ನವದೆಹಲಿ (ಡಿ. 17): ಅನುಷ್ಕಾ ಶರ್ಮಾ ಸದ್ಯಕ್ಕೆ  ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ. ಜಬ್ ಹರಿಮೆಟ್ ಸೆಜಲ್, ಪರಿ, ಹಾಗೂ ಸುಯ್ ಧಾಗಾ ಸಿನಿಮಾ ತೆರೆ ಕಂಡಿದೆ. ಇದು ಹೇಳಿಕೊಳ್ಳುವ ಮಟ್ಟಿಗೆ ಹಿಟ್ ಆಗದಿದ್ದರೂ ಅನುಷ್ಕಾಗೆ ಹೆಸರು ತಂದು ಕೊಟ್ಟದ್ದಂತೂ ಸುಳ್ಳಲ್ಲ. 

ವಿರುಷ್ಕಾ ವೆಡ್ಡಿಂಗ್ ಆ್ಯನಿವರ್ಸರಿ; ಇಲ್ಲಿವೆ ರೊಮ್ಯಾಂಟಿಕ್ ಫೋಟೋಗಳು

ಇತ್ತ ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದರು. ಇವರಿಬ್ಬರದ್ದೂ ಮೇಡ್ ಫಾರ್ ಈಚ್ ಅದರ್ ಎನ್ನವಂತಹ ಜೋಡಿ. ಖಾಸಗಿ ಜೀವನವನ್ನು, ಸಾರ್ವಜನಿಕ ಜೀವನವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ. ಈ ಬಗ್ಗೆ ಅನುಷ್ಕಾ ಮಾತನಾಡುತ್ತಾ, ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾಗ ಮದುವೆ ಸಹಜ ಎನಿಸಿ ಬಿಡುತ್ತದೆ. ಮದುವೆಯಾದ ಬಳಿಕ ಹೆಣ್ಣು ಮಕ್ಕಳಿಗೆ ಕರಿಯರ್ ಇರಲ್ಲ ಎಂದು ನನಗನಿಸುವುದಿಲ್ಲ. ಈಗಿನ ಕಾಲದಲ್ಲಿ ಮಹಿಳೆಯರು ಮನೆ ಒಳಗೆ, ಹೊರಗೂ ದುಡಿಯುತ್ತಾರೆ. ಮದುವೆ ಒಂದು ಬಂಧನವಲ್ಲ. ಎಂಜಾಯ್ ಮಾಡಿ ಎಂದು ಅನುಷ್ಕಾ ಹೇಳಿದ್ದಾರೆ.

ಕ್ರಿಕೆಟಿಗರ ಹೃದಯ ಗೆದ್ದ ವಿರುಷ್ಕಾ ಜೋಡಿಯ ತ್ಯಾಗ!

ಇನ್ನು ಮುಂದುವರೆಯುತ್ತಾ, ಪ್ರೆಗೆನ್ಸಿ ಬಗೆಗಿನ ರೂಮರ್ ಗಳಿಗೆ ಪ್ರತಿಕ್ರಯಿಸುತ್ತಾ, ಮದುವೆಯಾಗಿದ್ದೇವೆ ಎಂದರೆ ನಂತರ ಮಕ್ಕಳನ್ನು ಮಾಡಿಕೊಳ್ಳಬೇಕೆಂದಿಲ್ಲ. ಗರ್ಭಿಣಿಯಾಗಿದ್ದೇನೆ ಎಂದರೆ ಮುಚ್ಚಿಡಲು ಸಾಧ್ಯವಿಲ್ಲ.ತಿಂಗಳು ಕಳೆದಂತೆ ಗೊತ್ತಾಗುತ್ತದೆ ಎಂದು ಅನುಷ್ಕಾ ಹೇಳಿದ್ದಾರೆ.