- ಕೊಡಗಿನ ಚೆಲುವೆ ಮೋಕ್ಷಾ ಕುಶಾಲ್‌ ಇಷ್ಟುಹೇಳಿ ಬಾಯ್ತುಂಬ ನಕ್ಕರು. ಅವರು ಹೇಳಿದ್ದು‘ ನವರತ್ನ’ಚಿತ್ರಕ್ಕೆ ನಾಯಕಿ ಆಗಿ ಆಯ್ಕೆಯಾಗಿದ್ದರ ಬಗೆಯ ಕುರಿತು. ಇನ್ನು ಈ ಮೋಕ್ಷಾ ಕುಶಾಲ್‌ ಯಾರು ಅಂತ ನಮಗನಿಸಿದರೆ, ‘ಆದಿ ಪುರಾಣ’ ಹೆಸರಿನ ಚಿತ್ರ ನೆನಪಿಸಿಕೊಂಡರೆ ಸಾಕು. ಇದು ಮೋಕ್ಷಾ ಅಭಿನಯದ ಮೊದಲ ಚಿತ್ರ. ನವರತ್ನ ಅವರ ಎರಡನೇ ಚಿತ್ರ.

ದಸರಾಗೆ ಯುವರತ್ನ ಟೀಸರ್ ರಿಲೀಸ್!

‘ಪೂರ್ಣ ಪ್ರಮಾಣದಲ್ಲಿ ನಾನು ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಎಂಟ್ರಿಯಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಈ ಪಾತ್ರಕ್ಕೆ ಕೂರ್ಗಿ ಫೇಸ್‌ ಇರುವಂತಹ ಹುಡುಗಿ ಬೇಕಿತ್ತಂತೆ. ನಟಿಯಾಗಿ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಒಳ್ಳೆಯ ವೇದಿಕೆ ಅಂತ ಅಭಿನಯಿಸಲು ಒಪ್ಪಿಕೊಂಡೆ’ ಎನ್ನುತ್ತಾ ಚಿತ್ರಕ್ಕೆ ತಾವು ಆಯ್ಕೆಯಾದ ಬಗೆ ವಿವರಿಸಿದರು ಮೋಕ್ಷಾ ಕುಶಾಲ್‌.

ಮಿಸ್ ಇಲ್ಲದೆ ಚಾಮುಂಡಿ ಬೆಟ್ಟ ಹತ್ತೊ ಅಪ್ಪು! ಕಾರಣವಿದು

‘ನಾನಿಲ್ಲಿ ವೈಲ್ಡ್‌ಲೈಫ್‌ ಫೋಟೋಗ್ರಾಫರ್‌. ಹವ್ಯಾಸಕ್ಕಾಗಿ ಕ್ಯಾಮೆರಾ ಹೊತ್ತು ಕಾಡಿಗೆ ಹೋದಾಗ, ನಾಯಕನ ಪರಿಚಯವಾಗುತ್ತೆ. ಅದು ಹೇಗೆ, ಅಲ್ಲೇನು ನಡೆಯುತ್ತದೆ ಎನ್ನುವುದು ಕಥಾ ಹಂದರ’ ಎನ್ನುತ್ತಾ ಚಿತ್ರದ ಬಗೆ ಕುತೂಹಲ ಹುಟ್ಟಿಸುತ್ತಾರೆ ಮೋಕ್ಷಾ ಕುಶಾಲ್‌. ಪ್ರತಾಪ್‌ ರಾಜ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿದ ಚಿತ್ರವಿದು.

ಪುನೀತ್‌ಗೆ ಬುದ್ಧಿ ಹೇಳೋಕೆ ಮುಂದಾದ ಪ್ರಕಾಶ್ ರೈ?