ದೀಕ್ಷಿತ್ ಶೆಟ್ಟಿ ರಾತ್ರಿ 9 ಗಂಟೆ ಸುಮಾರಿಗೆ ಅವರು ಕಾರಿನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಆರೋಪಿಗಳು ಮಾರುತಿ ಮಂದಿರ ಬಳಿ ಕಾರು ತಡೆದು ದೀಕ್ಷಿತ್ ಅವರನ್ನು ಸೆಲ್ಫಿಗೆ ಆಹ್ವಾನಿಸಿದ್ದರು.

ತಮ್ಮ ಜತೆ ಸೆಲ್ಫಿ ತೆಗೆಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ದುಷ್ಕರ್ಮಿಗಳು, ಕಿರುತೆರೆ ನಟರೊಬ್ಬರ ಮೇಲೆ ಹಲ್ಲೆ ನಡೆಸಿ, ಅವರ ಕಾರಿನ ಗಾಜು ಒಡೆದು ಪರಾರಿಯಾಗಿರುವ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ವಿಜಯನಗರದ ಮಾರುತಿ ಮಂದಿರದ ನಿವಾಸಿ, ‘ನಾಗಿಣಿ’ ಧಾರವಾಹಿಯ ಪಾತ್ರಧಾರಿ ದೀಕ್ಷಿತ್ ಶೆಟ್ಟಿ ಹಲ್ಲೆಗೆ ಒಳಗಾದವರು. ಮೂವರು ದುಷ್ಕರ್ಮಿಗಳು ದೀಕ್ಷಿತ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.

ದೀಕ್ಷಿತ್ ಶೆಟ್ಟಿ ರಾತ್ರಿ 9 ಗಂಟೆ ಸುಮಾರಿಗೆ ಅವರು ಕಾರಿನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಆರೋಪಿಗಳು ಮಾರುತಿ ಮಂದಿರ ಬಳಿ ಕಾರು ತಡೆದು ದೀಕ್ಷಿತ್ ಅವರನ್ನು ಸೆಲ್ಫಿಗೆ ಆಹ್ವಾನಿಸಿದ್ದರು. ಆರೋಪಿಗಳು ಕುಡಿದ ಮತ್ತಿನಲ್ಲಿದ್ದ ಕಾರಣ ದೀಕ್ಷಿತ್ ಶೆಟ್ಟಿ ಸೆಲ್ಫಿಗೆ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡು ಮೂವರು, ಕಾರಿನ ಮುಂಭಾಗ ಹಾಗೂ ಹಿಂಭಾಗದ ಗಾಜುಗಳಿಗೆ ಕಲ್ಲು ಎಸೆದಿದ್ದರು.

ಗಾಜುಗಳು ಪುಡಿ ಪುಡಿಯಾದವು. ನಂತರ ದುಷ್ಕರ್ಮಿಗಳು ಹಾಗೂ ದೀಕ್ಷಿತ್ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.