ಬರೀ ಫಸ್ಟ್ ಲುಕ್ ಮೂಲಕವೇ ಚಂದವನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ‘ಯುವರತ್ನ’. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗಂತೂ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯಕ್ಕೀಗ ಈ ಚಿತ್ರದ ಟೀಸರ್ ಬಗೆಗಿನ ಕಾತರ ಸಾಕಷ್ಟು ಸದ್ದು ಮಾಡುತ್ತಿದೆ.

ಶೀಘ್ರದಲ್ಲೇ ‘ಯುವರತ್ನ’ ಚಿತ್ರದ ಟೀಸರ್ ಗ್ರಾಂಡ್ ಆಗಿ ಲಾಂಚ್ ಆಗಲಿದೆ. ಚಿತ್ರದ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ದಸರಾ ಹಬ್ಬಕ್ಕೆ ಗ್ಯಾರಂಟಿ...: ಚಿತ್ರದ ಟೀಸರ್ ಕುರಿತು ಪುನೀತ್ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಇರುವುದು ನಿಜ. ಅವರಿಂದಲೇ ಸೋಷಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ದೊಡ್ಡ ಸುದ್ದಿ ಆಗುತ್ತಿದೆ. ಟೀಸರ್ ಯಾವಾಗ ಬರುತ್ತೆ ಎನ್ನುವ ಪ್ರಶ್ನೆಗಳು ನಿತ್ಯವೂ ಲೆಕ್ಕವಿಲ್ಲದಷ್ಟು ಬರುತ್ತಿವೆ.

ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

ಅವರಿಗೀಗ ಸೋಷಲ್ ಮೀಡಿಯಾದ ವೇದಿಕೆಯಿದೆ. ಹಾಗಾಗಿ ಕೇಳುತ್ತಿದ್ದಾರೆ. ಅದು ತಪ್ಪು ಕೂಡ ಅಲ್ಲ. ಆದರೆ ಸಿನಿಮಾ ನಿರ್ಮಾಣದ ವಸ್ತುಸ್ಥಿತಿ ಅಂದುಕೊಂಡಷ್ಟು ಸುಲಭವಲ್ಲ. ಆದಷ್ಟು ಬೇಗ ಟೀಸರ್ ಲಾಂಚ್ ಮಾಡಬೇಕು ಎನ್ನುವ ಸಿದ್ಧತೆಯಂತೂ ನಡೆದಿದೆ. ಅಭಿಮಾನಿಗಳನ್ನು ಬೇಸರ ಮಾಡಬಾರದೆಂದು ಒಮ್ಮೆ ಫೇಸ್‌ಬುಕ್ ಲೈವ್‌ನಲ್ಲೂ ಆ ಬಗ್ಗೆ ಮಾತನಾಡಿದ್ದೆ. ಆದರೆ ಅದು ಯಾವಾಗ, ಹೇಗೆ ಎನ್ನುವುದನ್ನು ನಿರ್ಧರಿಸುವುದು ನಿರ್ಮಾಪಕರು. ದಸರಾ ಹಬ್ಬಕ್ಕೆ ಲಾಂಚ್ ಮಾಡಿದ್ರೆ ಸೂಕ್ತ ಎನ್ನುವ ಅಭಿಪ್ರಾಯವೂ ಕೂಡ ಅವರಲ್ಲಿದೆ. ಬಹುತೇಕ ಅಂದೇ ಟೀಸರ್ ಬರುತ್ತೆ.

ಶೇ.65 ರಷ್ಟು ಚಿತ್ರೀಕರಣ ಆಗಿದೆ. ನಿಗದಿತ ಸಮಯಕ್ಕೆ ಶೂಟಿಂಗ್ ಮುಗಿಸಬೇಕು ಎನ್ನುವುದು ನನ್ನ ಮುಂದಿರುವ ಸವಾಲು. ಈಗ ಅದರಲ್ಲೇ ಬ್ಯುಸಿ ಆಗಿದ್ದೇವೆ. ಇದುವರೆಗೂ ಶೇ.65 ರಷ್ಟು ಭಾಗದ ಚಿತ್ರೀಕರಣ ನಡೆದಿದೆ. ನಿರ್ದೇಶಕನಾಗಿ ಇದುವರೆಗಿನ ನನಗೆ ನನ್ನ ಕೆಲಸ ತೃಪ್ತಿ ನೀಡಿದೆ.

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ಪುನೀತ್ ಸಹಕಾರ ಅದ್ಭುತ...: ಪುನೀತ್ ಅವರ ಜತೆಗೆ ಎರಡನೇ ಸಿನಿಮಾ. ‘ರಾಜಕುಮಾರ’ ಚಿತ್ರ ನಂತರ ಪುನೀತ್ ಅವರ ಜತೆಗೆ ಸಿನಿಮಾ ಮಾಡಬೇಕೆನ್ನುವ ಆಸೆ ನನಗೂ ಇತ್ತು. ಆದರೆ ಅಂತಹ ಅವಕಾಶ ಸಿಗಬೇಕಲ್ವಾ? ಆದರೂ ಸಿನಿಮಾ ಮಾಡಬೇಕು ಅಂತ ಓಡಾಡುತ್ತಿದ್ದ ದಿನಗಳಲ್ಲಿ ಮತ್ತೆ ಹೊಂಬಾಳೆ ಫಿಲಂಸ್ ಮೂಲಕವೇ ಈ ಅವಕಾಶ ಬಂತು. ಒಂದ್ರೀತಿ ಅದೃಷ್ಟ. ಪುನೀತ್ ಅವರ ಸಹಕಾರ ಅತ್ಯಾದ್ಭುತ.