ಊರಿಗೂರನ್ನೇ ಹರಿದುಮುಕ್ಕುವ ಡಕಾಯಿತರ ಚಂಬಲ್!

ತೆರೆಗಪ್ಪಳಿಸಲು ಸಿದ್ಧವಾಗಿದೆ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ | ‘ಸವಾರಿ’ ಖ್ಯಾತಿಯ ನಿರ್ದೇಶಕ ಜೇಕಬ್‌ ವರ್ಗೀಸ್‌ ನಿರ್ದೇಶನ ಸೋನು ಗೌಡ ನಾಯಕಿ | ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಬ್ಬ ದಕ್ಷ ಅಧಿಕಾರಿಯ ಚಿತ್ರ

Sathish Ninasam Kannada Movie Chambal To Hit Screen on Feb 22

ಜೇಕಬ್ ವರ್ಗೀಸ್ ರಿಯಲಿಸ್ಟಿಕ್ ಚಿತ್ರಗಳಿಗೆ ಹೆಸರಾದವರು. ಈ ಹಿಂದೆ ಗಣಿ ಧೂಳಿನೊಳಗೆ ಮುಚ್ಚಿ ಹೋಗಿದ್ದ ಸತ್ಯಗಳಿಗೆ ಪೃಥ್ವಿ ಮೂಲಕ ಅವರು ಕಣ್ಣಾಗಿದ್ದರು. ಈಗ ಜನಪರ ಅಧಿಕಾರಿಯೊಬ್ಬರ ಸ್ಫೂರ್ತಿಯಿಂದ ಊರಿಗೂರನ್ನೇ ಹರಿದುಮುಕ್ಕುವ ಡಕಾಯಿತರ ಕಥೆಯೊಂದನ್ನು ಚಂಬಲ್ ಮೂಲಕ ಹೇಳ ಹೊರಟಿದ್ದಾರೆ.

ಇದನ್ನೂ ಓದಿ: ಚಂಬಲ್ ನನಗೆ ಆಸ್ಟ್ರೇಲಿಯಾ ಪಿಚ್ ಇದ್ದಂತೆ: ನೀನಾಸಂ ಸತೀಶ್

ಚಂಬಲ್ ಯಾರ ಬದುಕಿನ ಕಥೆಯನ್ನೂ ಆಧರಿಸಿದ ಕಥೆಯಲ್ಲ. ಈ ವಿಚಾರವನ್ನು ನಿರ್ದೇಶಕರು ಈಗಾಗಲೇ ಖಚಿತಪಡಿಸಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಜನಪರವಾದ ಅಧಿಕಾರಿ, ಭ್ರಷ್ಟ ಕುಳಗಳ ಜೊತೆಗೇ ಭರಪೂರವಾದ ಕಾಮಿಡಿ, ನವಿರಾದ ಪ್ರೇಮ ಕಥೆ ಸೇರಿದಂತೆ ಎಲ್ಲವೂ ಇದೆ.

ಆದರೆ ಇದೆಲ್ಲದರ ಜೊತೆಗೇ ಚಂಬಲ್ ಸಾಮಾಜಿಕ ಕ್ರಾಂತಿಯೊಂದಕ್ಕೆ ಉತ್ತೇಜನ ನೀಡುವಂಥಾ ವಿಚಾರಗಳನ್ನೂ ಕೂಡಾ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಎಲ್ಲರನ್ನೂ ಕಿತ್ತು ತಿನ್ನುವ ಭ್ರಷ್ಟರ ಬಗ್ಗೆ ಜನಸಾಮಾನ್ಯರಲ್ಲಿಯೂ ಒಂದು ಆಕ್ರೋಶವಿದೆ. ದನ್ನು ಬಡಿದೆಬ್ಬಿಸುವಂಥಾ ರೋಚಕ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅದರ ಮಜಾ ಎಂಥಾದ್ದೆಂಬುದು ಈ  ವಾರವೇ ತಿಳಿಯಲಿದೆ.

ಇದನ್ನೂ ಓದಿ: ಚಂಬಲ್ ಚಿತ್ರಕ್ಕೆ ಸೋನು ಗೌಡ ಭರ್ಜರಿ ಫೋಟೋಶೂಟ್ !

Latest Videos
Follow Us:
Download App:
  • android
  • ios