Asianet Suvarna News Asianet Suvarna News

ಎ ಪ್ಲಸ್ , ಇದು ಉಪ್ಪಿ ಶಿಷ್ಯನ ಚಿತ್ರ

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ‘ಎ’ ಸಿನಿಮಾ ನೆನಪಿಸುವ ಹಾಗೆ ‘ಎ ಪ್ಲಸ್’ ಹೆಸರಿನಲ್ಲೇ ನಿರ್ಮಾಣವಾದ ಚಿತ್ರ.

Sandalwood film A plus released on 5 October
Author
Bengaluru, First Published Oct 5, 2018, 11:22 AM IST
  • Facebook
  • Twitter
  • Whatsapp

ವಿಜಯ್ ಸೂರ್ಯ ಇದರ ನಿರ್ದೇಶಕ. ಇವರು ಉಪೇಂದ್ರ ಶಿಷ್ಯ. ಹಲವು ವರ್ಷಗಳ ಕಾಲ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದರಂತೆ. ಅವರೇ ಈಗ ಸ್ವತಂತ್ರ ನಿರ್ದೇಶಕರಾಗಿ ‘ಎ ಪ್ಲಸ್’ ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗಂತ
‘ಎ’ಚಿತ್ರಕ್ಕೂ ‘ಎ ಪ್ಲಸ್’ಗೂ ಯಾವುದೇ ಲಿಂಕ್ ಇಲ್ಲ. ಆದರೂ ಈ ಚಿತ್ರದಲ್ಲಿ ಉಪೇಂದ್ರ ಇದ್ದಾರೆ. ಅದು ಹೇಗೆ ಅನ್ನೋದಕ್ಕೆ ಚಿತ್ರ ನೋಡಿದರೆ ಗೊತ್ತಾಗುತ್ತೆ ಅಂತಾರೆ ನಿರ್ದೇಶಕರು.

ಸಿದ್ದು ಈ ಚಿತ್ರದ ನಾಯಕ. ಕಿರುತೆರೆ ನಟಿ ಸಂಗೀತಾ ಇದರ ನಾಯಕಿ. ಅವರ ಸಿನಿಜರ್ನಿ ಇಲ್ಲಿಂದ ಶುರುವಾಗುತ್ತಿದೆ.ನಿರ್ದೇಶಕ ವಿಜಯ್ ಸೂರ್ಯ ಅವರೇ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗಣೇಶ್ ನಾರಾಯಣನ್ ಸಂಗೀತ ನೀಡಿದ್ದಾರೆ. ಭೂಪೇಂದರ್ ಸಿಂಗ್ ರೈನ ಛಾಯಾಗ್ರಹಣವಿದೆ.

Follow Us:
Download App:
  • android
  • ios