ಅದು ಹೇಗೆ ಎಂಬುದನ್ನು ಹೇಳುವ ಪ್ರಯತ್ನವಾಗಿ ‘ಅಮೃತ್‌ ಅಪಾರ್ಟ್‌ಮೆಂಟ್‌’ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ. ಅದರ ಪತ್ರಿಕಾಗೋಷ್ಟಿಯ ಹೈಲೈಟ್‌ಗಳು ಹೀಗಿವೆ...

1. ತಾರಕ್‌ ಪೊನ್ನಪ್ಪ ಹಾಗೂ ಊರ್ವಶಿ ಗೋವರ್ಧನ್‌ ಈ ಚಿತ್ರದ ಜೋಡಿ. ಮಾನಸ ಜೋಷಿ ಇಲ್ಲಿ ಪೊಲೀಸ್‌ ಅಧಿಕಾರಿ. ಸೀತಾ ಕೋಟೆ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಬರೀಶ್‌ ಅವರ ಅಭಿಮಾನಿಯಾಗಿ ಆಟೋ ಚಾಲನಕನ ಪಾತ್ರದಲ್ಲಿ ಬಾಲಾಜಿ ಮನೋಹರ್‌ ನಟನೆ ಇದೆ. ಸಂಪತ್‌ ಕುಮಾರ್‌, ಸೀತಾರಾ, ಜಗದೀಶ್‌, ಶ್ರವಣ್‌ ಐತತಾಳ್‌, ಅರುಣಮೂರ್ತಿ, ರಾಜುನೀನಾಸಂ, ಶಂಕರ್‌ ಚಿತ್ರದ ಉಳಿದ ಮುಖ್ಯ ಪಾತ್ರದಾರಿಗಳು.

ಸಿನಿ ಜಗತ್ತಿಗೆ ಕಾಲಿಟ್ಟ ವಿನಯಪ್ರಸಾದ್‌ ಕುಟುಂಬದ ಕುಡಿ!

2. ಬೆಂಗಳೂರಿನ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಟೆಕ್ಕಿ ದಂಪತಿಯ ನಡುವೆ ವೈಮನಸ್ಸು ಉಂಟಾಗುತ್ತಿದೆ. ಇದರಿಂದ ಸಾಕಷ್ಟುಸಮಸ್ಯೆಗಳು ಎದುರಾಗಿ ಮುಂದೆ ಅವರು ಡಿವೋರ್ಸ್‌ಗೆ ಹೋಗುತ್ತಾರೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕತೆ. ಮೈಸೂರಿನ ಶುದ್ದ ಸಸ್ಯಹಾರಿ ನಾಯಕ. ಉತ್ತರ ಭಾರತದ ಮಾಂಸಹಾರಿ ನಾಯಕಿ ನಡುವಿನ ಕತೆ ಇದು. ಇಲ್ಲಿ ನಡೆಯುವ ಘಟನೆಯನ್ನು ತನಿಖೆ ಮಾಡಲು ಹೊರಟಾಗ ಸಿನಿಮಾ ತೆರೆದುಕೊಳ್ಳುತ್ತದೆ.

‘ಕುರುಕ್ಷೇತ್ರ 3 ದಶಕದ ಹಿಂದೆ ಬಂದಿದ್ದರೆ ಅಣ್ಣಾವ್ರೇ ಸುಯೋಧನ’!

3. ಕತೆಗೆ ಪೂರಕವಾಗಿ ಬೆಂಗಳೂರು ಸುತ್ತಮುತ್ತ ಅರವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜಿ9 ಕಮ್ಯೂನಿಕೇಷನ್‌, ಮಿಡೀಯಾ ಅಂಡ್‌ ಎಂಟರ್‌ಟೈನ್‌ಮೆಂಟ್‌ ಮೂಲಕ ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಜತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ.

‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

4. ಸಿನಿಮಾ ತಾಂತ್ರಿಕವಾಗಿಯೂ ಚೆನ್ನಾಗಿ ಮೂಡಿ ಬರಲಿದೆಯಂತೆ. ಅಲ್ಲದೆ ಎಸ್‌.ಡಿ.ಅರವಿಂದ್‌ ಸಂಗೀತ ಸಂಯೋಜಿಸಿದ್ದಾರೆ, ಛಾಯಾಗ್ರಹಣ ಅರ್ಜುನ್‌ ಅಜಿತ್‌, ಸಂಕಲನ ಕೆಂಪರಾಜಅರಸ್‌ ಅವರದಾಗಿದೆ.