* ದಿಲ್ಲಿಯಲ್ಲಿ ಮೋದಿ ಸೇರಿ ಹಲವು ಗಣ್ಯರಿಗೆ ಔತಣ ನೀಡಿದ ಕೋಹ್ಲಿ, ಅನುಷ್ಕಾ ದಂಪತಿ. * ನವ ಜೋಡಿಗೆ ಶುಭ ಹಾರೈಸಿ, ಸಣ್ಣ ಉಡುಗೊರೆ ನೀಡಿದ ಪ್ರಧಾನಿ. * ಮುಂಬಯಿಯಲ್ಲಿ ಡಿ.26ಕ್ಕೆ ಮತ್ತೊಂದು ಆರತಕ್ಷತೆ.

ಹೊಸದಿಲ್ಲಿ: ಇಟಲಿಯಲ್ಲಿ ಸಪ್ತಪದಿ ತುಳಿದ ಕ್ರಿಕೆಟಿಗ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆರತಕ್ಷತೆ ದೆಹಲಿಯ ಪ್ರತಿಷ್ಠಿತ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಉಡುಗೊರೆ ನೀಡಬಾರದೆಂದು ಅತಿಥಿಗಳಿಗೆ ಈ ಜೋಡಿ ಕೋರಿಕೊಂಡಿದ್ದರೂ, ನವ ಜೋಡಿಗೆ ಶುಭ ಹಾರೈಸಿದ ಮೋದಿ, ಸಣ್ಣದೊಂದು ಗಿಫ್ಟ್ ನೀಡಿದ್ದಾರೆ. ಏನು ಗೊತ್ತಾ?

View post on Instagram

ಪುಟ್ಟದೊಂದು ಕೆಂಪು ಗುಲಾಬಿಯನ್ನು ಮೋದಿ ಶುಭ ಹಾರೈಸಿ, ಇಬ್ಬರಿಗೂ ಉಡುಗೊರೆಯಾಗಿ ನೀಡಿದ್ದಾರೆ. ವೇದಿಕೆ ಮೇಲೆ ತೆರಳಿ, ವಿರುಷ್ಕಾ ದಂಪತಿಗೆ ಶುಭ ಹಾರೈಸಿದ ಪ್ರಧಾನಿ, ತಾವು ತಂದಿದ್ದ ಒಂದೊಂದು ಗುಲಾಬಿಯನ್ನು ನೀಡಿದರು.

ಇಟಲಿಯಲ್ಲಿ ಮದುವೆಯಾದ ಈ ಜೋಡಿ, ಕ್ರಿಕೆಟಿಗರು ಹಾಗು ಇತರೆ ಕೆಲವೇ ಕೆಲವು ಗಣ್ಯರಿಗೆ ಆತಿಥ್ಯ ನೀಡಿದ್ದು, ಮುಂಬಯಿಯಲ್ಲಿ ಡಿ.26ರಂದು ನಡೆಯುವ ಆರತಕ್ಷತೆಗೆ ಬಾಲಿವುಡ್ ಸ್ನೇಹಿತರನ್ನು ಆಹ್ವಾನಿಸಲಾಗಿದೆ, ಎಂದು ಹೇಳಲಾಗುತ್ತಿದೆ.

desc Virat Kohli and Anushka Sharma had reception in Delhi where PM Modi was also present.