ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ ಅವರು ತಮ್ಮ ಎಂಗೇಜ್‌ಮೆಂಟ್ ಗುಟ್ಟಾಗಿ ಮಾಡಿಕೊಂಡದ್ದೂ ಅಲ್ಲದೇ ಮದುವೆಯ ದಿನವನ್ನೂ ಮೊದಲೇ ಪ್ರಕಟಿಸಲಿಲ್ಲ. ಇದಕ್ಕೆ ಕಾರಣ ಇದೇ ನೋಡಿ!
ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ ಅವರು ತಮ್ಮ ನಿಶ್ಚಿತಾರ್ಥವಾಗಿರುವ ಬಗ್ಗೆ ರಾತ್ರೋರಾತ್ರಿ ಅಭಿಮಾನಿಗಳಿಗೆ ಅತಿದೊಡ್ಡ ಸರ್‌ಪ್ರೈಸ್ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಇದೀಗ ಮದುವೆ ಶಾಸ್ತ್ರಗಳನ್ನೂ ದಿಢೀರ್ ಎಂದು ಆರಂಭಿಸಿದ್ದ ನಟಿ, ಮದುವೆಯ ದಿನಾಂಕವನ್ನೂ ಎಲ್ಲಿಯೂ ಪ್ರಕಟಿಸಿರಲಿಲ್ಲ. ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೂ ನಟಿ ಉತ್ತರಿಸಿ ಇರಲಿಲ್ಲ. ಚಿತ್ರಲೋಕದ ಕೆಲವರಿಗೆ ಮತ್ತು ಸಮೀಪದವರಿಗೆ ಮಾತ್ರ ನಟಿಯ ಮದುವೆಯ ದಿನಾಂಕ ಗೊತ್ತಿತ್ತೇ ವಿನಾ, ಅವರ ವಿವಾಹಪೂರ್ವ ಕಾರ್ಯ ಆರಂಭವಾದಾಗಲೇ ಎಲ್ಲರೂ ಅಚ್ಚರಿಗೊಂಡಿದ್ದರು. ಅಷ್ಟಕ್ಕೂ ನಟಿಯ ಮದುವೆ ಯಾವಾಗ ಎಂದು ಕೆಲ ವರ್ಷಗಳಿಂದ ತಲೆ ತಿನ್ನುತ್ತಿದ್ದ ಫ್ಯಾನ್ಸ್‌ಗೆ ಶಾಕ್ ನೀಡಿಬಿಟ್ಟಿದ್ದರು. ಯಾವುದೇ ಪೂರ್ವ ಸೂಚನೆಯೂ ಇಲ್ಲದೇ, ದಿಢೀರನೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಸಾಮಾನ್ಯವಾಗಿ ನಟಿಯರು ತಮ್ಮ ಎಂಗೇಜ್‌ಮೆಂಟ್, ಮದ್ವೆ ಎಂದರೆ ವರ್ಷದ ಮೊದಲೇ ಭರ್ಜರಿ ಸದ್ದು ಮಾಡುತ್ತಿರುತ್ತಾರೆ. ಅವರ ಈ ಕಾರ್ಯಕ್ರಮಗಳು ಕೂಡ ಧೂಮ್‌ಧಾಮ್ ಆಗಿ ನಡೆಯುತ್ತದೆ. ಆದರೆ ಯಾವುದೇ ಸೂಚನೆ ಕೊಡದೇ ವೈಷ್ಣವಿ ಇಷ್ಟು ಸೀಕ್ರೇಟ್ ಆಗಿ ಎಂಗೇಜ್‌ಮೆಂಟ್ ಆಗಿದ್ದು ಏಕೆ ಎನ್ನುವ ಬಗ್ಗೆ ಹಲವರು ತಲೆಕೆಡಿಸಿಕೊಳ್ತಿರೋದು ಇದೆ.
ಇದೀಗ ಎಂಗೇಜ್‌ಮೆಂಟ್ ರೀತಿಯಲ್ಲಿಯೇ ಮದುವೆಯ ಬಗ್ಗೆಯೂ ನಟಿ ಮೊದಲೇ ಹೇಳದೇ ಇರುವುದಕ್ಕೂ ಕಾರಣವಿದೆ. ಅದೇ ಈ ಹಿಂದೆ ನಟಿಯ ಕುರಿತು ನುಡಿದ ಭವಿಷ್ಯ ಎನ್ನಲಾಗುತ್ತಿದೆ. ಇದಕ್ಕೂ, ವೈಷ್ಣವಿ ಗೌಡ ಅವರು ಮದುವೆ ದಿನಾಂಕವನ್ನು ಗುಟ್ಟಾಗಿ ಇಟ್ಟಿರುವುದಕ್ಕೂ ಸಂಬಂಧ ಇದ್ಯಾ ಎನ್ನುವ ಸಂಶಯ ಹುಟ್ಟುಹಾಕಿದೆ. ಅದೇನೆಂದರೆ, ಈ ಹಿಂದೆ ವೈಷ್ಣವಿ ಅವರು . ಟ್ಯಾರೋ ಕಾರ್ಡ್ ತಜ್ಞರಾದ ಜಯಶ್ರೀ ಅವರ ವಿಡಿಯೋ ಒಂದನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಟ್ಯಾರೋ ಕಾರ್ಡ್ ರೀಡಿಂಗ್ ಕಾರ್ಟೊಮ್ಯಾನ್ಸಿಯ ಒಂದು ರೂಪವಾಗಿದೆ, ಅದರ ಮೂಲಕ ಹಿಂದಿನ, ವರ್ತಮಾನ ಅಥವಾ ಭವಿಷ್ಯದ ಬಗ್ಗೆ ಒಳನೋಟವನ್ನು ಪಡೆಯಬಹುದಾಗಿದೆ. ಇದು ಬಹಳ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಅದರ ಮೂಲಕ ವೈಷ್ಣವಿ ಅವರ ಭವಿಷ್ಯವನ್ನು ಜಯಶ್ರೀ ಅವರು ನುಡಿದಿದ್ದರು.
ಈ ಸಮಯದಲ್ಲಿ ವೈಷ್ಣವಿ ಅವರ ಬದುಕಿನ ಹಲವು ವಿಷಯಗಳನ್ನು ಜಯಶ್ರೀ ಹೇಳಿದ್ದರು. ಈ ಸಂದರ್ಭದಲ್ಲಿ, ವೈಷ್ಣವಿ ಅವರು, ತಮ್ಮ ಮದುವೆ, ಹುಡುಗ ಯಾರ ರೀತಿ ಇರ್ತಾನೆ ಇತ್ಯಾದಿಗಳ ಬಗ್ಗೆ ಕೇಳಲು ಉತ್ಸುಕರಾಗಿದ್ದರು. ಆದರೆ ಈ ಬಗ್ಗೆ ಜಯಶ್ರೀ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಮದುವೆ ವಿಷಯದಲ್ಲಿ ಎಚ್ಚರಿಕೆಯನ್ನಂತೂ ನೀಡಿದ್ದರು. ಅದರಲ್ಲಿ ಈಗ ಗಮನ ಸೆಳೀತಾ ಇರುವುದು ಏನೆಂದರೆ, ಜಯಶ್ರೀ ಅವರು ’ನಿಮ್ಮ ಗುಟ್ಟನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಅದು ಮದುವೆಯದ್ದೇ ಆಗಿರಬಹುದು, ಏನಾದರೂ ಆಗಿರಬಹುದು. ಏನೇ ಆದರೂ ಹೊಸತು ಮಾಡುವುದಿದ್ದರೆ, ಯಾರಿಗೂ ಹೇಳಬೇಡಿ ಎಂದಿದ್ದರು. ರಿಲೇಷನ್ಷಿಪ್ಗೆ ತುಂಬಾ ಟೈಂ ಕೊಡಿ. ಮೊದಲು ನಿಮ್ಮ ಮನಸ್ಸನ್ನು ನೀವು ಬ್ಯಾಲೆನ್ಸ್ ಮಾಡಬೇಕು. ಆಮೇಲೆ ಮುಂದುವರೆಯಬೇಕ” ಎಂದು ಮದುವೆಯ ಬಗ್ಗೆ ಅವರು ಎಚ್ಚರಿಕೆ ಕೊಟ್ಟಿದ್ದರು.
’ಮದುವೆ, ರಿಲೇಷನ್ಷಿಪ್ಗೆ ಇಂತಿಷ್ಟೇ ಟೈಂ ಎಂದು ಇಟ್ಟುಕೊಳ್ಳಬೇಡಿ. ಯಾರ ಜೊತೆಗಾದರೂ ಒಂದೇ ಸಲಕ್ಕೆ ಡಿಸೈಡ್ ಮಾಡಬೇಡಿ. ಒಂದಷ್ಟು ದಿನ ತೆಗೆದುಕೊಂಡು, ಆ ವ್ಯಕ್ತಿ ನಿಮಗೆ ಸರಿ ಎನ್ನಿಸಿದರೆ ನೀವು ಮುಂದುವರೆಯಬೇಕು. ಆದರೆ ಅದಕ್ಕೂ ಮೊದಲು ಮನಸ್ಸಿನ ಮೇಲೆ ಸಾಕಷ್ಟು ಸಂಯಮ ಸಾಧಿಸಬೇಕು. ಎಲ್ಲರನ್ನೂ ನಮ್ಮವರು ಎಂದುಕೊಳ್ಳಬಾರದು ಎಂದಿದ್ದರು ಈ ಹಿಂದೆ ಮದುವೆ ವಿಷಯದಲ್ಲಿ ಆಗಿರುವ ಕಹಿ ಘಟನೆಗಳಿಂದ ಸಾಕಷ್ಟು ನೊಂದುಕೊಂಡಿದ್ದ ನಟಿ, ಇದೀಗ ಜಯಶ್ರೀ ಅವರ ಅಣತಿಯಂತೆ ನಿಶ್ಚಿತಾರ್ಥದ ವಿಷಯವನ್ನು ಗುಟ್ಟಾಗಿಟ್ಟಲಿಕ್ಕೆ ಸಾಕು ಎನ್ನಲಾಗುತ್ತಿದೆ.
