ಪದ್ಮಕುಮುಟಾ ಅವರು ಬಯಲುದಾರಿ, ಅರಿವು, ಫಲಿತಾಂಶ, ಅವಸ್ಥೆ, ಮೌನಗೀತೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಬೆಂಗಳೂರು(ಮಾ.06): ಕನ್ನಡ ಚಲನಚಿತ್ರ ಹಾಗೂ ಕಿರುತೆರೆಯ ಹಿರಿಯ ನಟಿ ಪದ್ಮಾ ಕುಮಟಾ(58) ನಿಧನರಾಗಿದ್ದಾರೆ. ಕೆಕೆ ಎಸ್ಟೇಟ್​​​​​​​​ನಲ್ಲಿ ಶೂಟಿಂಗ್​​ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಕೊನೆಯುಸಿರೆಳದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪದ್ಮಕುಮುಟಾ ಅವರು ಬಯಲುದಾರಿ, ಅರಿವು, ಫಲಿತಾಂಶ, ಅವಸ್ಥೆ, ಮೌನಗೀತೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚೋಮನದುಡಿ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದರು. ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದ ಪದ್ಮಾ ‘ಮಹಾನದಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದರು.