ಇದು ಯುವ ಮನಸ್ಸಿನ ಪುರಾಣ ಎನ್ನುವ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಹೊಸಬರ ಚಿತ್ರ.
ಸಂಕಲನಕಾರ ಹಾಗೂ ಕಿರುಚಿತ್ರಗಳ ನಿರ್ದೇಶಕ ಮೋಹನ್ ಕಾಮಾಕ್ಷಿ ನಿರ್ದೇಶಿಸಿದ ಮೊದಲ ಚಿತ್ರ. ಶಮಂತ್ ಇದರ ನಿರ್ಮಾಪಕರು. ಚಿತ್ರದ ನಾಯಕ ನಟ ಶಶಾಂಕ್, ನಾಯಕಿಯರಾದ ಅಹಲ್ಯ ಸುರೇಶ್ ಹಾಗೂ ಮೋಕ್ಷ ಕುಶಾಲ್‌ಗೆ ಇದು ಮೊದಲ ಚಿತ್ರ. ಆದಿ ಪುರಾಣದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿರುವ ಅವರಿಗೆ ಇದು ಭದ್ರವಾಗಿ ನೆಲೆ ಕಂಡುಕೊಳ್ಳಲು ಕಾರಣವಾಗುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ಕ್ಯಾಮರಾ ಹಿಡಿದಿದ್ದಾರೆ.
ವಿಕ್ರಮ್ ವಶಿಷ್ಟ, ಚಂದನ್ ವಶಿಷ್ಟ ಹಾಗೂ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕವಿರಾಜ್, ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯವಿದೆ. ಹೊಸಬರ ಜತೆಗೆ ಅನುಭವಿ ನಟರಾಗಿ ರಂಗಾಯಣ ರಘು, ನಾಗೇಂದ್ರ ಶಾ, ಕರಿ ಸುಬ್ಬು, ಡಾ. ವತ್ಸಲಾ ಮೋಹನ್ ಮತ್ತಿತರರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
