ಬೆಂಗಳೂರು (ಜ.08):  ಕೆಜಿಎಫ್ ಕಿಂಗ್ ರಾಕಿಭಾಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಯಶ್. 

ಯಶ್ ಮೂಲತಃ ಹಾಸನ ಜಿಲ್ಲೆಯ ಭುವನಹಳ್ಳಿಯವರು. ಜ.8, 1986 ರಲ್ಲಿ ಜನಿಸಿದ ಇವರು ಇಂದು 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಕೆಜಿಎಫ್-2 ರಿಲೀಸ್‌ ಯಾವಾಗ? ನಿರ್ಮಾಪಕ ಹೇಳುವುದೇನು?

ಯಶ್ ಹುಟ್ಟುಹಬ್ಬ ಆಚರಿಸಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಯಶ್.  ನಮ್ಮ ಕುಟುಂಬದ ಹಿರಿಯರಾದ ಅಂಬರೀಶ್ ಕೆಲ ದಿನಗಳ ಹಿಂದೆ ನಮ್ಮನ್ನಗಲಿದ್ದಾರೆ. ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ನಾನು ಬರ್ತಡೇ ಆಚರಿಸುತ್ತಿಲ್ಲ. ದಯವಿಟ್ಟು ಸಹಕರಿಸಿ ಎಂದು ಯಶ್ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.

 

 

ನಂಗೋಕುಲ ಧಾರಾವಾಹಿ ಮೂಲಕ ಮೊದಲ ಬಾರಿಗೆ ಅಭಿನಯಕ್ಕೆ ಪಾದಾರ್ಪಣೆ ಮಾಡಿದರು. ವಿಶೇಷ ಎಂದರೆ ಇದೇ ಧಾರಾವಾಹಿ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ರಾಧಿಕಾ ಪಂಡಿತ್ ಇವರ ಬಾಳ ಸಂಗಾತಿಯಾಗಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ವಿಶ್ ಮಾಡಿದ್ದು ಹೀಗೆ.

 

ಇದಪ್ಪಾ ಕೆಜಿಎಫ್ ಹವಾ! ಯಶ್ ಸಾಧನೆ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿದ ತಮಿಳು ನಟ

2008 ರಲ್ಲಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಟನಾಗಿ ಹೊರ ಹೊಮ್ಮಿದರು. ಈ ಚಿತ್ರ ಯಶ್ ಗೆ ಒಂದು ರೀತಿ ಟರ್ನಿಂಗ್ ಪಾಯಿಂಟ್ ಎಂದೇ ಹೇಳಬಹುದು. ನಂತರ ರಾಜಧಾನಿ, ಕಿರಾತಕ, ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಚಿತ್ರಗಳೂ ಸೂಪರ್ ಡೂಪರ್ ಹಿಟ್ ಆಗಿವೆ. ಇತ್ತೀಚಿಗೆ ಬಂದ ಕೆಜಿಎಫ್ ಯಶ್ ರನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದೆ. ಒಟ್ಟಿನಲ್ಲಿ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿದ್ದಾರೆ ಯಶ್.