ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದರು. ಆದರೆ ಸ್ವಯಂ ಸೇವಕರಿಗೆ ನೀರು ಮತ್ತು ಆಹಾರ ನೀಡಲು ಸ್ವತಃ ನಟ ದುನಿಯಾ ವಿಜಯ್ ಅಭಯಾರಣ್ಯದ ಕಡೆ ಭಾನುವಾರವೇ ತೆರಳಿದ್ದರು.

ಬೆಂಗಳೂರು[ಫೆ. 24] ಬಂಡೀಪುರದ ಅವಘಡದ ಬಗ್ಗೆ ಸಿನಿಮಾ ನಾಯಕರು ದನಿ ಎತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಹಾಯ ನೀಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುನಿಯಾ ವಿಜಯ್ ತಾವೇ ಮುಂದೆ ನಿಂತು ಸ್ವಯಂ ಸೇವಕರಿಗೆ ಆಹಾರ ಮತ್ತು ನೀರು ಪೂರೖಕೆ ಮಾಡುತ್ತಿದ್ದಾರೆ. ಅಲ್ಲದೇ ಹೆಂಡತಿಯ ನೆರವನ್ನು ಪಡೆದುಕೊಂಡಿದ್ದು ಸ್ವತಃ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. 

ಅಭಯಾರಣ್ಯದ ಕಡೆ ಹೊರಟ ಚಂದನವನದ ‘ಕರಿಚಿರತೆ’

ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು‌ ಚಂದನದವನದ ಕರಿಚಿರತೆ ಭಾನುವಾರವೇ ಅರಣ್ಯಕ್ಕೆ ಧಾವಿಸಿತ್ತು. ಈ ಮೂಲಕ ದುನಿಯಾ ವಿಜಯ್ ಉಳಿದ ನಟರಿಗೆ ಮಾದರಿಯಾಗಿದ್ದಾರೆ.