ಸ್ಯಾಂಡಲ್‌ವುಡ್‌ನಲ್ಲಿ ಶರಣ್ 'ಛೂ ಮಂತರ್': ಟೈಟಲ್ ಟ್ರ್ಯಾಕ್ ಅನಾವರಣಗೊಳಿಸಿದ ಕ್ರೇಜಿಸ್ಟಾರ್!
ಶರಣ್ ಸ್ಯಾಂಡಲ್‌ವುಡ್‌ನ ಕಾಮಿಡಿ ಅಧ್ಯಕ್ಷ. ಕನ್ನಡ ಚಿತ್ರರಂಗದ ಈ ಅವತಾರ ಪುರುಷ. ಇದೀಗ ಶರಣ್ ಕನ್ನಡ ಸಿನಿ ಪ್ರೇಕ್ಷಕರಿಗೆ ಛೂ ಮಂತರ್ ಮಾಡಿ ಸೆಳೆಯುತ್ತಿದ್ದಾರೆ. ಹೌದು! ಶರಣ್ ನಟನೆಯ ಛೂ ಮಂತರ್ ಸಿನಿಮಾ ರಿಲೀಸ್‌ಗೆ ಸಿದ್ಧವಾಗ್ತಿದೆ.
ಶರಣ್ ಸ್ಯಾಂಡಲ್‌ವುಡ್‌ನ ಕಾಮಿಡಿ ಅಧ್ಯಕ್ಷ. ಕನ್ನಡ ಚಿತ್ರರಂಗದ ಈ ಅವತಾರ ಪುರುಷ. ಇದೀಗ ಶರಣ್ ಕನ್ನಡ ಸಿನಿ ಪ್ರೇಕ್ಷಕರಿಗೆ ಛೂ ಮಂತರ್ ಮಾಡಿ ಸೆಳೆಯುತ್ತಿದ್ದಾರೆ. ಹೌದು! ಶರಣ್ ನಟನೆಯ ಛೂ ಮಂತರ್ ಸಿನಿಮಾ ರಿಲೀಸ್‌ಗೆ ಸಿದ್ಧವಾಗ್ತಿದೆ. ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, ನವನೀತ್ ನಿರ್ದೇಶನದಲ್ಲಿ ಛೂ ಮಂತರ್ ಸಿನಿಮಾ ಸಿದ್ಧವಾಗ್ತದೆ. ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಈ ಟೈಟಲ್ ಟ್ರ್ಯಾಕ್ ಅನ್ನ ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಶರಣ್ ಜೊತೆ ನಟ ಚಿಕ್ಕಣ್ಣ ಅಧಿತಿ ಪ್ರಭುದೇವ ಮಸ್ತ್ ಡಾನ್ಸ್ ಮಾಡಿದ್ದಾರೆ.
ಬಳಿಕ ನಟ ಶರಣ್ ಮಾತನಾಡಿ, 'ನಾನು ನಾಯಕ ನಟನಾಗಲು ರವಿ ಸರ್ ಕಾರಣ. ನಾನು ಅವರೊಂದಿಗೆ ಹಠವಾದಿ ಚಿತ್ರದಲ್ಲಿ ಅಭಿನಯಿಸಬೇಕಾದರೆ, ನೀನು ಇನ್ನು ನಾಯಕನಾಗಿಲ್ವಾ? ಎಂದು ಕೇಳಿದ್ದರು. ಯಾವತ್ತೂ ನಾಯಕನಾಗಬೇಕು ಅಂದುಕೊಂಡಿರದ ನಾನು ಅವರು ಹೇಳಿದ್ದು ಕೇಳಿ ಎರಡು ವರ್ಷಗಳಲ್ಲಿ ಹೀರೋ ಆದೆ. ಅಷ್ಟು ಒಳ್ಳೆಯ ಮನಸ್ಸು ರವಿ ಸರ್ ಅವರದ್ದು. ಇಂದು ನಮ್ಮ ಚಿತ್ರದ ಹಾಡನ್ನು ಅವರು ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಈ ಹಾಡಿನ ಬಗ್ಗೆ ಹೇಳಬೇಕಾದರೆ, ಚಂದನ್ ಶೆಟ್ಟಿ ಅಮೋಘವಾಗಿ ಹಾಡಿದ್ದಾರೆ.
'ಯಶ್-19' ಸಮರ ತಯಾರಿ ಫೈನಲ್: ಗೋವಾ ಡ್ರಗ್ಸ್ ಮಾಫಿಯಾ ಕಥೆಯಲ್ಲಿ ರಾಕಿಭಾಯ್
ವಿಜಯ್ ಈಶ್ವರ್ ಈ ಹಾಡನ್ನು ಬರೆದಿದ್ದು, ದರ್ಶಿನಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾನು, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ಅಭಿನಯಿಸಿದ್ದೇವೆ' ಎಂದು ಹೇಳಿದರು. ಬಳಿಕ ಮಾತನಾಡಿದ ರವಿಚಂದ್ರನ್, 'ಚಿತ್ರತಂಡದವರ ಮಾತು ಕೇಳಿದಾಗ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ಎಲ್ಲಾ ಲಕ್ಷಣಗಳು ಇದೆ. ಶರಣ್ ಒಬ್ಬ ಒಳ್ಳೆಯ ನಟ. ಚಂದನ್ ಶೆಟ್ಟಿ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡು ತುಂಬಾ ಚೆನ್ನಾಗಿದೆ. ನಿರ್ಮಾಪಕ ತರುಣ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ' ಎಂದು ಶುಭಹಾರೈಸಿದರು.
'ನಾನು ರವಿ ಸರ್ ಅವರಿಗೆ ಕೆಲವು ದಿನಗಳ ಹಿಂದೆ ಟೀಸರ್ ತೋರಿಸಿದ್ದೆ. ಟೈಟಲ್ ಟ್ರ್ಯಾಕ್ನ್ನು ನೀವೇ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೆ. ಇಂದು ರವಿಚಂದ್ರನ್ ಸರ್ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರವಿ ಸರ್ ಅವರಿಗೆ, ಈ ಚಿತ್ರದ ಟೈಟಲ್ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ಕಥೆ ಮೆಚ್ಚಿ ಪ್ರೋತ್ಸಾಹ ನೀಡಿದ ತರುಣ್ ಸುಧೀರ್ ಅವರಿಗೆ ಈ ಸಂದರ್ಭದಲ್ಲಿ ನಾನು ಧನ್ಯವಾದ ತಿಳಿಸುತ್ತೇನೆ. ಇಂದು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಕೂಡ ಬರಲಿದೆ' ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದರು.
ಬಾಲಿವುಡ್ ಎವರ್‌ಗ್ರೀನ್ ಹೀರೋ ಶಾರುಖ್ ಖಾನ್ ಫಿಟ್ ಆಗಿರೋದಕ್ಕೆ ಏನು ತಿಂತಾರೆ?
ಇನ್ನು ಚಿತ್ರದಲ್ಲಿ ಶರಣ್ ಜೊತೆ ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ಅಭಿನಯಿಸಿದ್ದು, ಚಿಕ್ಕಣ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನವನೀತ್ ನಿರ್ದೇಶನ ಮಾಡಿದ್ದು, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೂಪ್ ಅವರ ಛಾಯಾಗ್ರಹಣ, ದರ್ಶಿನಿ ನೃತ್ಯ ಸಂಯೋಜನೆ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಸಿನಿಮಾ ನಿರ್ಮಿಸಿದ್ದಾರೆ.