ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್-2' ಶೋ ಜನಪ್ರಿಯತೆ ಮೂಲಕ ಮನೆ ಮಾತಾಗಿದೆ. ತೀರ್ಪುಗಾರರ ಪಾತ್ರ ಪರಿಚಯದಿಂದ, ಸ್ಟೇಜ್ ಅಲಂಕಾರ, ಸ್ಪರ್ಧಿಗಳ ಹುಮ್ಮಸ್ಸು ಎಲ್ಲವೂ ಶೋ ಹಿಟ್ ಆಗಲು ಕಾರಣವಾಗುತ್ತದೆ. ಆದರೆ ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಅಲ್ಲಿ ಆಡುವ ಕೆಲವು ಮಾತುಗಳು ನೋವುಂಟು ಮಾಡುತ್ತವೆ.

'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

ಶನಿವಾರ ಅಂದರೆ ಸೆಪ್ಟೆಂಬರ್ 28, 2019 ರಂದು ಪ್ರಸಾರವಾದ ಎಪಿಸೋಡ್‌ನಲ್ಲಿ ನಿರೂಪಕಿ ಅನುಶ್ರೀ ತೀರ್ಪುಗಾರರ ಪಾತ್ರ ಪರಿಚಯ ಮಾಡಿದ ನಂತರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ನೃತ್ಯದಲ್ಲಿರುವ ನವ ರಸಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. 'ನನಗೆ ಗೊತ್ತಿರುವುದು ಟೊಮ್ಯಾಟೊ ರಸ, ಬೇಳೆ ರಸ, ನಿಂಬೆ ಹಣ್ಣಿನ ರಸ, ವಾಟರ್ ಮೆಲನ್ ರಸ, ಆ್ಯಪಲ್ ರಸ, ಮೂಸಂಬಿ ರಸ' ಎಂದು ಉತ್ತರಿಸುತ್ತಾರೆ.

ಲಂಗ ದಾವಣೆಯಲ್ಲಿ ಮಿಂಚುವ ‘ಕಮಲಿ’ ನಿಂಗಿಯ ಡಿಫರೆಂಟ್ ಲುಕ್!

ಇದಕ್ಕೆ ನಿರೂಪಕಿ ಇದೆಲ್ಲಾ ಒಂದು ರಸನಾ? ಎಂದು ಮರುಪ್ರಶ್ನೆ ಮಾಡುತ್ತಾರೆ. ‘ನೀವು ಇನ್ಯಾವ ರಸದ ಬಗ್ಗೆ ಕೇಳ್ತಿದ್ದೀರಾ? ನಾನು ಹೇಳುತ್ತಿರುವುದೇ ನವರಸಗಳು' ಎಂದು ಹೇಳುತ್ತಾ ಅದಕ್ಕೆ ಅಭಿನಯಿಸಿ ತೋರಿಸುತ್ತಾರೆ. ನವರಸಗಳ ಬಗ್ಗೆ ಅರ್ಜುನ್ ಜನ್ಯ ಲಘುವಾಗಿ ಮಾತನಾಡಿದ್ದು ಪ್ರೇಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಸಂಗೀತದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಕಲೆ ಬಗ್ಗೆ ಗೇಲಿ ಮಾಡಿರುವುದು ಸರಿಯಲ್ಲ ಎಂದು ನೃತ್ಯ ಕಲಾವಿದರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ತೀರ್ಪುಗಾರರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಸಂಗೀತದ ಗುರುಗಳು ಇರುತ್ತಾರೆ. ಆದರೆ ನೃತ್ಯ ವೇದಿಕೆಯಲ್ಲಿ ಯಾಕೆ ನೃತ್ಯ ಕಲಾವಿದರನ್ನು ಕರೆಸುವುದಿಲ್ಲ? ಎಂಬ ಚರ್ಚೆ ಕೂಡಾ ನಡೆದಿತ್ತು.