Asianet Suvarna News Asianet Suvarna News

ಪುನೀತ್ ಸಂಭಾವನೆ ಏರಿಕೆ ! ಇವರೆ ಕನ್ನಡದ ನಂ 1 ಹೀರೋ

'ರಾಜಕುಮಾರ' ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ಕೆರಿಯರ್'ನಲ್ಲಿ ದಾಖಲೆ ಬರೆದ ಸಿನಿಮಾ. ಯಶಸ್ವಿ 50 ದಿನಗಳನ್ನ ಪೂರೈಸಿ 100ನೇ ದಿನಗಳತ್ತ ಮುನ್ನುಗುತ್ತಿದೆ.

Sandalwood Gossip news
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಕ್ಲಾಸ್ ಅಂಡ್ ಮಾಸ್ ಹೀರೋ ಅಂತಾ ಬ್ರಾಂಡ್ ಆಗಿರೋ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಬೇಡಿಕೆ ಜೊತೆಗೆ ಸಂಭಾವನೆ ಕೂಡ ಹೆಚ್ಚಾಗಿದೆ. ಈ ಮೂಲಕ ಅವರು ಸ್ಯಾಂಡಲ್ ವುಡ್ ನಂ.1 ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ.

'ರಾಜಕುಮಾರ' ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ಕೆರಿಯರ್'ನಲ್ಲಿ ದಾಖಲೆ ಬರೆದ ಸಿನಿಮಾ. ಯಶಸ್ವಿ 50 ದಿನಗಳನ್ನ ಪೂರೈಸಿ 100ನೇ ದಿನಗಳತ್ತ ಮುನ್ನುಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 75 ಕೋಟಿ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆಯ ಸಿನಿಮಾ ಅನ್ನೋ ಹೆಗ್ಗಳಿಕೆ ಪಾತ್ರವಾಗಿದೆ.ಈ ಸಿನಿಮಾಕ್ಕೆ ಪುನೀತ್ ರಾಜ್ ಕುಮಾರ್ ಬರೋಬ್ಬರಿ ಆರುವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಅಂತಾ ಗಾಂಧಿನಗರದ ಸಿನಿಮಾ ಪಂಡಿತರ ಮಾತು.

ಅಂಜನೀಪುತ್ರಕ್ಕೆ ಅತೀ ಹೆಚ್ಚು ರೆಮ್ಯೂನಿರೇಷನ್ ?

ರಾಜಕುಮಾರ್ ಸೂಪರ್ ಹಿಟ್ ನಂತರ ಪುನೀತ್ ಮುಂದಿನ ಅಭಿನಯದ ಚಿತ್ರ ಆಂಜನೀಪುತ್ರ. ತಮಿಳಿನ ಪೂಜೈ ರಿಮೇಕ್. ಈ ಚಿತ್ರಕ್ಕೆ ಪವರ್ ಸ್ಟಾರ್ ಏಳು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.ಆದರೆ ನಿರ್ಮಾಪಕ ಎಂ.ಎನ್. ಕುಮಾರ್ ಅವರನ್ನು ಕೇಳಿದ್ರೆ ಇದು ಹಳೇ ಕಮಿಂಟ್'ಮೆಂಟ್ ಅಂತಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ ಕುಮಾರ್ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಏಕೈಕ ನಟರಾಗಿದ್ದಾರೆ.

Follow Us:
Download App:
  • android
  • ios