ರಿಷಬ್‌ ಶೆಟ್ಟಿನಿರ್ದೇಶನದ ‘ರುದ್ರಪ್ರಯಾಗ’ ಚಿತ್ರಕ್ಕೆ ಯಂಗ್‌ ಆ್ಯಂಡ್‌ ಎನರ್ಜೆಟಿಕ್‌ ನಾಯಕ ಸಿಕ್ಕಿದ್ದಾರೆ. ಅವರೇ ಅನಂತ್‌ನಾಗ್‌. ಈ ಬೆಳವಣಿಗೆ ಕುರಿತು ರಿಷಬ್‌ ಹೇಳಿದ್ದು ಒಂದೇ ಮಾತು- ‘ಕತೆ ಪೂರ್ತಿ ಮಾಡಿಕೊಂಡು ಹೋಗಿ ಅನಂತ್‌ನಾಗ್‌ ಅವರಿಗೆ ಹೇಳಿದೆ. ಕತೆ ಕೇಳಿ ತುಂಬಾ ಖುಷಿಯಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಈ ಚಿತ್ರದಲ್ಲಿ ಅವರದು ಮುಖ್ಯ ಪಾತ್ರವಲ್ಲ, ಅವರೇ ಹೀರೋ’.

ಒಂಭತ್ತು ಪಾತ್ರಗಳ ಕತೆ:
ಇಡೀ ಚಿತ್ರದಲ್ಲಿ ಮುಖ್ಯವಾಗಿ 9 ಪ್ರಮುಖ ಪಾತ್ರಗಳು ಬರುತ್ತವೆ. ಇವರ ಜತೆಗೆ ಎರಡು ಲೀಡ್‌ ಪಾತ್ರಗಳು. ಇದರಲ್ಲಿ ಒಂದು ಹೀರೋ ಪಾತ್ರ. ಅದು ಅನಂತ್‌ನಾಗ್‌ ಅವರು. ಮತ್ತೊಂದು ಫೀಮೇಲ್‌ ಲೀಡ್‌ ಪಾತ್ರದ ಹುಡುಕಾಟ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಈ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆಯಲ್ಲಿದ್ದಾರೆ ನಿರ್ದೇಶಕರು.

ಆಹಾರ ಸಂಸ್ಥೆಯ ರಾಯಭಾರಿಯಾದ ಅನಂತ್ ನಾಗ್

ಡಿಸೆಂಬರ್‌ನಲ್ಲಿ ಶೂಟಿಂಗ್‌:
ರಿಷಬ್‌ ಶೆಟ್ಟಿ‘ರುದ್ರಪ್ರಯಾಗ’ ಚಿತ್ರವನ್ನು ಡಿಸೆಂಬರ್‌ ತಿಂಗಳಲ್ಲಿ ಶೂಟಿಂಗ್‌ ಮೈದಾನಕ್ಕೆ ಇಳಿಸಲು ನಿರ್ಧರಿಸಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕತೆ ಓಕೆ ಆಗಿದ್ದು, ಕಲಾವಿದರ ಆಯ್ಕೆ ನಡೆಯುತ್ತಿದೆ. ಇಲ್ಲಿ ರಿಷಬ್‌ ಶೆಟ್ಟಿ ಕೇವಲ ನಿರ್ದೇಶಕ ಮಾತ್ರ. ಒಟ್ಟು 55 ದಿನಗಳ ಕಾಲ ಉತ್ತರಖಂಡ, ಬೆಳಗಾವಿ, ಖಾನಾಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಶೇ.90 ಭಾಗ ಚಿತ್ರೀಕರಣ ಬೆಳಗಾವಿ ಸುತ್ತಮುತ್ತ ನಡೆಸಲು ಪ್ಲಾನ್‌ ಹಾಕಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನೆನಪುಗಳು ಅನಂತ

ರಿಷಬ್‌ ಶೆಟ್ಟಿಮುಂದಿರುವ ಚಿತ್ರಗಳು:
ಈಗ ರಿಷಬ್‌ ಶೆಟ್ಟಿ‘ರುದ್ರಪ್ರಯಾಗ’ ಚಿತ್ರದ ನಿರ್ದೇಶನದಲ್ಲಿ ಮಾತ್ರ ತೊಡಗಿದ್ದಾರೆ. ಇದರ ನಂತರ ‘ಬೆಲ್‌ಬಾಟಂ 2’ ಸೆಟ್ಟೇರಲಿದೆ. ಇಲ್ಲಿ ರಿಷಬ್‌ ಹೀರೋ. ನಂತರ ‘ಆ್ಯಂಟಗನಿ ಶೆಟ್ಟಿ’ ಸಿನಿಮಾ ಟೇಕಾಫ್‌ ಆಗಲಿದೆ. ಇದರ ನಡುವೆ ಮೂರು ಚಿತ್ರಗಳ ಕತೆ ಕೇಳಿದ್ದಾರೆ. ಈ ಪೈಕಿ ‘ದಯವಿಟ್ಟು ಗಮನಿಸಿ’ ಚಿತ್ರದ ಮೂಲಕ ಗಮನ ಸೆಳೆದ ರೋಹಿತ್‌ ಪದಕಿ ನಿರ್ದೇಶನದ ಕತೆಯೂ ಇದೆ. ‘ರೋಹಿತ್‌ ಅವರು ಬಂದು ಕತೆ ಹೇಳಿದ್ದಾರೆ. ಚೆನ್ನಾಗಿದೆ. ಸದ್ಯಕ್ಕೆ ಈ ಸಿನಿಮಾ ಮಾತುಕತೆಯ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಕನಿಷ್ಠ ಮೂರರಿಂದ ನಾಲ್ಕು ಚಿತ್ರಗಳು ನನ್ನ ನಟನೆಯಲ್ಲಿ ಸೆಟ್ಟೇರಲಿವೆ’ ಎನ್ನುತ್ತಾರೆ ರಿಷಬ್‌ ಶೆಟ್ಟಿ. ಈಗ ಅವರ ಚಿತ್ರ ‘ರುದ್ರಪ್ರಯಾಗ’ದತ್ತ.

"