ಪ್ರಿನ್ಸಿಪಾಲ್‌ ಪಾತ್ರದಲ್ಲಿ ರೈ

ಅಂದಹಾಗೆ ಈ ಚಿತ್ರದಲ್ಲಿ ನಟ ಪ್ರಕಾಶ್‌ ರೈ ಅವರು ಕಾಲೇಜಿನ ಪ್ರಿನ್ಸಿಪಾಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಯುವ ಸಮುದಾದ ಸುತ್ತ ಸಾಗುವ ಈ ಚಿತ್ರದಲ್ಲಿ ಕಾಲೇಜು ಕಾರಿಡಾರ್‌ ಕತೆಯೂ ಹೆಚ್ಚಾಗಿದೆ.

ಹಿರಿಯ ನಟನ ಮನೆಗೆ ಭೇಟಿ ನೀಡಿ ಆಸೆ ಈಡೇರಿಸಿದ ಯುವರತ್ನ!

ಅಲ್ಲಿ ವಿಲನ್‌, ಇಲ್ಲಿ ಪ್ರಿನ್ಸಿಪಾಲ್‌

ಹಾಗೆ ನೋಡಿದರೆ ಚುನಾವಣೆಗೂ ಮುನ್ನ ಪುನೀತ್‌ರಾಜ್‌ಕುಮಾರ್‌ ಅವರ ಚಿತ್ರದಲ್ಲೇ ಪ್ರಕಾಶ್‌ ರೈ ನಟಿಸಿದ್ದರು. ಅಲ್ಲೂ ಸಂತೋಷ್‌ ಆನಂದ್‌ ರಾಮ್‌ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದರು. ‘ರಾಜಕುಮಾರ’ ಚಿತ್ರದಲ್ಲಿ ಪ್ರಕಾಶ್‌ ರೈ ಅವರು ವಿಲನ್‌ ಪಾತ್ರದಲ್ಲಿ ನಟಿಸಿದ್ದರು. ಆಗ ವಿಲನ್‌ ಆದವರು, ಈಗ ಅದೇ ಜೋಡಿಯ ಚಿತ್ರದಲ್ಲಿ ಪ್ರಿನ್ಸಿಪಾಲ್‌ ಆಗಿದ್ದಾರೆ.

ಪುನೀತ್ ರಾಜ್‌ಕುಮಾರ್‌ಗೆ ಜೊತೆಯಾದ ಕಾನ್‌ಸ್ಟೇಬಲ್ ಸರೋಜ!

ಅರ್ಧ ಚಿತ್ರೀಕರಣ ಎಲ್ಲಿಗೆ ಬಂದಿದೆ?

ಈಗಾಗಲೇ ‘ಯುವರತ್ನ’ ಚಿತ್ರಕ್ಕೆ ಅರ್ಧ ಚಿತ್ರೀಕರಣ ಮುಗಿದಿದೆ. ಸದ್ಯ ಧಾರವಾಡದ ಕಾಲೇಜಿನಲ್ಲಿ ಐದನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯೇಶಾ ಸೈಗಲ್‌ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಧಿಕಾ ಶರತ್‌ ಕುಮಾರ್‌, ಧನಂಜಯ್‌ ಮುಂತಾದವರು ಚಿತ್ರಕ್ಕೆ ಜತೆಯಾಗಿದ್ದು, ಈಗ ಹೊಸದಾಗಿ ಪ್ರಕಾಶ್‌ ರೈ ಸೇರಿಕೊಂಡಿದ್ದಾರೆ.