ತಾಯಿ ಶ್ಯಾಮಲಾ ದೇವಿ ಅವರ ಮೇಲೆ ಅಪಾರ ಪ್ರೀತಿ-ಗೌರವ ಹೊಂದಿರುವ ಪ್ರಭಾಸ್, ಇಂದಿಗೂ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಊಟ ಬಡಿಸುವುದರಲ್ಲಿ ಡಾ. ರಾಜ್‌ಕುಮಾರ್ ಅವರಂತೆಯೇ ಬಹಳಷ್ಟು ಅಷ್ಟೊಂದು ಪ್ರೀತಿ ತೋರಿಸುವ ನಟ ಪ್ರಭಾಸ್ ಎಂದು ಅನೇಕರು ಹೇಳುತ್ತಾರೆ.
ಪ್ರಭಾಸ್ ಊಟ ಕೇವಲ ಊಟವಲ್ಲ, ಒಂದು ಹಬ್ಬ!
ಸಿನಿಮಾ ಪರದೆಯ ಮೇಲೆ ಅಬ್ಬರಿಸುವ 'ರೆಬೆಲ್ ಸ್ಟಾರ್' ಪ್ರಭಾಸ್, ನಿಜ ಜೀವನದಲ್ಲಿ ಅಪ್ಪಟ ಕೂಲ್ ಅಂಡ್ ಸಾಫ್ಟ್ ಹಾರ್ಟೆಡ್ ಪರ್ಸನ್. ಅದೇ ಕಾರಣಕ್ಕೆ ಅವರಿಗೆ 'ಡಾರ್ಲಿಂಗ್' ಎಂಬ ಬಿರುದಿ ಸಿಕ್ಕಿದೆ. ಪ್ರಭಾಸ್ (Prabhas) ಅವರ ಪ್ರತಿಭೆ, ಸಿಂಪ್ಲಿಸಿಟಿ ಬಗ್ಗೆ ಬಹುತೇಕರಿಗೆ ಗೊತ್ತು. ಆದರೆ, ಈ 'ಬಾಹುಬಲಿ' ಖ್ಯಾತಿಯ ನಟನ ಆಹಾರ ಪದ್ಧತಿಯ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಇತ್ತೀಚೆಗೆ ಪ್ರಭಾಸ್ ಅವರ ತಾಯಿ ಶ್ಯಾಮಲಾ ದೇವಿ ಅವರು ಹಂಚಿಕೊಂಡ ಕೆಲವು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ದಿನಕ್ಕೆ 20 ಮೊಟ್ಟೆ, 2 ಲಕ್ಷ ರೂಪಾಯಿ ಖರ್ಚು! ಇದು ಸತ್ಯನಾ?
ಹೌದು, ನಟ ಪ್ರಭಾಸ್ ಅವರ ಒಂದು ದಿನದ ಆಹಾರದ ಖರ್ಚು ಹೆಚ್ಚುಕಡಿಮೆ 2 ಲಕ್ಷ ರೂಪಾಯಿ ಆಗುತ್ತೆ ಅಂತಾರೆ ! ಒಬ್ಬ ಮನುಷ್ಯ ದಿನಕ್ಕೆ ಇಷ್ಟೊಂದು ಹಣವನ್ನು ಕೇವಲ ಆಹಾರಕ್ಕಾಗಿ ಖರ್ಚು ಮಾಡುತ್ತಾರಾ? ಎಂದು ಆಶ್ಚರ್ಯ ಆಗುವುದು ಸಹಜ. ಆದರೆ, ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವಾಗ ದೇಹವನ್ನು ಆ ಮಟ್ಟಕ್ಕೆ ಕಾಪಾಡಿಕೊಳ್ಳುವುದು ಅನಿವಾರ್ಯ. ಪ್ರಭಾಸ್ ಅವರ ಫಿಟ್ನೆಸ್, ಆರೋಗ್ಯಕ್ಕಾಗಿ ಉತ್ತಮ ಗುಣಮಟ್ಟದ ಆಹಾರವನ್ನು ತಯಾರಿಸಲಾಗುತ್ತದೆ. ಮೂಲಗಳ ಪ್ರಕಾರ, ಅವರು ದಿನಕ್ಕೆ ಕನಿಷ್ಠ 20 ಮೊಟ್ಟೆಯ ಬಿಳಿಭಾಗವನ್ನು ಸೇವಿಸುತ್ತಾರೆ. ಜೊತೆಗೆ, ಪ್ರೋಟೀನ್ ಸಮೃದ್ಧವಾಗಿರುವ ಮಟನ್, ಚಿಕನ್, ಮತ್ತು ಸಮುದ್ರದ ಆಹಾರಗಳಿಗೆ ಅವರು ಮೊದಲ ಆದ್ಯತೆ ನೀಡುತ್ತಾರೆ.
ಬಿರಿಯಾನಿ ಅಂದ್ರೆ ಪ್ರಾಣ, ಸೀ ಫುಡ್ ಅಂದ್ರೆ ಅದಕ್ಕಿಂತಲೂ ಇಷ್ಟ!
ಪ್ರಭಾಸ್ ಬಿರಿಯಾನಿ ಪ್ರೇಮಿ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರುವ ವಿಷಯ. ಆದರೆ ಅವರ ತಾಯಿ ಹೇಳುವಂತೆ, ಪ್ರಭಾಸ್ ಅವರಿಗೆ ಸಮುದ್ರಾಹಾರದ ಮೇಲೆ ಎಲ್ಲಿಲ್ಲದ ಪ್ರೀತಿ. ಮೀನಿನ ಸೂಪ್ (Fish Soup), ಸೀಗಡಿ ಕರಿ (Prawn Curry) ಮತ್ತು ಏಡಿ ಖಾದ್ಯಗಳೆಂದರೆ ಪ್ರಭಾಸ್‌ಗೆ ಪಂಚಪ್ರಾಣ. ಪ್ರಭಾಸ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ, ಶೂಟಿಂಗ್ ಸೆಟ್‌ನ ಹೋಟೆಲ್ ಊಟಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಶುದ್ಧ ಹಾಗೂ ತಾಜಾ ಊಟವನ್ನೇ ಅವರು ಇಷ್ಟಪಡುತ್ತಾರೆ. ಅವರ ಆಹಾರ ಪದ್ಧತಿಯಲ್ಲಿ ರುಚಿಯ ಜೊತೆಗೆ ಪೋಷಕಾಂಶಗಳಿಗೂ ಅಷ್ಟೇ ಜಾಗ ಇರುತ್ತದೆ.
ಒಂಟಿಯಾಗಿ ಊಟ ಮಾಡದ 'ಅನ್ನದಾತ'!
ಪ್ರಭಾಸ್ ಅವರ ಅಸಲಿ ವ್ಯಕ್ತಿತ್ವ ತಿಳಿಯುವುದೇ ಅವರು ಊಟಕ್ಕೆ ಕುಳಿತಾಗ. ಪ್ರಭಾಸ್ ಅವರಿಗೆ ಒಬ್ಬರೇ ಕುಳಿತು ಊಟ ಮಾಡುವುದೆಂದರೆ ತುಂಬಾ ಕಷ್ಟ. ತಾವು ಊಟಕ್ಕೆ ಕುಳಿತರೆ ಅವರ ಸುತ್ತ ಕನಿಷ್ಠ 20 ಜನರು ಜೊತೆಗೆ ಇರಲೇಬೇಕು. ಅಷ್ಟೂ ಜನರಿಗೂ ತಾವೇ ಸ್ವತಃ ವಿಭಿನ್ನ ಖಾದ್ಯಗಳನ್ನು ತರಿಸುತ್ತಾರೆ. ಶೂಟಿಂಗ್ ಸೆಟ್‌ಗಳಲ್ಲಿ ಪ್ರಭಾಸ್ ತಮ್ಮ ಸಹನಟರಿಗೆ ಮತ್ತು ಚಿತ್ರತಂಡದವರಿಗೆ ನೂರಾರು ಬಗೆಯ ಅಡುಗೆಗಳನ್ನು ಮನೆಯಿಂದಲೇ ಮಾಡಿಸಿ ತರುತ್ತಾರೆ. ಪ್ರಶಾಂತ್ ನೀಲ್ ಇರಲಿ ಅಥವಾ ದೀಪಿಕಾ ಪಡುಕೋಣೆ ಇರಲಿ, ಪ್ರಭಾಸ್ ಅವರ ಆತಿಥ್ಯವನ್ನು ಮನಸಾರೆ ಹೊಗಳಿದ್ದಾರೆ. ಪ್ರಭಾಸ್ ಸಹಭೋಜನದ ಪ್ರೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಈಗ ಸ್ವತಃ ಅವರ ತಾಯಿಯವರೇ ಹೇಳಿರೋದಕ್ಕೆ ಅದಕ್ಕೊಂದು ಅಧಿಕೃತ ಮುದ್ರೆ ಬಿದ್ದಿದೆ.
'ಡಾರ್ಲಿಂಗ್' ಅನ್ನೋದು ಏಕೆ?
ತಾಯಿ ಶ್ಯಾಮಲಾ ದೇವಿ ಅವರ ಮೇಲೆ ಅಪಾರ ಪ್ರೀತಿ-ಗೌರವ ಹೊಂದಿರುವ ಪ್ರಭಾಸ್, ಇಂದಿಗೂ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಊಟ ಬಡಿಸುವುದರಲ್ಲಿ ಡಾ. ರಾಜ್‌ಕುಮಾರ್ (Dr Rajkumar) ಅವರಂತೆಯೇ ಬಹಳಷ್ಟು ಅಷ್ಟೊಂದು ಪ್ರೀತಿ ತೋರಿಸುವ ನಟ ಪ್ರಭಾಸ್ ಎಂದು ಅನೇಕ ಕನ್ನಡಿಗ ಅಭಿಮಾನಿಗಳು ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಟಾಲಿವುಡ್ ಸ್ಟಾರ್, ಪ್ಯಾನ್ ಇಂಡಿಯಾ ನಟ ಪ್ರಭಾಸ್ ಕೇವಲ ಬಾಕ್ಸ್ ಆಫೀಸ್ ಸುಲ್ತಾನ ಮಾತ್ರವಲ್ಲ, ಊಟದ ಮೇಜಿನ ಮೇಲೂ ಅವರು ಕಿಂಗ್!


