Asianet Suvarna News Asianet Suvarna News

Sandalwood ಹೊಸ ಬಾಂಡ್ ಸಿನಿಮಾ Ghost: ಟ್ರೆಂಡಿಂಗ್‌ನಲ್ಲಿ ಶಿವಣ್ಣನ OGM ಸಾಂಗ್!

ಘೋಸ್ಟ್... ಸ್ಯಾಂಡಲ್‌ವುಡ್‌ನ ಹೊಸ ಫೈಯರ್. ಕಣ್ಣಲ್ಲೆ ಬಾಕ್ಸಾಫೀಸ್ ಧೂಳಿಪಟ ಮಾಡೋ ಸ್ಟಾರ್ ಹಾಗು ವಿಭಿನ್ನ ಹಾಗು ವಿಚಿತ್ರವಾಗಿ ಯೋಚ್ನೆ ಮಾಡಿ ಕಥೆ ಬರೆಯೋ ಡೈರೆಕ್ಟರ್ ಒಂದಾದ್ರೆ ಅಲ್ಲಿ ಸೃಷ್ಟಿಯಾಗೋದೇ ಘೋಸ್ಟ್.

Sandalwood New Bond Movie Ghost Trending OGM Song gvd
Author
First Published Sep 29, 2023, 9:03 PM IST

ಘೋಸ್ಟ್... ಸ್ಯಾಂಡಲ್‌ವುಡ್‌ನ ಹೊಸ ಫೈಯರ್. ಕಣ್ಣಲ್ಲೆ ಬಾಕ್ಸಾಫೀಸ್ ಧೂಳಿಪಟ ಮಾಡೋ ಸ್ಟಾರ್ ಹಾಗು ವಿಭಿನ್ನ ಹಾಗು ವಿಚಿತ್ರವಾಗಿ ಯೋಚ್ನೆ ಮಾಡಿ ಕಥೆ ಬರೆಯೋ ಡೈರೆಕ್ಟರ್ ಒಂದಾದ್ರೆ ಅಲ್ಲಿ ಸೃಷ್ಟಿಯಾಗೋದೇ ಘೋಸ್ಟ್. ಶಿವರಾಜ್ ಕುಮಾರ್ ನಿರ್ದೇಶಕ ಶ್ರೀನಿ ಕಾಂಬಿನೇಷನ್ನ ಘೋಸ್ಟ್ ಸ್ಯಾಂಪಲ್ಸ್ಗಳು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಎಬ್ಬಿಸಿವೆ. ಆದ್ರೆ ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಈ ಘೋಸ್ಟ್ ನಲ್ಲಿ ಬಾಂಡ್ ಸ್ಟೈಲ್ ಇದೆ. ಈಗಿನ ಟ್ರೆಂಡ್ಗೆ ತಕ್ಕ ಹಾಗೆ ಕನ್ನಡದ ಬಾಂಡ್ ಸಿನಿಮಾ ಘೋಸ್ಟ್ ಅನ್ನೋ ಟಾಕ್ ಶುರುವಾಗಿದೆ. ಸ್ಯಾಂಡಲ್ವುಡ್ನಲ್ಲಿ ಹೊಸ ಜೇಮ್ಸ್ ಬಾಂಡ್ ಶಿವಣ್ಣ ಅನ್ನೋ ಮಾತುಗಳು ಕೇಳಿಸ್ತಿವೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಣ್ಣಾ ಬಾಂಡ್.. ಆದ್ರೆ ಶಿವಣ್ಣ ಕನ್ನಡದ ಹೊಸ ಜೇಮ್ಸ್ ಬಾಂಡ್. ಯೆಸ್, ಅಪ್ಪು ಅಣ್ಣಾ ಬಾಂಡ್ ಸಿನಿಮಾ ಮಾಡಿದ್ದಾಗೆ ಅವರ ವಿಭಿನ್ನ ಸ್ಟೈಲ್ ಮ್ಯಾನರಿಸಂ ಸಿಕ್ಕಾಪಟ್ಟೆ ಕಿಕ್ ಕೊಟ್ಟಿತ್ತು. ಈಗ ಶಿವಣ್ಣನ ಘೋಸ್ಟ್ನಲ್ಲೂ ಜೇಮ್ಸ್ ಬಾಂಡ್ ಲುಕ್. ಸ್ಟೈಲ್ ಗಮನ ಸೆಳೆಯುತ್ತಿದೆ. ಸ್ಯಾಂಡಲ್ವುಡ್ಗೆ ಬಾಂಡ್ ಸಿನಿಮಾ ತಂದಿದ್ದು ಡಾಕ್ಟರ್ ರಾಜ್ ಕುಮಾರ್. ಜೇಡರ ಬಲೆ ಸಿನಿಮಾದಲ್ಲಿ ಅಣ್ಣಾವ್ರ ಬಾಂಡ್ ಸ್ಟೈಲ್ ಮರೆಯೋಕೆ ಸಾಧ್ಯನಾ..? ಘೋಸ್ಟ್ ಟೈಟಲ್ ಎಷ್ಟು ಇಂಟ್ರೆಸ್ಟಿಂಗ್ ಆಗಿದೆಯೋ ಸಿನಿಮಾದ ಸ್ಟೋರಿ ಬೋರ್ಡ್ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಅನ್ನಿಸುತ್ತೆ. 

ಕಾವೇರಿಗಾಗಿ ಕರ್ನಾಟಕ ಬಂದ್: ಶಿವಣ್ಣ ನೇತೃತ್ವದಲ್ಲಿ ಕನ್ನಡ ಚಿತ್ರರಂಗದಿಂದ ಹೋರಾಟಕ್ಕೆ ಬೆಂಬಲ!

ಘೋಸ್ಟ್ ಕತೆ ನಡೆಯೋದು ಒಂದು ದೊಡ್ಡ ಜೈಲಿನಲ್ಲಿ, ಕೇವಲ 48 ಗಂಟೆಯಲ್ಲಿ ನಡೆಯೋ ಕಥೆ. ಈ ಸಿನಿಮಾದಲ್ಲಿ ಹೀರೋಯಿನ್ ಇಲ್ಲ. ಶಿವಣ್ಣನೇ ಎಲ್ಲ. ವಾರದ ಹಿಂದೆ ಒರಿಜಿನಲ್ ಗ್ಯಾಂಗ್ಸ್ಟರ್ನ ಸಾಂಗ್ ಒಜಿಎಂ ರಿಲೀಸ್ ಆಗಿತ್ತು. ಈ ಯುನಿವರ್ಸೆಲ್ ಸಾಂಗ್ ನಲ್ಲಿ ಕನ್ನಡ, ಇಂಗ್ಲೀಷ್, ತಮಿಳು, ತೆಲುಗು ಭಾಷೆಯಲ್ಲಿ ಲಿರಿಕ್ಸ್ ಬರೆದಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ಕ ಈ ಹಾಡಿಗೆ ಕನ್ನಡದಲ್ಲಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಎಮ್ ಸಿ ಚೇತನ್ ತೆಲುಗು ತಮಿಳು ಲಿರಿಕ್ಸ್ಗೆ ಧ್ವನಿಯಾಗಿದ್ದಾರೆ. ಮಲೆಯಾಳಂನಲ್ಲಿ ಜಿತಿನ್ ರಾಜ್ ಹಾಡಿದ್ದಾರೆ. 

Ghost ಜೋಶ್ ಹೆಚ್ಚಿಸಿದ 'OGM': BIG ಡ್ಯಾಡಿಗಾಗಿ ಅರ್ಜುನ್ ಜನ್ಯಾ ಭರ್ಜರಿ ಟ್ಯೂನ್!

ಈ ಒರಿಜಿನಲ್ ಗ್ಯಾಂಗ್ಸ್ಟರ್ ಸಾಂಗ್ ಈಗ ಟ್ರೆಂಡಿಗ್ನಲ್ಲಿದೆ. ಔಟ್ ಆ್ಯಂಡ್ ಔಟ್ ಥ್ರಿಲ್ಲರ್ ಸ್ಟೋರಿ ಸಿನಿಮಾ ಘೋಸ್ಟ್. ಸಂದೇಶ್ ಎನ್ ನಿರ್ಮಾಣದ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅನುಪಮ್ ಖೇರ್ ಮೆಲೆಯಾಳಂ ಸ್ಟಾರ್ ಜಯರಾಂ ನಟಿಸಿದ್ದಾರೆ. ಅಕ್ಟೋಬರ್ 19ಕ್ಕೆ ಘೋಸ್ಟ್ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗ್ತಿದೆ. ಘೋಸ್ಟ್ ಟ್ರೈಲರ್ ರಿಲೀಸ್ಗೆ ಕೌಂಟ್ ಡೌಟ್ ಸ್ಟಾರ್ಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಿಂದಿಯಲ್ಲಿ ತಯಾರಾಗಿರೋ ಘೋಸ್ಟ್ ಟ್ರೈಲರ್ ಅಕ್ಟೋಬರ್ 1ಕ್ಕೆ ರಿಲೀಸ್ ಆಗ್ತಿದೆ. ಇದೇ ಅಕ್ಟೋಬರ್ 8ರಂದು ಬಳ್ಳಾರಿಯಲ್ಲಿ ಘೋಸ್ಟ್ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. 

Follow Us:
Download App:
  • android
  • ios