ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಒನ್ 8 ಕಮ್ಯೂನ್ ಹೆಸರಿನ ರೆಸ್ಟೋರೆಂಟ್ ಮಾಲೀಕರು. ಅನೇಕ ಕಡೆ ಅವ್ರ ರೆಸ್ಟೋರೆಂಟ್ ಬ್ರ್ಯಾಂಚ್ ಹೊಂದಿದೆ. ಅದ್ರ ಮೆನು ಈಗ ವೈರಲ್ ಆಗಿದ್ದು ಜನರು ಶಿಲ್ಪಾ ಶೆಟ್ಟಿ ಹೊಟೇಲ್ ಮೆನು ಜೊತೆ ಇದನ್ನು ಕಂಪೇರ್ ಮಾಡ್ತಿದ್ದಾರೆ.
ಗ್ರೌಂಡ್ ನಲ್ಲಿ ಎದುರಾಳಿಯನ್ನು ಸದೆ ಬಡಿಯಬಲ್ಲ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಬ್ಯುಸಿನೆಸ್ ನಲ್ಲೂ ಚಾಣಾಕ್ಯರು. ಅವ್ರ ರೆಸ್ಟೋರೆಂಟ್ (restaurant) ಸಾಕಷ್ಟು ಪ್ರಸಿದ್ಧಿ ಪಡೆದಿದೆ. ದೇಶದ ಪ್ರಸಿದ್ಧ ರೆಸ್ಟೋರೆಂಟ್ ಪಟ್ಟಿಯಲ್ಲಿ ಕೊಹ್ಲಿಯ ಒನ್ 8 ಕಮ್ಯೂನ್ ರೆಸ್ಟೋರೆಂಟ್ ಹೆಸರಿದೆ. ವರ್ಷಕ್ಕೊಮ್ಮೆ ಹೊಸ ಬ್ರ್ಯಾಂಚ್ ಓಪನ್ ಮಾಡ್ತಾ, ಬ್ಯುಸಿನೆಸ್ ವಿಸ್ತರಿಸ್ತಿರುವ ಕೊಹ್ಲಿ, ಆಹಾರ ಪ್ರೇಮಿಗಳನ್ನು ಹಿಡಿದಿಟ್ಟುಕೊಳ್ಳೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಈಗ ವಿರಾಟ್ ಕೊಹ್ಲಿ ಒನ್ 8 ಕಮ್ಯೂನ್ ರೆಸ್ಟೋರೆಂಟ್ ನ ಜುಹು ಶಾಖೆಯ ಮೆನು ಬಹಿರಂಗವಾಗಿದೆ. ಕೊಹ್ಲಿಯ ಈ ರೆಸ್ಟೋರೆಂಟ್ ನಲ್ಲಿರುವ ತಿಂಡಿಗಳ ದರ, ನೆಟ್ಟಿಗರನ್ನು ಸೆಳೆದಿದೆ.
ಕೊಹ್ಲಿ ಮಾಲಿಕತ್ವದ ರೆಸ್ಟೋರೆಂಟ್ ನಲ್ಲಿ ಇಷ್ಟು ಬೆಲೆಗೆ ಸಿಗುತ್ತೆ ಆಹಾರ :
ರೆಸ್ಟೋರೆಂಟ್ನ ಮೆನು ಪ್ರಕಾರ, ಹೊಟೇಲ್ ನಲ್ಲಿ ವೆಜ್ ಮತ್ತು ನಾನ್ ವೆಜ್ ಎರಡೂ ಲಭ್ಯವಿದೆ. ವಿರಾಟ್ಸ್ ಫೇವರೇಟ್ಸ್ ಶೀರ್ಷಿಕೆಯಲ್ಲೂ ಕೆಲ ಆಹಾರವನ್ನು ಮಾರಾಟ ಮಾಡಲಾಗ್ತಿದೆ. ಟೋಫು ಸ್ಟೀಕ್, ಟ್ರಫಲ್ ಎಣ್ಣೆಯೊಂದಿಗೆ ಮಶ್ರೂಮ್ ಡಂಪ್ಲಿಂಗ್ಸ್ ಮತ್ತು ಸೂಪರ್ಫುಡ್ ಸಲಾಡ್ನಂತಹ ಭಕ್ಷ್ಯಗಳು ಇಲ್ಲಿವೆ. ಜೊಮಾಟೊ ಪ್ರಕಾರ, ಜುಹು ಔಟ್ಲೆಟ್ನಲ್ಲಿ ಆಹಾರದ ಬೆಲೆಗಳು ಹೀಗಿವೆ. ಸ್ಟೀಮ್ಡ್ ರೈಸ್ 318 ರೂಪಾಯಿ. ಸಾಲ್ಟೆಡ್ ಫ್ರೈಸ್ 348 ರೂಪಾಯಿ, ತಂದೂರಿ ರೊಟ್ಟಿ ಅಥವಾ ಬೇಬಿ ನಾನ್ 118 ರೂಪಾಯಿ. ಕಿಚಡಿ 620 ರೂಪಾಯಿ ಮತ್ತು ಮಸ್ಕಾರ್ಪೋನ್ ಚೀಸ್ಕೇಕ್ 748 ರೂಪಾಯಿಗೆ ಸಿಗ್ತಿದೆ. ಇಲ್ಲಿ ಸಾಕುಪ್ರಾಣಿಗಳಿಗೂ ಆಹಾರ ಸಿಗುತ್ತೆ. ಅದ್ರ ಬೆಲೆ 518 ರೂಪಾಯಿಯಿಂದ 818 ರೂಪಾಯಿವರೆಗಿದೆ.
Shilpa Shetty ರೆಸ್ಟೋರೆಂಟ್‌ನಲ್ಲಿ 1 ರಾತ್ರಿ ನಡೆಯೋ ಬ್ಯುಸಿನೆಸ್‌ನಿಂದ ಬೆಂಗಳೂರಿನಲ್ಲಿ ಲಕ್ಷುರಿ ಮನೆ ಬರತ್ತೆ!
ಜುಹುದಲ್ಲಿ ಎಲ್ಲಿದೆ ಕೊಹ್ಲಿ ರೆಸ್ಟೋರೆಂಟ್ :
ಜುಹುನಲ್ಲಿರುವ ಒನ್8 ಕಮ್ಯೂನ್ ಹೆಸರಿನ ಕೊಹ್ಲಿ ರೆಸ್ಟೋರೆಂಟ್ ಒಂದು ಕಾಲದಲ್ಲಿ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರಿಗೆ ಸೇರಿದ್ದಬಂಗಲೆಯಾಗಿತ್ತು. ಅದು ಗೌರಿ ಕುಂಜ್ ನಲ್ಲಿದೆ. ಇದನ್ನು ಕೊಹ್ಲಿ ಖರೀದಿ ಮಾಡಿದಾಗ ಅಲ್ಲೊಂದು ರೆಸ್ಟೋರೆಂಟ್ ಓಪನ್ ಆಗುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಕೊಹ್ಲಿ ಹಾಗೂ ಅನುಷ್ಕಾ 2022ರಲ್ಲಿಯೇ ಕಿಶೋರ್ ಕುಮಾರ್ ಬಂಗಲೆಯನ್ನು ಹೊಟೇಲ್ ಆಗಿ ಬದಲಿಸಿದ್ದಾರೆ. ವಿರಾಟ್ ಕೊಹ್ಲಿ ಇದನ್ನು ಕೇವಲ ವ್ಯಾಪಾರಕ್ಕಾಗಿ ಮಾತ್ರವಲ್ಲ, ಕಿಶೋರ್ ಕುಮಾರ್ ಮೇಲಿರುವ ಗೌರವ, ಅಭಿಮಾನಕ್ಕಾಗಿ ಇದನ್ನು ಆಯ್ಕೆ ಮಾಡ್ಕೊಂಡಿದ್ದಾರೆ.
ಎಲ್ಲೆಲ್ಲಿದೆ ಕೊಹ್ಲಿ ಒನ್ 8 ಕಮ್ಯೂನ್ ರೆಸ್ಟೋರೆಂಟ್ ? :
ಕೊಹ್ಲಿ, ಒನ್ 8 ಕಮ್ಯೂನ್ ರೆಸ್ಟೋರೆಂಟನ್ನು ಅನೇಕ ಕಡೆ ಶುರು ಮಾಡಿದ್ದಾರೆ. ನೊಯ್ಡಾದಲ್ಲೂ ಅವ್ರ ಬ್ರ್ಯಾಂಚ್ ಇದೆ. ಗುರುಗ್ರಾಮ್ ನಲ್ಲಿದೆ. ಬೆಂಗಳೂರಿನಲ್ಲೂ ಬ್ರ್ಯಾಂಚ್ ಇದೆ. ಪ್ರತಿಯೊಂದು ಬ್ರ್ಯಾಂಚ್ ಅತ್ಯಂತ ಪ್ರೀಮಿಯಂ ಮತ್ತು ಸ್ಟೈಲಿಶ್ ಆಗಿದೆ. ಸುಂದರ ವಾತಾವರಣ, ಅತ್ಯಾಧುನಿಕ ವಿನ್ಯಾಸ ಹಾಗೂ ರುಚಿಯಾದ ಆಹಾರಕ್ಕೆ ರೆಸ್ಟೋರೆಂಟ್ ಪ್ರಸಿದ್ಧಿ ಪಡೆದಿದೆ. ಇಲ್ಲಿ ಭಾರತೀಯ ಕಾಂಟಿನೆಂಟಲ್ ಮತ್ತು ಏಷ್ಯನ್ ಪಾಕಪದ್ಧತಿ ಮಿಶ್ರಣವನ್ನು ನೀವು ಕಾಣ್ಬಹುದು. ಕುಟುಂಬಸ್ಥರು, ಸ್ನೇಹಿತರು, ದಂಪತಿ ವಿಶ್ರಾಮತಿ ಪಡೆದು, ಹರಟೆ ಹೊಡೆದು, ಆರಾಮವಾಗಿ ರುಚಿಯಾದ ಆಹಾರ ಸೇವನೆ ಮಾಡ್ತಾ, ಸುಮಧುರ ಸಂಗೀತ ಆಲಿಸ್ತಾ ಇಲ್ಲಿ ಎಂಜಾಯ್ ಮಾಡ್ಬಹುದು.
Wealth tips: ವಿಶ್ವದ ಕುಬೇರರ ಯಶಸ್ಸಿನ ಗುಟ್ಟು: ಈ ಸರಳ ಅಭ್ಯಾಸಗಳೇ ಕಾರಣ!
ಶಿಲ್ಪಾ ಶೆಟ್ಟಿ ಹೊಟೇಲ್ ಮೆನುಗೆ ಕಂಪೇರ್ ಮಾಡ್ತಿದ್ದಾರೆ ನೆಟ್ಟಿಗರು :
ಬಾಲಿವುಡ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹೊಟೇಲ್ ಬ್ಯುಸಿನೆಸ್ ನಡೆಸ್ತಿದ್ದಾರೆ. ಮುಂಬೈನಲ್ಲಿ ಶಿಲ್ಪಾ ಶೆಟ್ಟಿ ಕೂಡ ಪ್ರಸಿದ್ಧ ಹೊಟೇಲ್ ಹೊಂದಿದ್ದಾರೆ. ಶಿಲ್ಪಾ ಬಾಸ್ಟಿಯನ್ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದು, ಕೊಹ್ಲಿ ರೆಸ್ಟೋರೆಂಟ್ ಗೆ ಹೋಲಿಕೆ ಮಾಡಿದ್ರೆ ಇದು ತುಂಬಾ ದುಬಾರಿ. ಐಷಾರಾಮಿ ರೆಸ್ಟೋರೆಂಟ್ನಲ್ಲಿ, ಜಾಸ್ಮಿನ್ ಹರ್ಬಲ್ ಟೀ ಬೆಲೆ 920 ರೂಪಾಯಿ. ಬ್ರೇಕ್ಫಾಸ್ಟ್ ಟೀಗೆ 360 ರೂಪಾಯಿ ಪಾವತಿಸಬೇಕು. ಸ್ಪಾರ್ಕ್ಲಿಂಗ್ ವೈನ್ನ ಬೆಲೆ 1,59,500 ರೂಪಾಯಿವರೆಗಿದೆ. ಚಿಲ್ಲಿ ಗಾರ್ಲಿಕ್ ನೂಡಲ್ಸ್ಗೆ 675 ಪಾವತಿಸಬೇಕಾಗುತ್ತದೆ. ಚಿಕನ್ ಬುರ್ರಿಟೋ ಬೆಲೆ 900 ರೂಪಾಯಿ. ಈ ಹೊಟೇಲ್ ಗೆ ಎಂಟ್ರಿ ಪಡೆಯೋದು ಸುಲಭ ಅಲ್ಲ. ಒಂದೇ ರಾತ್ರಿ 2 -3 ಕೋಟಿ ಸಂಪಾದನೆ ಮಾಡುವ ಈ ಹೊಟೇಲ್ ಗೆ ಹೋಲಿಕೆ ಮಾಡಿದ್ರೆ ಕೊಹ್ಲಿ ಹೊಟೇಲ್ ನಲ್ಲಿ ಆಹಾರ ಕಡಿಮೆ ಬೆಲೆಗೆ ಸಿಗ್ತಿದೆ.
