ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದಾರೆ. ನೆರವು ನೀಡಲು ನಟ ದುನಿಯಾ ವಿಜಯ್ ಅಭಯಾರಣ್ಯದ ಕಡೆ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು[ಫೆ. 24] ಬಂಡೀಪುರದ ಅವಘಡದ ಬಗ್ಗೆ ಸಿನಿಮಾ ನಾಯಕರು ದನಿ ಎತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದರೆ ದುನಿಯಾ ವಿಜಮ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ತಾವೇ ಸ್ವತಃ ನೆರವು ನೀಡಲು ಧಾವಿಸಿದ್ದಾರೆ.
ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಚಂದನದವನದ ಕರಿಚಿರತೆ ಅರಣ್ಯದ ಕಡೆ ಹೊರಟಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿ ಆಗಿರುವವರಿಗೆ ಆಹಾರ ನೀರು ಮತ್ತಿತರ ವಸ್ತು ಕೊಂಡೊಯ್ಯುತ್ತಿದ್ದಾರೆ.
