Asianet Suvarna News Asianet Suvarna News

ಪ್ರೇಮ್ ಜನ್ಮ ಜಾಲಾಡಿದ ಶಿವಣ್ಣ ಮಹಿಳಾ ಅಭಿಮಾನಿ, ವಿಡಿಯೋ ವೈರಲ್

ಈ ವಿಲನ್ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹುಟ್ಟಿಕೊಳ್ಳುತ್ತಲೆ ಇವೆ. ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅದರಲ್ಲಿ ವಿಶೇಷವಾಗಿ ಶಿವಣ್ಣ ಅವರ ಮಹಿಳಾ ಅಭಿಮಾನಿಯೊಬ್ಬರು ಪ್ರೇಮ್ ಗೆ ಕ್ಲಾಸ್ ತೆಗೆದುಕೊಂಡಿದ್ದು ವೈರಲ್ ಆಗುತ್ತಿದೆ.

sandalwood movie the villain Shivrajkumar Fan slams director jogi prem Video Viral
Author
Bengaluru, First Published Oct 22, 2018, 3:05 PM IST
  • Facebook
  • Twitter
  • Whatsapp

ಸಾಮಾಜಿಕ ಜಾಲತಾಣದಲ್ಲಿಯಂತೂ ಪ್ರೇಮ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. 2006ರಿಂದಲೂ ಪ್ರೇಮ್ ಅಪ್‌ಡೇಟ್ ಆಗಿಲ್ಲವೆಂದು ಕನ್ನಡ ಚಿತ್ರ ಪ್ರೇಮಿಗಳು ಅಣಕಿಸುತ್ತಿದ್ದಾರೆ. ಅದರಲ್ಲಿಯೂ ಶಿವರಾಜ್‌ಕುಮಾರ್  ಮೇಲೆ ಕಿಚ್ಚ ಸುದೀಪ್ ಕೈ ಮಾಡಿರುವುದರ ವಿರುದ್ಧ, ಶಿವರಾಜ್‌ಕುಮಾರ್ ಅಭಿಮಾನಿಗಳು ಅತೀವ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರೇಮ್ ವಿರುದ್ಧದ ವಾಗ್ದಾಳಿ ಮುಂದುವರಿಯುತ್ತಿದೆ.

ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ನೀಡಿದ ರಕ್ಷಿತಾ

ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎಂದು ಪ್ರೇಮ್ ಮನವಿ ಮಾಡಿಕೊಂಡಿದ್ದರೂ ಅಭಿಮಾನಿಗಳ ಆಕ್ರೋಶ ಕಡಿಮೆ ಆಗಿಲ್ಲ. ಇನ್ನೊಂದು ಕಡೆ ರಕ್ಷಿತಾ ಪ್ರೇಮ್ ಬಹಿರಂಗ ಪತ್ರ ಬರೆದು ಟೀಕಾಕಾರಿಗೆ ಉತ್ತರ ನೀಡಿದ್ದಾರೆ. ಹಾಗಾದರೆ ಶಿವಣ್ಣ ಅವರ ಮಹಿಳಾ ಅಭಿಮಾನಿ ಪ್ರೇಮ್ ವಿರುದ್ಧ ಯಾವ ಪರಿ ಆಕ್ರೋಶ ಹೊರಕ್ಕೆ ಹಾಕಿದರು ನೀವೇ ಕೇಳಿ...  ಚಿತ್ರದ ಕ್ಲೈಮಾಕ್ಸ್ ಸೀನ್ ಕಟ್ ಮಾಡಿಸಬೇಕು ಎಂದು ಒತ್ತಾಯ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಯಾಕೆ ಕ್ಷಮೆ ಕೇಳುವ ಅಗತ್ಯ ಇಲ್ಲ ಎಂಬ ಸಮರ್ಥನೆ ನೀಡಿದ ಪ್ರೇಮ್

 

Follow Us:
Download App:
  • android
  • ios