ಸಿನಿ ತಾರೆಯರ ಮನೆಯಲ್ಲಿ ಗೌರಿ-ಗಣೇಶ ಹಬ್ಬ!
ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಸಿನಿ ತಾರೆಯರು ತಮ್ಮ ಹಬ್ಬದ ದಿನ ಹೇಗಿರುತ್ತದೆ ಎಂದು ಮಾತನಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಸೆಲಬ್ರೇಟ್ ಮಾಡುತ್ತಾರೆ ಇಲ್ಲಿದೆ ನೋಡಿ.
ಬೆಳಿಗ್ಗೆ ಗೌರಿ ಪೂಜೆ ಮಧ್ಯಾಹ್ನ ಗಣೇಶ ಸಂಭ್ರಮ!
ಸೋನು ಗೌಡ
ಈ ಬಾರಿ ನನಗೆ ಗಣೇಶ ಹಬ್ಬದ ಸಂಭ್ರಮ ಹೆಚ್ಚಾಗಿದೆ. ಯಾಕೆಂದರೆ ಉಪೇಂದ್ರ ಅವರೊಂದಿಗೆ ನಟಿಸಿದ್ದ ‘ಐಲವ್ಯು’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಟ್ಟಿದ್ದು ಹಾಗೂ ಪುನೀತ್ ರಾಜ್‌ಕುಮಾರ್ ಅವರೊಂದಿಗೆ‘ಯುವರತ್ನ’ ಚಿತ್ರದಲ್ಲಿ ನಟಿಸುತ್ತಿರು ವುದು. ಒಂದು ಸಿನಿಮಾ ಈಗಾಗಲೇ ತೆರೆ ಕಂಡು ನಟಿಯಾಗಿ ನನಗೆ ದೊಡ್ಡ ಪ್ಲಾಟ್ ಫಾರಂ ಕೊಟ್ಟರೆ, ಅದೇ ನಿರೀಕ್ಷೆಯನ್ನು ಮೂಡಿಸುತ್ತಿರುವುದು‘ಯುವರತ್ನ’ ಸಿನಿಮಾ. ಜವಾಬ್ದಾರಿಯುತ ಮಹಿಳಾ ಪಾತ್ರ
ನನ್ನದು. ಇವೆರಡು ಈ ವರ್ಷದ ಗಣಪತಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಗಣಪನ ನೈವೇದ್ಯಕ್ಕೆ ಹೀಗೆಲ್ಲ ಮಾಡ್ಬಹುದು ಮೋದಕ!
ಇನ್ನೂ ಹಬ್ಬದ ವಿಚಾರಕ್ಕೆ ಬಂದರೆ ಹಬ್ಬದಲ್ಲಿ ಮಾಡಬೇಕಾದ ಎಲ್ಲವನ್ನೂ ಮಾಡುತ್ತೇವೆ. ಆದರೆ, ಗಣೇಶ ಮೂರ್ತಿಯನ್ನು ಕೂರಿಸಲ್ಲ. ಪರಿಸರ ಕಾಳಜಿ ಮತ್ತು ಅದರ ರಕ್ಷಣೆಯಿಂದ ತೆಗೆದುಕೊಂಡಿರುವ ನಿರ್ಧಾರ ಇದು. ಮಾಮೂಲಿ ಗಣೇಶ ಸೇರಿದಂತೆ ಕೆಮಿಕಲ್ ಬಣ್ಣ ಬಳಿದಿರುವ ಗಣೇಶನನ್ನೂ ಮನೆಗೆ ತರಲ್ಲ. ಆದರೆ, ಭಕ್ತಿಯಿಂದ ಗಣೇಶನ ಫೋಟೋಗೆ ಪೂಜೆ ಮಾಡುತ್ತೇವೆ. ಯಾವತ್ತೂ ಮಾಡದಿರುವ ಕಡುಬು ಹಬ್ಬದ ವಿಶೇಷ ಅಡುಗೆಯಾಗಿ ಮಾಡುತ್ತೇವೆ. ತುಂಬಾ ಸರಳವಾಗಿ ಹಬ್ಬ ಮಾಡಿಕೊಳ್ಳುವುದು ನಮ್ಮ ಮನೆಯ ವಿಶೇಷತೆ. ಬೆಳಗ್ಗೆ ಗೌರಿ ಪೂಜೆ, ಮಧ್ಯಾಹ್ನ ಗಣೇಶ ಸಂಭ್ರಮ.
ಅಮ್ಮನ ಮನೆಯಲ್ಲೇ ಹಬ್ಬ
ತಾರಾ
ಈ ಬಾರಿ ಗೌರಿ ಮತ್ತು ಗಣೇಶ ಹಬ್ಬ ಎರಡೂ ಒಟ್ಟಿಗೆ ಬಂದಿದೆ. ಸಾಮಾನ್ಯವಾಗಿ ಗೌರಿ ಹಬ್ಬಕ್ಕ ನಾನು ತವರು ಮನೆಗೆ ಹೋಗುತ್ತಿದ್ದೆ. ಪ್ರತಿ ವರ್ಷ ಹೀಗೆ ಇತ್ತು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಅಮ್ಮನ ಮನೆಗೆ ಹೋಗಿ ಅಲ್ಲೇ ಇಡೀ ದಿನ ಇದ್ದು, ಗೌರಿ ಪೂಜೆ ಮುಗಿಸಿಕೊಂಡು ಬಂದು ಮನೆಯಲ್ಲಿ ಗಣೇಶ ಪೂಜೆ ಮಾಡುತ್ತಿದ್ದೆ. ಈ ಬಾರಿ ಎರಡೂ ಒಟ್ಟಿಗೆ ಬಂದಿದೆ. ಹೀಗಾಗಿ ಕುಟುಂಬ ಸಮೇತರಾಗಿ ಅಮ್ಮನ ಮನೆಗೆ ಹೋಗುತ್ತಿದ್ದೇವೆ. ಅಲ್ಲೇ ಗೌರಿ ಮತ್ತು ಗಣೇಶನ ಹಬ್ಬ ಮಾಡುತ್ತಿದ್ದೇವೆ. ಹೆಚ್ಚು ಸಮಯ ಅಮ್ಮನ ಮನೆಯಲ್ಲಿರುವುದೇ ಖುಷಿ ಮತ್ತು ಹಬ್ಬ. ಬಣ್ಣ ಇಲ್ಲದೆ, ಪರಿಸರಕ್ಕೆ ಹಾನಿಯಾಗದಂತಹ ಮಣ್ಣಿನ ಗಣೇಶನನ್ನು ಮನೆಯಲ್ಲಿ ಕೂರಿಸುತ್ತಿದ್ದೇವೆ. ಪರಿಸರ ರಕ್ಷಣ ನಮ್ಮೆಲ್ಲರ ಜವಾಬ್ದಾರಿ ಕೂಡ. ತವರು ಮನೆಯಲ್ಲಿ ಹಬ್ಬ ಮಾಡುತ್ತಿರುವುದೇ ಸಂತಸ.
ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ಅಂಗಳದಲ್ಲಿಟ್ಟರೆ ಬೆಳೆಯುತ್ತದೆ ಸಸಿ!
ಮೋದಕ ನಂಗಿಷ್ಟ
ಪೂಜಾ ಗಾಂಧಿ
ನಾನು ಅತ್ಯಂತ ವಿಜೃಂಭಣೆಯಿಂದ ನೋಡಿ ಹಬ್ಬ ಗಣೇಶ. ಯಾಕೆಂದರೆ ನಾನು ಇದ್ದಿದ್ದು ಮುಂಬೈನಲ್ಲಿ. ನಿಮಗೇ ಗೊತ್ತಿದೆ ಅಲ್ಲಿ ಗಣೇಶ ಹಬ್ಬ ಎಷ್ಟು ಜೋರಾಗಿ ಮಾಡುತ್ತಾರೆ ಎಂಬುದು. ಗಣೇಶ ಚತುರ್ಥಿ ಸಂಭ್ರಮ ಮುಂಬೈ ನಗರಿಯ ಸಿಗ್ನೇಚರ್ ಇದ್ದಂತೆ. ಬೆಂಗಳೂರಿಗೆ ಬಂದ ಮೇಲೆ ಅಷ್ಟು ದೊಡ್ಡ ಮಟ್ಟದಲ್ಲಿ ನಾವು ಮಾಡಲಿಕ್ಕೆ ಆಗಲಿಲ್ಲ. ನನಗೆ ಗಣೇಶ ಬಬ್ಬ ಎಂದಾಗ ನೆನಪಾಗುವುದು ಕಡುಬು. ನಾವು ಅದನ್ನು ಮೋದಕ್ ಎನ್ನುತ್ತೇವೆ. ಇದು ನನ್ನ ಅಚ್ಚುಮೆಚ್ಚಿನ
ಸಿಹಿ. ಹಬ್ಬದ ದಿನ ಇದನ್ನು ಮಾಡುತ್ತೇವೆ. ಈ ಬಾರಿಯೂ ತೀರಾ ಸರಳವಾಗಿ ಹಬ್ಬ ಮಾಡಬೇಕಿದೆ. ಅಥವಾ ಸ್ನೇಹಿತರ ಮನೆಗೆ ಹೋಗಬೇಕು. ಯಾಕೆಂದರೆ ನಮ್ಮ ತಾಯಿಗೆ ಹುಷಾರಿಲ್ಲ. ಆದರೆ, ಗಣೇಶನನ್ನು ಕೂರಿಸದಿದ್ದರೂ ಮನೆಯಲ್ಲಿ
ಹಬ್ಬದ ವಾತಾವರಣ ಇರುತ್ತದೆ.