ಚಂಬಲ್ ಚಿತ್ರಕ್ಕೆ ಸೋನು ಗೌಡ ಭರ್ಜರಿ ಫೋಟೋಶೂಟ್ !

ಸೋನು ಗೌಡ ಸದ್ಯಕ್ಕೆ ಕನ್ನಡದ ಬ್ಯುಸಿ ನಟಿ. ಅವರೀಗ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ. ಈ ಫೋಟೋಶೂಟ್‌ನಲ್ಲಿ ಸೋನು ಹೊಸ ಲುಕ್‌ ಭರ್ಜರಿ ಆಗಿದೆ. ಹಾಗಂತ ಇದೇನು ಹೊಸದೊಂದು ಸಿನಿಮಾಕ್ಕಾಗಿಯೋ ಅಥವಾ ಹೊಸ ಅವಕಾಶಗಳಿಗೋ ಅಂತೇನು ಅಲ್ಲ. ಅವರು ಚಂಬಲ್‌ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಅದರ ಪ್ರಮೋಷನ್‌ಗಾಗಿಯೇ ಮಾಡಿಸಿದ ಫೋಟೋಶೂಟ್‌ ಇದು

Actress Sonu gowda photoshoot for Sandalwood movie chambal

 

‘ಸವಾರಿ’ ಖ್ಯಾತಿಯ ನಿರ್ದೇಶಕ ಜೇಕಬ್‌ ವರ್ಗೀಸ್‌ ನಿರ್ದೇಶನ ಹಾಗೂ ಸತೀಶ್‌ ನೀನಾಸಂ ಅಭಿನಯದ ಚಿತ್ರವಿದು. ಇದರಲ್ಲಿ ಸೋನು ಗೌಡ ನಾಯಕಿ. ಫೆಬ್ರವರಿ ಎರಡನೇ ವಾರಕ್ಕೆ ಈ ಚಿತ್ರ ತೆರೆಗೆ ಬರುವುದು ಬಹುತೇಕ ಖಚಿತ. ಈ ಚಿತ್ರದ ಮೇಲೆ ಸೋನು ಕೂಡ ಸಾಕಷ್ಟುನಿರೀಕ್ಷೆ, ಕನಸು ಕಟ್ಟಿಕೊಂಡಿದ್ದಾರೆ.

‘ಫೋಟೋಶೂಟ್‌ ಮಾಡಿಸದೆ ತುಂಬಾ ದಿನಗಳಾಗಿದ್ದವು. ಅದಕ್ಕಾಗಿಯೇ ಚೆಂದದ ಒಂದು ಫೋಟೋಶೂಟ್‌ ಮಾಡಿಸೋಣ ಅಂತ ಯೋಚಿಸುತ್ತಿದ್ದೆ. ಅದಕ್ಕೊಂದು ನೆಪ ಬೇಕಿತ್ತು. ನನಗೆ ಹೊಳೆದಿದ್ದು ‘ಚಂಬಲ್‌’ ಪ್ರಮೋಷನ್‌. ಇದು ನನಗೆ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಚಿತ್ರ. ನಟನೆಗೆ ಹೆಚ್ಚು ಅವಕಾಶ ಇರುವಂತಹ ಪಾತ್ರವೇ ನನಗಿಲ್ಲಿ ಸಿಕ್ಕಿದೆ. ಮೇಲಾಗಿ ಸಕ್ಸಸ್‌ಫುಲ್‌ ನಿರ್ದೇಶಕರು ಹಾಗೆಯೇ ಸ್ಟಾರ್‌ ಆ್ಯಕ್ಟರ್‌. ಅವರ ಕಾಂಬಿನೇಷನ್‌ ಸಿನಿಮಾ ಅನ್ನೋದು ನನಗೂ ಸಾಕಷ್ಟುಭರವಸೆ ಮೂಡಿಸಿದೆ’ ಎನ್ನುತ್ತಾರೆ ಸೋನು ಗೌಡ. ಇದೇ ತಿಂಗಳ 28ಕ್ಕೆ ಈ ಚಿತ್ರದ ಟ್ರೇಲರ್‌ ಕೂಡ ಹೊರ ಬರುತ್ತಿದೆ.

ಉಪೇಂದ್ರ ಪತ್ನಿ ಪಾತ್ರದಲ್ಲಿ ಸೋನು

ಉಪೇಂದ್ರ ಅಭಿನಯ ಹಾಗೂ ಆರ್‌. ಚಂದ್ರು ನಿರ್ದೇಶನದ ‘ಐ ಲವ್‌ ಯು’ ಚಿತ್ರದಲ್ಲೂ ಸೋನು ಗೌಡಗೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಈಗಾಗಲೇ ಸುದ್ದಿ ಆದಂತೆ ಚಿತ್ರದಲ್ಲಿ ಉಪೇಂದ್ರ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ಸೋನು. ಆದರೆ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡಲು ನಿರಾಕರಿಸುವ ಅವರು, ತುಂಬಾ ಪ್ರಾಮುಖ್ಯತೆ ಇರುವ ಪಾತ್ರ. ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ. ಇದೇ ಮೊದಲು ಸ್ಟಾರ್‌ ಡೈರೆಕ್ಟರ್‌ ಹಾಗೂ ಸ್ಟಾರ್‌ ನಟನ ಸಿನಿಮಾದಲ್ಲಿ ಅಭಿನಯಿಸಿದ್ದೇನೆ ಅಂತ ಬಣ್ಣಿಸುತ್ತಾರೆ ಸೋನು.

Latest Videos
Follow Us:
Download App:
  • android
  • ios