ಕನ್ನಡದಲ್ಲಿ ಮತ್ತೊಂದು ಬಹುಭಾಷಾ ಹಾಗೂ ಬಹು ಕೋಟಿ ವೆಚ್ಚದಲ್ಲೊಂದು ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮುಗಿಸಿಕೊಂಡು ಈಗ ಅದರ ಟೀಸರ್ ಬಿಡುಗಡೆ ಮಾಡಿಕೊಂಡಿದೆ. 

ಚಿತ್ರದ ಹೆಸರು ‘ಸುವರ್ಣ ಸುಂದರಿ’. ತೆಲುಗು, ಕನ್ನಡದಲ್ಲಿ ಮೊದಲು ತೆರೆಕಂಡು ನಂತರ ತಮಿಳು ಹಾಗೂ ಹಿಂದಿಗೂ ಹೋಗಲಿರುವ ಈ ಚಿತ್ರವನ್ನು ನಿರ್ದೇಶಿಸಿರುವುದು ಎಂ.ಎಸ್.ಎನ್ ಸೂರ್ಯ. ವಿಶೇಷ ಅಂದರೆ ಡಾ ಜಯಪ್ರದಾ ಮತ್ತೊಮ್ಮೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ‘ಸುವರ್ಣ ಸುಂದರಿ’ ಚಿತ್ರದ ಮುಖ್ಯ ಪಾತ್ರಧಾರಿಯೇ ಅವರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆಲುಗಿನ ‘ಅರುಂಧತಿ’ ಮಾದರಿಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿದೆ. 10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು, 15 ನಿಮಿಷದ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರದ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸಾಯಿ ಕಾರ್ತಿಕ್ ಸಂಗೀತ, ಈಶ್ವರ್ ಛಾಯಾಗ್ರಹಣ ಇರುವ ಈ ಚಿತ್ರ ಸುಮಾರು 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಚಾರಿತ್ರಿಕ ಘಟನೆಗಳ ದರ್ಶನ ಮಾಡಿಸುತ್ತದೆ.