ಅಂತಾರಾಷ್ಟ್ರೀಯ ಯೋಗ ದಿನ 2026 ಹತ್ತಿರ ಬರ್ತಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್‌ಗೆ ಯಾವ ಯೋಗ ಮಾಡ್ತಾರೆ? ಅವರ ಫಿಟ್ನೆಸ್ ಗುಟ್ಟೇನು? ಇಲ್ಲಿದೆ ಮಾಹಿತಿ.
ಅಂತಾರಾಷ್ಟ್ರೀಯ ಯೋಗ ದಿನ ಈ ಹಿನ್ನೆಲೆಯಲ್ಲಿ ಬಾಲಿವುಡ್‌ನ ಫಿಟ್ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ ಬಗ್ಗೆ ಮಾತಾಡೋಣ. 51 ವರ್ಷವಾದ್ರೂ ಶಿಲ್ಪಾ ಇಂದಿಗೂ ಯಂಗ್ ಆಗಿ ಕಾಣ್ತಾರೆ. ಅವರನ್ನ ನೋಡಿದ್ರೆ ವಯಸ್ಸು ಗೊತ್ತಾಗೋದೇ ಇಲ್ಲ. ತಮ್ಮ ಫಿಟ್ನೆಸ್‌ನ ಅತಿ ದೊಡ್ಡ ಸೀಕ್ರೆಟ್ ಅಂದ್ರೆ ಅದು ಯೋಗ ಅಂತ ಶಿಲ್ಪಾ ಶೆಟ್ಟಿ ಅವರೇ ಹಲವು ಬಾರಿ ಹೇಳಿದ್ದಾರೆ. ಯೋಗ ಕೇವಲ ದೇಹವನ್ನು ಫಿಟ್ ಆಗಿಡೋದಲ್ಲ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತೆ. ಇದೇ ಕಾರಣಕ್ಕೆ ಶಿಲ್ಪಾ ಎಷ್ಟೇ ಬ್ಯುಸಿ ಇದ್ರೂ ಪ್ರತಿದಿನ ಯೋಗಕ್ಕೆ ಸಮಯ ಮೀಸಲಿಡ್ತಾರೆ. ಹಾಗಾದ್ರೆ, ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್‌ಗಾಗಿ ಯಾವ 5 ಯೋಗಾಸನಗಳನ್ನು ಮಾಡ್ತಾರೆ ಅಂತ ನೋಡೋಣ ಬನ್ನಿ...
ಶಿಲ್ಪಾ ಶೆಟ್ಟಿಯ ಫೇವರಿಟ್ ಯೋಗಾಸನಗಳು ಯಾವುವು?
ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್‌ಗೆ ಸಖತ್ ಫೇಮಸ್. ಅವರು ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯೋಗ ಮಾಡುವ ವಿಡಿಯೋಗಳನ್ನು ಶೇರ್ ಮಾಡ್ತಾರೆ. ಜೊತೆಗೆ ಫಿಟ್ ಆಗಿರಲು ಸಲಹೆಗಳನ್ನೂ ನೀಡ್ತಾರೆ. ಬನ್ನಿ, ಅವರ 5 ಫೇವರಿಟ್ ಯೋಗಾಸನಗಳ ಬಗ್ಗೆ ತಿಳಿದುಕೊಳ್ಳೋಣ...
1. ವೃಕ್ಷಾಸನ
ಶಿಲ್ಪಾ ಶೆಟ್ಟಿ ತಮ್ಮ ದಿನವನ್ನು ಹೆಚ್ಚಾಗಿ ವೃಕ್ಷಾಸನದಿಂದಲೇ ಶುರು ಮಾಡ್ತಾರೆ. ಈ ಆಸನ ಪಾದ, ಸೊಂಟ ಮತ್ತು ಕಾಲುಗಳನ್ನು ಬಲಪಡಿಸುತ್ತೆ. ಜೊತೆಗೆ ದೇಹದ ಸಮತೋಲನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತೆ. 50 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಯೂ ಈ ಆಸನ ಮಾಡಬೇಕು ಅನ್ನೋದು ಶಿಲ್ಪಾ ಅಭಿಪ್ರಾಯ.

2. ವೀರಭದ್ರಾಸನ
ವೀರಭದ್ರಾಸನ ಶಿಲ್ಪಾ ಶೆಟ್ಟಿ ಅವರ ಯೋಗಾ ರೂಟಿನ್‌ನ ಪ್ರಮುಖ ಭಾಗ. ಈ ಯೋಗಾಸನ ತೊಡೆ, ಸೊಂಟ ಮತ್ತು ಭುಜದ ಸ್ನಾಯುಗಳನ್ನು ಸ್ಟ್ರಾಂಗ್ ಮಾಡುತ್ತೆ. ಇದಲ್ಲದೆ, ಗಮನ ಮತ್ತು ದೇಹದ ಭಂಗಿಯನ್ನು (body posture) ಸುಧಾರಿಸುತ್ತೆ. ಇದೇ ಯೋಗಾಸನದಿಂದ ಶಿಲ್ಪಾ ತಮ್ಮ ಬಾಡಿ ಪೋಸ್ಚರ್ ಅನ್ನು ಕಾಪಾಡಿಕೊಂಡಿದ್ದಾರೆ.
3. ನಟರಾಜಾಸನ
ನಟರಾಜಾಸನವು ದೇಹದ ಸಮತೋಲನ ಕಾಪಾಡಿಕೊಳ್ಳಲು ಒಂದು ಅದ್ಭುತ ಯೋಗಾಸನ. ಈ ಭಂಗಿಯು ದೇಹಕ್ಕೆ ಫ್ಲೆಕ್ಸಿಬಿಲಿಟಿ ತರುತ್ತೆ, ಭುಜ ಮತ್ತು ಎದೆಯ ಭಾಗವನ್ನು ಹಿಗ್ಗಿಸುತ್ತೆ ಹಾಗೂ ಬೆನ್ನುಮೂಳೆಯನ್ನು ಬಲಪಡಿಸುತ್ತೆ. ಇದು ಶಿಲ್ಪಾ ಶೆಟ್ಟಿಯವರ ಫೇವರಿಟ್ ಆಸನವಾಗಿದ್ದು, ಅವರು ಇದನ್ನು ತಪ್ಪದೇ ಮಾಡ್ತಾರೆ.
4. ಊರ್ಧ್ವ ಮುಖ ಪಾಸಾಸನ
ಶಿಲ್ಪಾ ಶೆಟ್ಟಿ ಪೂರ್ತಿ ದೇಹವನ್ನು ಸ್ಟ್ರೆಚ್ ಮಾಡಲು ಊರ್ಧ್ವ ಮುಖ ಪಾಸಾಸನವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಿದ್ದಾರೆ. ಅವರು ಇದನ್ನು ಪ್ರತಿದಿನ ಮಾಡ್ತಾರೆ. ಈ ಆಸನವು ಬೆನ್ನಿನ ಮೇಲ್ಭಾಗ ಮತ್ತು ಭುಜಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ, ದೇಹಕ್ಕೆ ಶಕ್ತಿ ತುಂಬುತ್ತೆ. ದೇಹವನ್ನು ತಿರುಚುವುದರಿಂದ (twisting movement) ಹೊಟ್ಟೆಯ ಅಂಗಗಳು ಸಕ್ರಿಯಗೊಂಡು, ಜೀರ್ಣಕ್ರಿಯೆಗೆ ಸಹಾಯವಾಗುತ್ತೆ.

5. ವಾತಾಯನಾಸನ
ಶಿಲ್ಪಾ ಶೆಟ್ಟಿ ತಮ್ಮನ್ನು ತಾವು ಆ್ಯಕ್ಟಿವ್ ಮತ್ತು ಫಿಟ್ ಆಗಿಟ್ಟುಕೊಳ್ಳಲು ಅಡ್ವಾನ್ಸ್ಡ್ ಬ್ಯಾಲೆನ್ಸಿಂಗ್ ಆಸನವಾದ ವಾತಾಯನಾಸನವನ್ನು ಮಾಡ್ತಾರೆ. ಇದು ದೇಹದ ಕೆಳಭಾಗದ ಶಕ್ತಿಯನ್ನು ಹೆಚ್ಚಿಸುತ್ತೆ. ಇದರಿಂದ ತೊಡೆ, ಮೊಣಕಾಲು, ಮೀನಖಂಡ ಮತ್ತು ಪಾದದ ಸ್ನಾಯುಗಳು ಬಲಗೊಳ್ಳುತ್ತವೆ. ಇದನ್ನು ಮಾಡುವುದರಿಂದ ಸೊಂಟ ಮತ್ತು ತೊಡೆಗಳ ಬಿಗಿ ಕಡಿಮೆಯಾಗಿ, ಫ್ಲೆಕ್ಸಿಬಿಲಿಟಿ ಹೆಚ್ಚಾಗುತ್ತೆ.


