Asianet Suvarna News Asianet Suvarna News

ಆಟೋ ರಾಜನ ಸ್ಮರಣೆ, ಶಂಕರ್‌ನಾಗ್ ನಿರ್ದೇಶನದ ಬೆಸ್ಟ್ 7 ಚಿತ್ರಗಳು

ಕನ್ನಡ ಏಕೆ ಇಡೀ ಭಾರತೀಯ ಚಿತ್ರರಂಗ ಕಂಡ ಅದ್ಭುತ ಚಿತ್ರಕಾರ, ನಿರ್ದೇಶಕ, ನಟ ಶಂಕರ್ ನಾಗ್ ನಮ್ಮನ್ನು ಅಗಲಿ ಇಂದಿಗೆ 28 ವರ್ಷ. ಆಟೋ ರಾಜನ ನೆನಪು ಮತ್ತೆ ಸ್ಮರಣೆ ಪ್ರತಿದಿನವೂ ನಡೆಯುತ್ತಲೇ ಇರುತ್ತದೆ. ಬೆಂಗಳೂರು ಮೆಟ್ರೋ ಕನಸನ್ನು ಅಂದೇ ಕಂಡಿದ್ದ ಸವ್ಯಸಾಚಿಗೆ ನಮ್ಮೆಲ್ಲರಿಂದ ಒಂದು ನಮನ..

Shankar Nag Directorial 7 best Movies Sandalwood
Author
Bengaluru, First Published Sep 30, 2018, 7:15 PM IST
  • Facebook
  • Twitter
  • Whatsapp

ಕಾರು ಅಪಘಾತದಲ್ಲಿ ದಿವ್ಯ ಚೇತನವೊಂದು ಮರೆಯಾಗಿತ್ತು. ಇಡೀ ಕನ್ನಡ ನಾಡೇ ಅಂದು ಕಂಬನಿ ಸುರಿಸಿತ್ತು. ಶಂಕರ್ ನಾಗ್ ನಿರ್ದೇಶನದ ಎಂದೂ ಮರೆಯದ 7 ಚಿತ್ರಗಳ ಪಟ್ಟಿ ಇಲ್ಲಿದೆ.. ಒಮ್ಮೆ ನೆನಪು ಮಾಡಿಕೊಳ್ಳಿ.. ಸಮಯ ಮಾಡಿಕೊಂಡು ನೋಡಿ

1.ಮಿಂಚಿನ ಓಟ: 1980ರಲ್ಲಿ ತೆರಕಂಡ ಚಿತ್ರದಲ್ಲಿ ಶಂಕರ್ ನಾಗ್, ಅನಂತ್ ನಾಗ್ ಮತ್ತು ಲೋಕನಾಥ್ ಕಾಣಿಸಿಕೊಂಡಿದ್ದರು. ಕಾರು ಕಳ್ಳರ ಮೇಲೆ ಚಿತ್ರತವಾದ ಸಿನಿಮಾ ಸೂಪರ್ ಹಿಟ್ ಆಗಿತ್ತು.

2. ಜನ್ಮ ಜನ್ಮದ ಅನುಬಂಧ: 1980ರಲ್ಲಿ ತೆರೆಕಂಡ ಚಿತ್ರದಲ್ಲಿ ಸಹೋದರಾದ ಅನಂತ್ ಮತ್ತು ಶಂಕರ್ ಕಾಣಿಸಿಕೊಂಡಿದ್ದರು. ರೋಮ್ಯಾಂಟಿಕ್ ಥ್ರಿಲ್ಲರ್ ಜನ ಮನ್ನಣೆ ಗಳಿಸಿತ್ತು.

3. ಗೀತಾ:1981ರಲ್ಲಿ ತೆರೆಗೆ ಬಂದ ಚಿತ್ರ ಇಳಯರಾಜರ ಸಂಗೀತದಿಂದಲೇ ಇಡೀ ದಕ್ಷಿಣ ಭಾರತದಲ್ಲಿಯೇ ಕ್ರಾಂತಿ ಮಾಡಿತ್ತು.

4. ಹೊಸತೀರ್ಪು: 1983ರಲ್ಲಿ ಪ್ರದರ್ಶಿತವಾದ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಜಯಂತಿ ಕಾಣಿಸಿಕೊಂಡಿದ್ದರು.

5. ನೋಡಿ ಸ್ವಾಮಿ ನಾವಿರೋದು ಹೀಗೆ:  ರಮೇಶ್ ಭಟ್ ಅವರನ್ನು ನಾಯಕರನ್ನಾಗಿ ಮಾಡಿದ ಶಂಕರ್ ನಾಗ್ ತಾವು ಅಭಿನಯಿಸಿದ್ದಲ್ಲದೇ ಹಾಸ್ಯದ ರೀತಿಯಲ್ಲಿ ಪ್ರೇಮ ಕತೆ ಹೇಳಿದ್ದರು.

6. ಆಕ್ಸಿಡೆಂಟ್:  1984ರಲ್ಲಿ ತೆರೆಗೆ ಬಂದ ಚಿತ್ರ ವಿಶಿಷ್ಟ ಕಥಾ ಹಂದರ ಒಳಗೊಂಡಿತ್ತು. ಶಂಕರ್ ನಾಗ್ ಮತ್ತು ಅನಂತ್ ನಾಗ್ ಕಾಣಿಸಿಕೊಂಡಿದ್ದು ಶ್ರೀಮಂತರು ಕಾನೂನನ್ನು ಹೇಗೆ ತಮಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಚಿತ್ರ ಸಾರಿ ಹೇಳಿತ್ತು.7. ಒಂದು ಮುತ್ತಿನ ಕಥೆ: 1987ರಲ್ಲಿ ತೆರೆಗೆ ಬಂದ ಚಿತ್ರದಲ್ಲಿ ವರನಟ ಡಾ. ರಾಜ್ ಕುಮಾರ್ ಅವರನ್ನು ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿದ್ದ ಸಿನಿಮಾ ಜನಮನ್ನಣೆ ಗಳಿಸಿತ್ತು.

Follow Us:
Download App:
  • android
  • ios