಿ 21ರಂದು ದಂಪತಿ ತಮ್ಮ ಮಗಳ ಜನನವನ್ನು ತಿಳಿಸಿದ್ದರು. ಪುಟ್ಟ ದೇವತೆ ಸಮಿಶಾ ಶೆಟ್ಟಿ ಕುಂದ್ರಾ ನಮ್ಮ ಕುಟುಂಬಕ್ಕೆ ಬಂದಿದ್ದಾಳೆ ಎಂದು ತಿಳಿಸಲು ಖುಷಿಯಾಗುತ್ತಿದೆ ಎಂದು ಶಿಲ್ಪಾ ಶೆಟ್ಟಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಪತ್ನಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಪತಿ ರಾಜ್‌ಕುಂದ್ರಾ

ನನ್ನ ಮಕ್ಕಳು ಹೇಗಿದ್ದಾರೆ ಎಂದು ಜನರು ಕೇಳಿದಾಗ ಅದು ವಾಸ್ತವಿಕವಾಗಿದೆ ಎನಿಸುತ್ತದೆ. 45 ನೇ ವಯಸ್ಸಿನಲ್ಲಿ, ನವಜಾತ ಶಿಶುವನ್ನು ಹೊಂದಲು ಧೈರ್ಯ ಬೇಕು. ಸುಮಾರು ಎರಡು ವಾರಗಳಲ್ಲಿ ನಾನು ಪ್ರಸವಾನಂತರದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ.