ಯಜಮಾನ ಚಿತ್ರದ ಮೊದಲ ಹಾಡು ‘ಶಿವನಂದಿ...’ ಸಂಕ್ರಾಂತಿ ಹಬ್ಬದ ದಿನ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಒಂದು ಮಿಲಿಯನ್ ಮಂದಿ ವೀಕ್ಷಿಸಿದ್ದು, ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಇದಾದ ನಂತರ ಚಿತ್ರ ತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ.

ಯಜಮಾನ ಟೀಸರ್‌ಗೆ ಸಿಕ್ತು ಭಾರೀ ರೆಸ್ಪಾನ್ಸ್

ಸೋನು ನಿಗಮ್ ಹಾಗೂ ಶ್ರೇಯಾ ಘೋಶಾಲ್ ಧ್ವನಿಯಲ್ಲಿ ಮೂಡಿ ಬಂದಿರುವ ‘ಒಂದು ಮುಂಜಾನೆ..’ಯೂ ಸೊಗಸಾಗಿದೆ. ಹಾಡಿನ ಸಾಹಿತ್ಯವನ್ನು ಕವಿರಾಜ್ ಬರೆದರೆ, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಮೊದಲನೇ ಹಾಡು ‘ಶಿವಲಿಂಗ..’ಯುಟ್ಯೂಬ್‌ನಲ್ಲಿ #1 ಟ್ರೆಂಡ್ ಆಗಿದ್ದು, ಸ್ಯಾಂಡಲ್‌ವುಡ್ ಡಿಜಿಟಲ್‌ನಲ್ಲಿ ದಾಖಲೆ ಸೃಷ್ಟಿಸಿದೆ. ಇನ್ನು ದರ್ಶನ್ ನಟಿಸಿರುವ 'ಚಕ್ರವರ್ತಿ' ಸಿನಿಮಾದಲ್ಲೂ ‘ಒಂದು ಮಳೆ ಬಿಲ್ಲೂ ಒಂದು ಮಳೆ ಮೋಡ’ ರೊಮ್ಯಾಂಟಿಕ್ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದೀಗ ಅದೇ ಸಾಲಿನಲ್ಲಿ ಮತ್ತೊಂದು ರೊಮ್ಯಾಂಟಿಕ್ ಹಾಡು ಮೂಡಿ ಬಂದಿದ್ದು, ಚಿತ್ರದ ಬಗ್ಗೆ ಕನ್ನಡ ಸಿನಿ ರಸಿಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ