ಸೀತಾರಾಮ ಸೀರಿಯಲ್ ಸೂಪರ್ ಜೋಡಿಯಾಗಿದ್ದ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಅವರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ವೈಷ್ಣವಿ ಅವರ ಮದುವೆಯಾಗಿದ್ದು, ಈಗ ಗಗನ್ ಅವರ ಮದ್ವೆ ಯಾವಾಗ ಎಂದು ಕೇಳ್ತಿರೋ ನಡುವೆಯೇ ನಟ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಏನಿದೆ ಅದರಲ್ಲಿ?
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಸದ್ಯ ಪತಿಯ ಜೊತೆ ಬಿಜಿಯಾಗಿದ್ದಾರೆ. ಆದರೆ, ವೈಷ್ಣವಿ ಅವರು ಅನುಕೂಲ್ ಎನ್ನುವವರ ಜೊತೆ ಎಂಗೇಜ್ಮೆಂಟ್ ಆಗುವುದಕ್ಕೂ ಮುನ್ನ ಅವರ ಮತ್ತು ಸೀತಾರಾಮ ಸೀರಿಯಲ್ ರಾಮ್ ಅರ್ಥಾತ್ ಗಗನ್ ಚಿನ್ನಪ್ಪ ಅವರು ಮದ್ವೆಯಾದರೆ ಎಷ್ಟು ಚೆನ್ನಾಗಿರತ್ತೆ ಎಂದು ಹೇಳುತ್ತಲೇ ಬಂದವರು ಅಭಿಮಾನಿಗಳು. ಅಷ್ಟಕ್ಕೂ ಸೀರಿಯಲ್ಗಳಲ್ಲಿ ಒಂದು ಜೋಡಿ ಇಷ್ಟ ಆಯ್ತು ಎಂದರೆ ರಿಯಲ್ ಲೈಫ್ನಲ್ಲಿಯೂ ಅವರು ಮದ್ವೆಯಾಗಲಿ ಎಂದು ಬಯಸುವವರೇ ಹಲವರು. ಅದೇ ರೀತಿ ವೈಷ್ಣವಿ ಮತ್ತು ಗಗನ್ ಅವರ ಜೋಡಿ, ಕೆಮೆಸ್ಟ್ರಿ ಫ್ಯಾನ್ಸ್ಗೆ ಇಷ್ಟವಾಗಿದೆ. ಅವರಿಬ್ಬರು ಹಲವಾರು ರೀಲ್ಸ್ಗಳನ್ನು ಒಟ್ಟಿಗೇ ಮಾಡುತ್ತಲೇ ಇದ್ದಾರೆ. ಹೀಗೆ ಮಾಡಿದಾಗಲೆಲ್ಲಾ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದವರೇ ಹೆಚ್ಚು. ಆದರೆ ಅವರಿಬ್ಬರೂ ಇದಕ್ಕೆ ತಲೆ ಕೆಡಿಸಿಕೊಂಡವರಲ್ಲ. ಕೊನೆಗೆ, ವೈಷ್ಣವಿ ಮದುವೆಯ ಬಗ್ಗೆ ಏಕಾಏಕಿ ನ್ಯೂಸ್ ಕೊಟ್ಟರು.
ಸೀತಾರಾಮ ಸೀರಿಯಲ್ ಬಳಿಕ ಇದೀಗ ರಾಮ್ ಪಾತ್ರಧಾರಿ ಅರ್ಥಾತ್ ಗಗನ್ ಚಿನ್ನಪ್ಪ ಅವರು ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು. ಆದರೆ ಸದ್ಯ ಅವರು ಈ ಬಗ್ಗೆ ಅಪ್ಡೇಟ್ ನೀಡಿಲ್ಲ. ಬದಲಾಗಿ, ಥಹರೇವಾರಿ ತಿನಿಸುಗಳ ಜೊತೆ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಸರಿಯಾಗಿ ಊಟ ಮಾಡದಿದ್ದರೆ ಚೆನ್ನಾಗಿ ಯೋಚಿಸಲು, ಚೆನ್ನಾಗಿ ಪ್ರೀತಿಸಲು, ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ ಎನ್ನುವ ಕ್ಯಾಪ್ಷನ್ ಕೊಡುವ ಮೂಲಕ ವಿಭಿನ್ನ ರೀತಿಯ ಆಹಾರಗಳನ್ನು ಎದುರಿಗೆ ಇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಒಬ್ಬರೇ ತಿನ್ನುತ್ತೀರಾ ಎಂದು ಹಲವರು ಅವರಿಗೆ ತಮಾಷೆ ಮಾಡಿದ್ದಾರೆ.
ಗಗನ್ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಈಗ ಅಭಿಮಾನಿಗಳದ್ದು, ಸೀತಾರದ್ದು ಆಯ್ತು, ಈಗ ಗಗನ್ ಅವರ ಮೇಲೆ ಅಭಿಮಾನಿಗಳ ದೃಷ್ಟಿ ಹರಿದಿದೆ. ಗಗನ್ ಈ ಹಿಂದೆ, ತಮಗೆ ಬ್ರೇಕಪ್ ಆಗಿದ್ದ ವಿಷಯ ತಿಳಿಸಿದ್ದರು. ವೈಷ್ಣವಿ ಅವರಿಗೆ ಇನ್ನೂ ಮದುವೆಯಾಗಿಲ್ಲದ ಹಿನ್ನೆಲೆಯಲ್ಲಿ ನಿಜ ಜೀವನದಲ್ಲಿಯೂ ಇಬ್ಬರೂ ಜೊತೆಯಾಗಲಿ ಎಂದು ಬಯಸಿದ್ದರು. ಇನ್ನು ರಾಮ್ ಪಾತ್ರಧಾರಿ ಗಗನ್ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್, ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು ಎರಡು ವರ್ಷ ಓಮನ್ ದೇಶದಲ್ಲಿ ಅದಾದ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು. 2014 ರಲ್ಲಿ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು.
ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್ ಆಗಲೇ ಇಲ್ಲ. ಸೀರಿಯಲ್ಗಳಲ್ಲಿ ಆಡಿಷನ್ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು. ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್ಗೂ ಎಂಟ್ರಿ ಕೊಟ್ಟು ಈಗ ಸೀತಾರಾಮ ಸೀರಿಯಲ್ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ. ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್ ಅವರು, ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
