ಬಿಜಿಯಾಗಿರೋ ನಟನಿಗೆ ಸಣ್ಣ ಸಣ್ಣ ವಿಚಾರಗಳೂ ಖುಷಿ ಕೊಡುತ್ತವೆ. ಸದ್ಯಕ್ಕೆ ಕಿಚ್ಚನಿಗೆ ಖುಷಿ ಕೊಟ್ಟಿರೋದು ಸಿನಿಮಾ ಅಲ್ಲ

ಕಿಚ್ಚ ಸುದೀಪ್ ಬಾಕ್ಸಾಫೀಸ್ ಬಹದ್ದೂರ್, ಹೆಬ್ಬುಲಿ ನಂತರ ದಿ ವಿಲನ್ ಸಿನಿಮಾ ಶೂಟಿಂಗ್ ನಲ್ಲಿ ಬಿಜಿ. ಇದರ ಜೊತೆ ಜೊತೆಗೆ ಬಿಗ್ ಬಾಸ್ ನಿರೂಪಣೆ ಸಿಸಿಎಲ್ ಪ್ರಾಕ್ಟೀಸ್​, ಹಾಲಿವುಡ್ ಸಿನಿಮಾ ಶೂಟಿಂಗ್ , ಪೈಲ್ವಾನ್ ಸಿನಿಮಾ ತಯಾರಿ ಎಲ್ಲವೂ ಒಟ್ಟೊಟ್ಟಿಗೆ ನಡೀತಿದೆ. ಇಷ್ಟು ಬಿಜಿಯಾಗಿರೋ ನಟನಿಗೆ ಸಣ್ಣ ಸಣ್ಣ ವಿಚಾರಗಳೂ ಖುಷಿ ಕೊಡುತ್ತವೆ. ಸದ್ಯಕ್ಕೆ ಕಿಚ್ಚನಿಗೆ ಖುಷಿ ಕೊಟ್ಟಿರೋದು ಸಿನಿಮಾ ಅಲ್ಲ ಬದಲಿಗೆ ಪತ್ನಿ ಪ್ರಿಯಾರಿಂದ ಗುಡ್​ನ್ಯೂಸ್​ ಬಂದಿದೆ.

ಸ್ಯಾಂಡಲ್​ವುಡ್​ನ ಮುದ್ದಾದ ದಂಪತಿಗಳಲ್ಲಿ ಕಿಚ್ಚ ಸುದೀಪ್ ಪ್ರಿಯಾ ಧರ್ಮಪತಿಯ ಜೋಡಿಯೂ ಒಂದು. ಲೈಪಲ್ಲಿ ಎಲ್ಲ ಸಮಸ್ಯೆ ಬಗೆಹರಿಸಿಕೊಂಡು ಮತ್ತೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ಗಂಡ ಹೆಂಡತಿ ಅಂದ್ರೆ ಹೀಗೆ ಇರಬೇಕು ಎನ್ನುವಂತೆ ಒಬ್ಬರಿಗೊಬ್ಬರು ಸಂತಸ ಸಂಭ್ರಮ ಶುಭಾಶಯ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಾರೆ. ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗಿ ಬರುತ್ತಾರೆ.

ಪ್ರಿಯಾ ಸುದೀಪ್ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗಷ್ಟೆ ಪ್ರಿಯಾ ಸುದೀಪ್ ಟ್ವಿಟ್ಟರ್ ಎಂಟ್ರಿ ಪಡೆದಿದ್ದು ಇಷ್ಟು ಬೇಗ 50 ಸಾವಿರ ಫಾಲೋವರ್ಸ್​​ನ್ನು ಗಳಿಸಿದ್ದಾರೆ. ಈ ಬಗ್ಗೆ ಕಿಚ್ಚ ಸುದಿಪ್ ರಿಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಲ್ಲದೆ. ಈ ಬಗ್ಗೆ ನಂಗೂ ತುಂಬಾ ಖುಷಿಯಾಗ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಜಿವನದಲ್ಲಿ ಕೆಲವೊಮ್ಮ ಸಣ್ಣ ಸಣ್ಣ ವಿಚಾರಗಳು ಅದೆಷ್ಟು ಖುಷಿಕೊಡುತ್ತೆ ಅನ್ನೋದಕ್ಕೆ ಪತ್ನಿಯ ಸಂತಸವನ್ನು ತನ್ನ ಖುಷಿಯಾಗಿ ಹಂಚಿಕೊಂಡ ಕಿಚ್ಚನ ಈ ಸಂದರ್ಭವೇ ಸಾಕ್ಷಿ.