Asianet Suvarna News Asianet Suvarna News

ಬಿಗ್​ಬಾಸ್​​ ನಮ್ರತಾ ಗೌಡ್​ ಹುಟ್ಟುಹಬ್ಬದ ಸಡಗರ ಹೇಗಿತ್ತು? ವಿಡಿಯೋದಲ್ಲಿದೆ ಫುಲ್​ ಡಿಟೇಲ್ಸ್​


ಬಿಗ್​ಬಾಸ್​​ ಖ್ಯಾತಿಯ ನಮ್ರತಾ ಗೌಡ ಅವರು ಈಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದರ ಸಂಪೂರ್ಣ ವಿಡಿಯೋ ಶೇರ್​ ಮಾಡಿದ್ದಾರೆ.
 

Namratha Gowda of Bigg Boss fame recently celebrated her birthday and shared the entire video suc
Author
First Published Apr 26, 2024, 5:11 PM IST | Last Updated Apr 26, 2024, 5:11 PM IST

ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ಇದೇ ಏಪ್ರಿಲ್​ 15ರಂದು 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬಿಗ್​ಬಾಸ್​ ಫ್ರೆಂಡ್ಸ್​ ಸೇರಿದಂತೆ ವಿವಿಧ ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಆಯೋಜಿಸಿದ್ದರು ಇವರು. ಇದರ ವಿಡಿಯೋ ಅನ್ನು ಇದೀಗ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ನಟಿ ಅಪ್​ಲೋಡ್​ ಮಾಡಿದ್ದಾರೆ. ಸಂಪೂರ್ಣ ಹುಟ್ಟುಹಬ್ಬದ ಸಂಭ್ರಮವನ್ನು ಈ ವಿಡಿಯೋದಲ್ಲಿ ನೋಡಬಹುದು. 

ಅಂದಹಾಗೆ ನಟಿ ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವವರು.  ಇವರು 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರಿಗೆ ಈಗ 31 ವರ್ಷ ವಯಸ್ಸು.  2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಮನೆ ಮಾತಾದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇವರಿಗೆ ವಿಶೇಷ ಹೆಸರು ತಂದುಕೊಟ್ಟದ್ದು ಬಿಗ್​ಬಾಸ್​ ಸೀಸನ್​ 10. ಅಂತಿಮ ಕ್ಷಣದವರೆಗೂ ತೀವ್ರ ಪೈಪೋಟಿ ನೀಡಿದ ಇವರು ಕೊನೆಗೆ ಎಲಿಮಿನೇಷನ್​ ಆದರು. 

ಐಶ್ವರ್ಯ, ಅಮಿತಾಭ್​ ನಡುವೆ ಕೊಹ್ಲಿಯನ್ನೂ ಎಳೆತಂದ ರಾಹುಲ್​ ಗಾಂಧಿ: ಅಭಿಮಾನಿಗಳಿಂದ ಭಾರಿ ಆಕ್ರೋಶ

ನಮ್ರತಾ ಗೌಡ ಜನ್ಮ ದಿನಕ್ಕೆ ವಿನಯ್ ಗೌಡ ಪತ್ನಿ ಜೊತೆಗೆ ಆಗಮಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಅವರನ್ನ ಸಹೋದರಿ ರೀತಿಯಲ್ಲಿಯೇ ನೋಡಿಕೊಂಡಿದ್ದ ವಿನಯ್ ಗೌಡ, ಇಲ್ಲಿ ಸಹೋದರಿಗೆ ಮನದುಂಬಿ ಜನ್ಮ ದಿನದ ಶುಭಾಶಯ ತಿಳಿಸಿದ್ದರು. ಹುಟ್ಟುಹಬ್ಬದ ದಿನ ಭರ್ಜರಿ ಕಾರು ಖರೀದಿಸಿ ಅದರ ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದರು.  ಹಿಂದೊಮ್ಮೆ ಸಂದರ್ಶನದಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿದ್ದ ನಮ್ರತಾ,  ನಾನು ತುಂಬಾ ಕೂಲ್​ ಆಗಿ ಇರುವವಳು. ಎಲ್ಲರ ಮಾತನ್ನು ಕೂಲ್​ ಆಗಿ ಕೇಳಿಸಿಕೊಂಡು ಪ್ರತಿಕ್ರಿಯೆ ಮಾಡುತ್ತೇನೆ. ನನ್ನಿಂದ ತಾಳ್ಮೆಯನ್ನು  ಎಲ್ಲರೂ ಕಲಿಯಬಹುದು ಎನ್ನಿಸುತ್ತದೆ. ಅದೇ ರೀತಿ ಜೋರಾಗಿ ಕಿರುಚುವ ನನ್ನ ಗುಣ ಯಾರೂ ಕಲಿಯುವುದು ಬೇಡ ಎಂದಿದ್ದರು. 


ಅಭಿಮಾನಿಗಳಿಂದ ನಮ್ಮು ಅಂತಲೇ ಕರೆಸಿಕೊಳ್ಳುವ ನಮ್ರತಾ ಅವರಿಗೆ ಇದಾಗಲೇ 31 ವರ್ಷ ವಯಸ್ಸಾಗಿರುವ ಕಾರಣ ಮದುವೆಯ ಬಗ್ಗೆ ಸಾಕಷ್ಟು ಮಂದಿ ಕೇಳುತ್ತಲೇ ಇರುತ್ತಾರೆ. ಈ ಕುರಿತು ಇವರು ಈಚೆಗೆ ಅನಿಸಿಕೆ ಹಂಚಿಕೊಂಡಿದ್ದರು.  ಸದ್ಯಕ್ಕಂತೂ ಅವರಿಗೆ ಮದುವೆ ಆಗುವ ಯಾವ ಆಲೋಚನೆಯೂ ಇಲ್ಲವಂತೆ. "ಸದ್ಯಕ್ಕೆ ನಾನು ಮದುವೆ ಆಗುವ ಪ್ಲ್ಯಾನ್ ಇಲ್ಲ. ಇನ್ನೂ ಎರಡು ವರ್ಷ ನಾನು ಕೆಲಸ ಮಾಡಬೇಕು. ಕೆಲಸ ಮಾಡುವ ಸಮಯದಲ್ಲಿ ಮದುವೆ ಬೇಡ ಎಂಬುದು ನನ್ನ ಪಾಲಿಸಿ. ಒಂದುವೇಳೆ ಹುಡುಗ ಸಿಕ್ಕಿದರೆ ನೋಡೋಣ.. ಅಂದಹಾಗೆ, ಹುಡುಗ ಕನ್ನಡದವನಾಗಿದ್ದರೆ ಸಾಕು ಮತ್ತು ತುಂಬುಕುಟುಂಬದ ಹುಡುಗನೇ ಸಿಗಬೇಕು" ಎಂದಿದ್ದರು ಅವರು. ಮುಂದಿನ ದಿನಗಳಲ್ಲಿ  ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಹೆಜ್ಜೆ ಇಡಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.  

ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ಗೆ ಇದೇನಾಗಿದೆ? ವೈರಲ್​ ವಿಡಿಯೋ ನೋಡಿ ದಂಗಾದ ಅಭಿಮಾನಿಗಳು
 

Latest Videos
Follow Us:
Download App:
  • android
  • ios