ಸಂಯುಕ್ತಾ ಹೆಗ್ಡೆ... ಕಿರಿಕ್ ಪಾರ್ಟಿ ಸಿನಿಮಾದಿಂದ ಕಿರಿಕ್ ಹುಡುಗಿ ಎಂದೇ ಫೇಮಸ್ ಆದ ಬೆಡಗಿ. ಇದಾದ ಬಳಿಕ ತೆಲುಗು ಸೇರಿದಂತೆ ಮತ್ತೆ ಕೆಲವು ಸಿನಿಮಾಗಳಲ್ಲಿ ನಟಿಸಿದ ಸಂಯುಕ್ತಾ, ಹಿಂದಿ ಮನೋರಂಜನಾ ಕ್ಷೇತ್ರದ ಪ್ರಸಿದ್ಧ ರಿಯಾಲಿಟಿ ಶೋ 'ರೋಡೀಸ್'ಗೆ ಎಂಟ್ರಿ ನೀಡಿದ್ದರು. ಇಲ್ಲೂ ಕಿರಿಕ್ ಮಾಡಿಯೇ ಸದ್ದು ಮಾಡಿದ್ದರು. ಸದ್ಯ ಈ ಕಿರಿಕ್ ಹುಡುಗಿ ಮತ್ತೊಂದು ಫೇಮಸ್ ರಿಯಾಲಿಟಿ ಶೋ 'ಸ್ಪ್ಲಿಟ್ಸ್ ವಿಲಾ'ದಲ್ಲಿ ಸದ್ದು ಮಾಡುತ್ತಿದ್ದಾರೆ.

ಬಿಕಿನಿಯಲ್ಲಿ ಸಂಯುಕ್ತಾ ಹೆಗಡೆ; ಹೋದಲ್ಲೆಲ್ಲಾ ರಗಳೆ!

ಈ ರಿಯಾಲಿಟಿ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸಂಯುಕ್ತಾ ಮನೆಗೆ ಹೋಗುತ್ತಿದ್ದಂತೆಯೇ ಅಲ್ಲಿದ್ದ ಜೋಡಿಗಳ ನಡುವೆ ಮನಸ್ತಾಪ ಹುಟ್ಟು ಹಾಕಿದ್ದರು. ಹೋದಲ್ಲೆಲ್ಲಾ ಕಿರಿಕ್ ಮಾಡುವ ಸಂಯುಕ್ತಾ ಅಲ್ಲಿದ್ದ ಸ್ಪರ್ಧಿಗಳಿಗೂ ತಲೆನೋವಾಗಿದ್ದರು. ಹೀಗಿದ್ದರೂ ಮನೆಯಲ್ಲಿದ್ದ ಶಗುನ್ ಪಾಂಡೆ ಮಾತ್ರ ಈ ಬೆಡಗಿಗೆ ಕ್ಲೀನ್ ಬೌಲ್ಡ್ ಆಗಿದ್ದ. ಎಂಟ್ರಿ ಪಡೆದ ಮೊದಲ ದಿನದಿಂದಲೇ ಸಂಯುಕ್ತಾಳೊಂದಿಗೆ ಆತ್ಮೀಯವಾಗಿದ್ದ ಶಗುನ್  ಅಕೆಯ ಪ್ರೀತಿಯಲ್ಲಿ ಬಿದ್ದಿದ್ದ. ಆದರರೀಗ ಈ ಲವ್ ಫೀವರ್ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ, ಆಟದಿಂದ ಎಲಿಮಿನೇಟ್ ಆಗಿದ್ದ ಸಂಯುಕ್ತಾಳನ್ನು ತಡೆಯಲು ಶಗುನ್ ತನ್ನ ಜೋಡಿಯಾಗಿದ್ದ ಆರುಷಿ ಹಾಂಡಾಳನ್ನೇ ಬಿಟ್ಟಿದ್ದಾನೆ. ಅಲ್ಲದೇ ಸೇಫ್ ಆಗಿದ್ದ ತನ್ನನ್ನು ತಾನು ಡೇಂಜರ್ ಝೋನ್ ಗೆ ಹಾಕಿಕೊಂಡಿದ್ದಾನೆ. ಇದೆಲ್ಲಾ ಮಾಡಿದ್ದು ಕಿರಿಕ್ ಬೆಡಗಿಗಾಗಿ.

ಆರುಷಿ ಹಾಂಡಾ ಹಾಗೂ ಶಗುನ್ ಪಾಂಡೆ 'ಸ್ಪ್ಲಿಟ್ಸ್ ವಿಲಾ'ದಲ್ಲಿ ಐಡಿಯನ್ ಮ್ಯಾಚ್ ಆಗಿದ್ದರು. ಅಂದರೆ ಇಬ್ಬರೂ ಎಲ್ಲಾ ಟಾಸ್ಕ್ ಗಳನ್ನು ಸಮರ್ಥವಾಗಿ ಎದುರಿಸಿದ್ದಲ್ಲದೇ ಪರಸ್ಪರ ಪರ್ಫೆಕ್ಟ್ ಪ್ರೇಮಿಗಳಾಗಿದ್ದರು. ಈ ಮೂಲಕ ಕೆಲ ವಿಶೇಷ ಪವರ್ ಹೊಂದಿದ್ದರು. ಆದರೆ ಕಿರಿಕ್ ಹುಡುಗಿ ಬಂದಿದ್ದೇ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿದ್ದು, ಶಗುನ್ ಸಂಪೂರ್ಣವಾಗಿ ಸಂಯುಕ್ತಾಳೆಡೆ ಮುಖ ಮಾಡಿದ್ದಾನೆ. ಸಂಯುಕ್ತಾಳಿಗಾಗಿ ತನ್ನ ಪರ್ಫೆಕ್ಟ್ ಜೋಡಿಯನ್ನೂ ಬಿಟ್ಟಿದ್ದಲ್ಲದೇ, ವಿಶೇಷ ಶಕ್ತಿಯನ್ನೂ ತೊರೆದಿದ್ದಾನೆ.

ನಟಿ ಸಂಯುಕ್ತಾ ಹೆಗಡೆ ಕಿರಿಕ್'ನಿಂದ ರೋಸಿ ಹೋದ ನಿರ್ಮಾಪಕ

ಸದ್ಯ ಶಗುನ್ ತಮ್ಮ ತ್ಯಾಗದ ಮೂಲಕ ಎಲಿಮಿನೇಟ್ ಆಗುತ್ತಿದ್ದ ಸಂಯುಕ್ತಾಳನ್ನು ಸ್ಪರ್ಧೆಯಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆದರೆ ಇದು ಎಷ್ಟು ದಿನ ಎಂಬುವುದು ಮಾತ್ರ ತಿಳಿದಿಲ್ಲ. ಅಂದ ಹಾಗೆ ಈ ಕಿರಿಕ್ ಹುಡುಗಿಗಾಗಿ ಶಗುಣ್ ಇತರ ಸ್ಪರ್ಧಿಗಳನ್ನು ಹಲವಾರು ಬಾರಿ ಎದುರಾಕಿಕೊಂಡಿದ್ದೂ ಇದೆ.