ಸಂಬಂಧಿಕರು ಮತ್ತು ಆಪ್ತರಿಗೆ ಮಾತ್ರ ಆಹ್ವಾನಿಸಲಾಗಿದ್ದ ಕಾರ್ಯಕ್ರಮದಲ್ಲಿ ನೆಚ್ಚಿನ ನಟರನ್ನ ನೋಡಲು ಅಪಾರ ಅಭಿಮಾನಿಗಳು ಮುಗಿಬಿದ್ದಿದ್ದರು.
ಬಳ್ಳಾರಿ(ನ.27): ಸ್ಯಾಂಡಲ್'ವುಡ್ನ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್, ಬಳ್ಳಾರಿ ಮೂಲದ ಹೋಟೆಲ್ ಉದ್ಯಮಿ ಶ್ರೀನಿವಾಸ್ ರಾವ್ ಪುತ್ರಿ ಸುರಭಿ ಎಂಬ ಯುವತಿಯೊಂದಿಗೆ ಅದ್ಧೂರಿ ನಿಶ್ಚಿತಾರ್ಥಕಾರ್ಯಕ್ರಮ ನಡೆಯಿತು. ನಗರದ ಹೊರವಲಯದಲ್ಲಿರುವ ಅಲ್ಲಂ ವಿಟ್ಸ್ ಕಲ್ಯಾಣ ಮಂಠಪದಲ್ಲಿ ಶಾಸ್ತ್ರೋಪ್ತವಾಗಿ ನಡೆದ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್'ನ ಪವರ್'ಸ್ಟಾರ್ ಪುನೀತ್ ಸೇರಿದಂತೆ ಯಶ್,ರಾಧೀಕಾ ಪಂಡಿತ್ ದಂಪತಿಗಳು ಆಗಮಿಸಿ ಹಾರೈಸಿದರು. ಸಂಬಂಧಿಕರು ಮತ್ತು ಆಪ್ತರಿಗೆ ಮಾತ್ರ ಆಹ್ವಾನಿಸಲಾಗಿದ್ದ ಕಾರ್ಯಕ್ರಮದಲ್ಲಿ ನೆಚ್ಚಿನ ನಟರನ್ನ ನೋಡಲು ಅಪಾರ ಅಭಿಮಾನಿಗಳು ಮುಗಿಬಿದ್ದಿದ್ದರು.
ರಾಮಾಚಾರಿ, ರಾಜಕುಮಾರ್ ಹಿಟ್ ಚಿತ್ರ ನೀಡಿದ ನಿರ್ದೇಶಕ ಸಂತೋಷ್ ಆನಂದ ರಾಮ್ ಮತ್ತು ಸುರಭಿ ನಿಶ್ಚಿತಾರ್ಥವಾಗುವ ಆಗುವ ಮೂಲಕ ತಮ್ಮ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬರುವ ಫೆಬ್ರವರಿ 20,21ರಂದು ಬೆಂಗಳೂರಿನಲ್ಲಿ ವಿವಾಹ ನಡೆಯಲಿದೆ.
