ನಿರ್ದೇಶಕ ಎಂ.ಡಿ. ಶ್ರೀಧರ್‌ ನಿರ್ಮಾಣದ ಹಾಸ್ಯ ಪ್ರಧಾನ ಚಿತ್ರ ‘ಎಂಆರ್‌ಪಿ’ಗೆ ನವರಸ ನಾಯಕ ಜಗ್ಗೇಶ್‌ ಬೆಂಬಲ ನೀಡಿದ್ದಾರೆ. ಚಿತ್ರದ ಆರಂಭ ಮತ್ತು ಅಂತ್ಯದಲ್ಲಿ ಬರುವ ಪ್ರಮುಖ ಹಿನ್ನೆಲೆ ಮಾತುಗಳಿಗೆ ಜಗ್ಗೇಶ್‌ ಧ್ವನಿ ನೀಡಿ, ಚಿತ್ರ ತಂಡದ ಬೆನ್ನಿಗೆ ನಿಂತಿದ್ದಾರೆ

ಜಗ್ಗೇಶ್‌ ಸ್ನೇಹ ಪೂರ್ವಕವಾಗಿ ಚಿತ್ರಕ್ಕೆ ಬೆಂಬಲ ನೀಡಿದ್ದಾರೆಂದು ಚಿತ್ರ ತಂಡ ಹೇಳಿದೆ. ‘ಜಗ್ಗೇಶ್‌ ಹೊಸಬರು, ಸ್ನೇಹಿತರು, ಆಪ್ತರ ಸಿನಿಮಾಗಳಿಗೆ ಬೆಂಬಲ ನೀಡುವುದು, ಪ್ರೋತ್ಸಾಹದ ಮಾತುಗಳನ್ನಾಡುವುದು ಹೊಸತಲ್ಲ.

ಈಗ ನಮ್ಮ ಚಿತ್ರಕ್ಕೂ ಸ್ನೇಹಪೂರ್ವಕವಾಗಿ ಹಿನ್ನೆಲೆ ಧ್ವನಿ ನೀಡಿದ್ದಾರೆ’ ಎಂದು ಚಿತ್ರದ ನಿರ್ಮಾಪಕ ಎಂ.ಡಿ. ಶ್ರೀಧರ್‌ ಹೇಳುತ್ತಾರೆ.

ಜಗ್ಗೇಶ್ ಹೇಳಿದ ಮಾತನ್ನು ಪ್ರೂವ್ ಮಾಡಿ ತೊಡೆ ತಟ್ಟಿದ ಡಿ-ಬಾಸ್!

ಎಂಆರ್‌ಪಿ ಅಂದ್ರೆ ಮೋಸ್ಟ್‌ ರೆಸ್ಪಾನ್ಸಿಬಲ್‌ ಪರ್ಸನ್‌ ಅಂತ. ಇದೊಂದು ಹಾಸ್ಯ ಪ್ರಧಾನ ಚಿತ್ರ. ಬಾಹುಬಲಿ ಇದರ ನಿರ್ದೇಶಕ. ಹಾಸ್ಯ ನಟ ಹರಿ ಇದರ ನಾಯಕ ನಟ. ಇದುವರೆಗೂ ಹಾಸ್ಯನಟರಾಗಿ ಸಣ್ಣ ಪುಟ್ಟಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹರಿ ಅವರಿಗೀಗ ನಾಯಕನಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನಿರ್ಮಾಣದಲ್ಲಿ ಎಂ.ಡಿ.ಶ್ರೀಧರ್‌ ಅವರಿಗೆ ಛಾಯಾಗ್ರಾಹಕ ಕೃಷ್ಣ ಕುಮಾರ್‌ ಹಾಗೂ ರಂಗಸ್ವಾಮಿ ಸಾಥ್‌ ನೀಡಿದ್ದಾರೆ.