ಮುಂಬೈ (ಜ. 30): ಸಾರಾ ಅಲಿಖಾನ್ ಬಾಲಿವುಡ್ ನ ಬಿಂದಾಸ್ ಹುಡುಗಿ ಎಂದೇ ಕರೆಸಿಕೊಳ್ಳುವ ಬೆಡಗಿ. ಯಾವಾಗಲೂ ಸುದ್ಧಿಯಾಗುತ್ತಲೇ ಇರುತ್ತಾರೆ. 

ಇತ್ತೀಚಿಗೆ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ತಮ್ಮ ಲೈಫ್, ಫ್ಯಾಮಿಲಿ, ಲವ್ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ವಿಷಯ ಇದಲ್ಲ. ಈ ಕಾರ್ಯಕ್ರಮಕ್ಕೆ ಇವರು ಹಾಕಿಕೊಂಡು ಬಂದಿದ್ದ ತುಂಡುಡುಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. 

ಇಂತಹ ಟ್ರೋಲ್ ಗಳೆಲ್ಲಾ ಸಿನಿಮಾ ಮಂದಿಗೆ ಹೊಸ ವಿಚಾರವಲ್ಲ. ಅವರು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದು ಇಲ್ಲ. ಸಾರಾ ಕೂಡಾ ಇದನ್ನು ಕೂಲಾಗಿ ತೆಗೆದುಕೊಂಡರು. ‘ಹಹಹ..! ಇದು ಸಿಕ್ಕಾಪಟ್ಟೆ ಫನ್ನಿಯಾಗಿದೆ ಎಂದು ಲಘುವಾಗಿ ತೆಗೆದುಕೊಂಡರು. 

ಸಾರಾ ಅಲಿಖಾನ್ ಬಾಲಿವುಡ್ ರೇಸ್ ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಕೇದಾರನಾಥ್ ಹಾಗೂ ಸಿಂಬಾ ಚಿತ್ರದಲ್ಲಿ ನಟಿಸಿದ್ದಾರೆ. ಸಿಂಬಾ ಚಿತ್ರ ಬ್ಲಾಕ್ ಬಸ್ಟರ್ ಚಿತ್ರವಾಗಿದೆ.